ಇಸ್ಲಾಮಾಬಾದ್ : ಭ್ರಷ್ಟಾಚಾರ ಹಗರಣದಲ್ಲಿ ಬಂಧಿತರಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಮ್ ನವಾಜ್, ಜೈಲಿನಲ್ಲಿ ತಮಗೆ ನೀಡಲಾಗಿರುವ ಕೆಲವು ಸವಲತ್ತುಗಳನ್ನು ನಿರಾಕರಿಸಿದ್ದಾರೆ.

ಪದಚ್ಯುತ ಪ್ರಧಾನಿಯೊಬ್ಬರ ಪುತ್ರಿಯಾಗಿರುವ ಮರಿಯಮ್ ಅವರು ಜೈಲಿನಲ್ಲಿ ‘ಬಿ ದರ್ಜೆ’ ಸವಲತ್ತು ಪಡೆಯಲು ಅರ್ಹರಿದ್ದಾರೆ. ಹಾಸಿಗೆ, ಟೇಬಲ್, ಕುರ್ಚಿ, ಸೀಲಿಂಗ್ ಫ್ಯಾನ್, 21 ಇಂಚಿನ ಟಿವಿ ಹಾಗೂ ದಿನಪತ್ರಿಕೆಯನ್ನು ತಮ್ಮದೇ ವೆಚ್ಚದಲ್ಲಿ ಪಡೆಯಲು ಅವಕಾಶ ಇದೆ.

ಈ ಎಲ್ಲ ಸವಲತ್ತುಗಳನ್ನು ನಿರಾಕರಿಸಿ, ಈ ಸಂಬಂಧ ಅವರು ಬರೆದಿರುವ ಕೈಬರಹದ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

‘ಜೈಲು ಅಧಿಕಾರಿಗಳು ನನಗೆ ಉತ್ತಮ ದರ್ಜೆಯ ಸವಲತ್ತುಗಳನ್ನು ಕೊಡುವುದಾಗಿ ಹೇಳಿದ್ದರೂ, ನಾನು ಅವುಗಳನ್ನು ನಿರಾಕರಿಸಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ. ಈ ಸಂಬಂಧ ನನ್ನ ಮೇಲೆ ಯಾರ ಒತ್ತಡವೂ ಇಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.