ಕೊಲಂಬೊ: ದೇಶದ ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿ ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಲಂಕಾದ ಮಾಜಿ ಕ್ರಿಕೆಟ್ ಆಟಗಾರರಾದ ಅರ್ಜುನ ರಣತುಂಗ ಮತ್ತು ಸನತ್ ಜಯಸೂರ್ಯ ಅವರು ಪಾಲ್ಗೊಂಡಿದ್ದಾರೆ.

ಅಧ್ಯಕ್ಷ ಗೊಟಬಾಯ ರಾಜಪಕ್ಸ ನಿವಾಸದ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ರಣತುಂಗ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿದ ನಮ್ಮ ಅಭಿಮಾನಿಗಳು ಇಂದು ಬೀದಿಯಲ್ಲಿದ್ದಾರೆ. ಅವರ ಸಂಕಷ್ಟದ ಈ ಅವಧಿಯಲ್ಲಿ ನಾವು ಅವರ ಜೊತೆಗಿರಬೇಕು. ಕ್ರೀಡಾ ಸ್ಟಾರ್ಗಳು ಪ್ರತಿಭಟನೆಯಲ್ಲಿ ದೈಹಿಕವಾಗಿ ಭಾಗಿಯಾಗಬೇಕು ಎಂದರು.

ಸನತ್ ಜಯಸೂರ್ಯ ಅವರು ರಾಜಪಕ್ಸ ಅವರ ನಿವಾಸದ ಎದುರಿಗಿದ್ದ ಬ್ಯಾರಿಕೇಡ್ಗಳನ್ನು ಹತ್ತಿ ಪ್ರತಿಭಟನಕಾರರ ಜೊತೆಗಿರುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.