ಕೊಲಂಬೊ: ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಾತ್ಕಾಲಿಕ ಆಶ್ರಯ ಬಯಸಿ ಗುರುವಾರ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈ ಬಗ್ಗೆ ಶ್ರೀಲಂಕಾ ವಿದೇಶಾಂಗ ಸಚಿವಾಲಯ ಯಾವುದೇ ಮಾಹಿತಿ ನೀಡಿಲ್ಲ. ದೇಶದ ಆರ್ಥಿಕ ಬಿಕ್ಕಟ್ಟಿಗೆ ಗೊಟಬಯ ರಾಜಪಕ್ಸ ಅವರೇ ಕಾರಣ ಎಂದು ಜನರು ದಂಗೆ ಎದ್ದ ನಂತರ ಗೊಟಬಯ ಅವರು ದೇಶಬಿಟ್ಟು ಮಾಲ್ಡೀವ್ಸ್ಗೆ ತೆರಳಿದ್ದರು. ಅಲ್ಲಿಂದ ಜುಲೈ 14ರಂದು ಸಿಂಗಪುರಕ್ಕೆ ತೆರಳಿದ್ದರು.

ಪ್ರತಿಭಟನೆ ಅಂತ್ಯ:

ಶ್ರೀಲಂಕಾ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯು 123 ದಿನಗಳ ಬಳಿಕ ಮಂಗಳವಾರ ಅಂತ್ಯಗೊಂಡಿದೆ. ಪ್ರತಿಭಟನಕಾರರುಗಾಲೆಫೇಸ್ ಪ್ರೊಮೆನೇಡ್ನಿಂದ ತೆರಳಿದ್ದಾರೆ. ಏಪ್ರಿಲ್ 9ರಿಂದ ‘ರಾಜಪಕ್ಸ ಮನೆಗೆ ಹೋಗಿ’ ಎಂದು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಮಹಿಂದ ರಾಜಪಕ್ಸ ವಿದೇಶ ಪ್ರಯಾಣ ನಿರ್ಬಂಧ ಅವಧಿ ವಿಸ್ತರಣೆ

‘ಗಾಲೆ ಫೇಸ್ ಸ್ಥಳದಿಂದ ನಿರ್ಗಮಿಸಲು ನಿರ್ಧರಿಸಿದ್ದೇವೆ. ಆದರೆ ನಮ್ಮ ಹೋರಾಟ ನಿಲ್ಲಿಸಿದ್ದೇವೆ ಎಂದರ್ಥವಲ್ಲ. ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಸರ್ಕಾರಿ ವಿರೋಧಿ ಪ್ರತಿಭಟನೆಯ ಗುಂಪಿನ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.