ವಾಷಿಂಗ್ಟನ್: ಮೆಂಫಿಸ್ ನಗರದ ನ್ಯಾಷನಲ್ ಸಿವಿಲ್ ರೈಟ್ಸ್ ಮೂಸಿಯಂ, ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರಿಗೆ ‘ದಿ ಎಮಿಸರಿ ಆಫ್ ಪೀಸ್‘ (ಶಾಂತಿಯ ರಾಯಭಾರಿ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

‘ಜಾಗತಿಕ ಮಾನವತಾವಾದಿಯಾಗಿರುವ ನೀವು ಜಗತ್ತಿನ 180 ದೇಶಗಳ ಕೋಟಿ ಕೋಟಿ ಜನರನ್ನು ತಲುಪಿದ್ದೀರಿ. ಹಾಗೂ ಯುದ್ಧವನ್ನು ತಡೆಯಲು ನೀವು ಪ್ರತಿಪಾದಿಸುವ ಉಪಕ್ರಮಗಳಿಗಾಗಿ ನಾವು ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ’ ಎಂದು ಮ್ಯೂಸಿಯಂನ ನಿರ್ದೇಶಕಿ ಶೈಲಾ ಕರ್ಕೇರ ಅವರು ಹೇಳಿದರು.

ಶ್ರೀ ಶ್ರೀ ರವಿಶಂಕರ್ ಅವರು‘ಐ ಸ್ಟ್ಯಾಂಡ್ ಫಾರ್ ಪೀಸ್’ ಎನ್ನುವ ಜಾಗತಿಕ ಪ್ರಯಾಣವನ್ನು ಕೈಗೊಂಡಿದ್ದಾರೆ. ಈ ಪ್ರಯಾಣದ ಭಾಗವಾಗಿ ಅವರು ಸೋಮವಾರ ಮೆಂಫಿಸ್ ನಗರವನ್ನು ತಲುಪಿದ್ದರು.

ನವೆಂಬರ್ ಮೊದಲ ವಾರ ಅಟ್ಲಾಂಟಾದಲ್ಲಿ ಗುರೂಜಿ ಅವರಿಗೆ ’ಗಾಂಧಿ ಪೀಸ್ ಪಿಲಿಗ್ರಿಮ್’ ಪ್ರಶಸ್ತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.