ಸ್ಟಾಕ್ಹೋಮ್: ವಿಶ್ವದ ಬೃಹತ್ ಮಿಲಿಟರಿ ಒಕ್ಕೂಟ ‘ನ್ಯಾಟೊ’ದ ಸದಸ್ಯತ್ವ ಪಡೆಯಲು ಸಹಾಯ ಮಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮತ್ತು ನ್ಯಾಟೊದ ಮಾಜಿ ಕಾರ್ಯದರ್ಶಿ ಜನರಲ್ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಅವರಿಗೆ ಉನ್ನತ ಪುರಸ್ಕಾರ ನೀಡಲು ಸ್ವೀಡನ್ ನಿರ್ಧರಿಸಿದೆ.

ಸ್ವೀಡನ್ ಹಿತಾಸಕ್ತಿಗೆ ಸಹಕರಿಸುವ ವಿದೇಶಿ ನಾಗರಿಕರು ಅಥವಾ ಪ್ರಸಿದ್ಧ ವ್ಯಕ್ತಿಗಳಿಗೆ ಸ್ವೀಡನ್ ‘ಪೋಲರ್ ಸ್ಟಾರ್’ ಪುರಸ್ಕಾರವನ್ನು ನೀಡುತ್ತದೆ. ಈ ಬಾರಿ ಬ್ಲಿಂಕೆನ್, ಸ್ಟಾಲ್ಟನ್ ಬರ್ಗ್, ಫಿನ್ಲೆಂಡ್ನ ಮಾಜಿ ಪ್ರಧಾನಿ ಸನ್ನಾ ಮರೀನ್ ಮತ್ತು ಮಾಜಿ ವಿದೇಶಾಂಗ ಸಚಿವ ಪೆಕ್ಕ ಹಾವಿಸ್ಟೊ ಅವರು ಈ ಪುರಸ್ಕಾರವನ್ನು ಪಡೆಯಲಿದ್ದಾರೆ.

‘ಗೌರವ ಪುರಸ್ಕಾರ ನೀಡುವ ಮೂಲಕ, ನ್ಯಾಟೊ ಸದಸ್ಯತ್ವ ಪಡೆಯಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಲಿದ್ದೇವೆ’ ಎಂದು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಮಂಗಳವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.