ವಾಷಿಂಗ್ಟನ್: ‘ಇರಾನ್ ಜತೆ ಯುದ್ಧ ಮಾಡುವುದು ಒಳ್ಳೆಯದಲ್ಲ. ನಾನು ಶಾಂತಿ ಬಯಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಬಾಗ್ದಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿಯನ್ನು ಮಂಗಳವಾರ ಧ್ವಂಸಗೊಳಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಯುದ್ಧವು ಉತ್ತಮ ಯೋಚನೆ ಅಲ್ಲ. ಆದರೆ, ಈ ಘಟನೆಗೆ ಇರಾನ್ ಭಾರಿ ಬೆಲೆ ತೆರಲಿದೆ. ಇದು ಎಚ್ಚರಿಕೆ ಅಲ್ಲ. ಬೆದರಿಕೆ ಎಂದು ಇರಾನ್ ತಿಳಿದುಕೊಳ್ಳಬೇಕು. ಇರಾಕ್‌ನಲ್ಲಿನ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಉತ್ತಮ ಯೋಧರನ್ನು ಹೊಂದಿದ್ದೇವೆ’ ಎಂದು ಕಟುವಾಗಿ ಹೇಳಿದ್ದಾರೆ.

ರಾಯಭಾರ ಕಚೇರಿ ಮೇಲೆ ದಾಳಿ ನಡೆದಿರುವುದನ್ನು ಖಂಡಿಸಿದ ಅವರು, ‘ಇತ್ತೀಚೆಗೆ ನಡೆದಿರುವ ದಾಳಿಯಲ್ಲೇ ಇದು ಅತಿ ಕೆಟ್ಟದ್ದು. ಈ ಘಟನೆಗೆ ಇರಾನ್ ಸಂಪೂರ್ಣ ಜವಾಬ್ದಾರಿಯಾಗಿದೆ. ಇರಾಕ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿ ಸುರಕ್ಷಿತವಾಗಿದೆ. ಇರಾಕ್ ಅಧ್ಯಕ್ಷರು ಮತ್ತು ಪ್ರಧಾನಿ ಮನವಿ ಮಾಡಿದ ತಕ್ಷಣವೇ ಸ್ಪಂದಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲು ಉಗ್ರರು ಉತ್ತೇಜಿಸಿದ್ದರು. ಸಿಬ್ಬಂದಿ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗುತ್ತಿದೆ.
–ಮೈಕ್ ಪಾಂಪಿಯೊ, ವಿದೇಶಾಂಗ ಕಾರ್ಯದರ್ಶಿ, ಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.