ಇಸ್ತಾಂಬುಲ್: ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಟರ್ಕಿಯ ಗುಪ್ತಚರ ಸಂಸ್ಥೆಯು ಅಮೆರಿಕದ ಬೇಹುಗಾರಿಕಾ ಸಂಸ್ಥೆಯ(ಸಿಐಎ) ನಿರ್ದೇಶಕಿ ಗಿನಾ ಹಸ್ಪೆಲ್ ಜೊತೆ ಹಂಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹತ್ಯೆ ಪ್ರಕರಣದ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಗಿನಾ ಅವರು ಮಂಗಳವಾರ ಟರ್ಕಿಯ ರಾಜಧಾನಿ ಅಂಕಾರಕ್ಕೆ ಭೇಟಿ ನೀಡಿದ್ದರು.

ಕಾನ್ಸುಲೇಟ್ ಕಚೇರಿ ಮತ್ತು ಕಾನ್ಸುಲ್ ನಿವಾಸದಲ್ಲಿ ಲಭಿಸಿರುವ ವಿಡಿಯೊ ಮತ್ತು ಆಡಿಯೊ ಸಾಕ್ಷ್ಯಗಳನ್ನು ಟರ್ಕಿಯ ಗುಪ್ತಚರ ಸಂಸ್ಥೆಯ (ಎಂಐಟಿ) ಅಧಿಕಾರಿಗಳು ಗಿನಾ ಅವರಿಗೆ ನೀಡಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ.

‘ಖಶೋಗ್ಗಿ ಹತ್ಯೆ ಪೂರ್ವ ನಿಯೋಜಿತವಾಗಿದ್ದು, ಅದರಲ್ಲಿ ಭಾಗಿಯಾದವರನ್ನು ಕಾನೂನಿನ ಮುಂದೆ ತರಬೇಕು’ ಎಂದು ಟರ್ಕಿಯ ಅಧ್ಯಕ್ಷ ತಯೀಪ್ ಎರ್ಡೋಗನ್ ಹೇಳಿದ್ದರು.

ಸೌದಿ ಅಧಿಕಾರಿಗಳ ವೀಸಾ ಹಿಂತೆಗೆದುಕೊಳ್ಳಲು ನಿರ್ಧಾರ

ವಾಷಿಂಗ್ಟನ್ (ಪಿಟಿಐ): ಪತ್ರಕರ್ತ ಖಶೋಗ್ಗಿ ಹತ್ಯೆಗೆ ಸಂಬಂಧಿಸಿ ಸೌದಿ ಅರೇಬಿಯಾದ ಕೆಲವು ಹಿರಿಯ ಅಧಿಕಾರಿಗಳ ವೀಸಾವನ್ನು ಹಿಂತೆಗೆದುಕೊಳ್ಳುವುದಾಗಿ ಅಮೆರಿಕ ಘೋಷಿಸಿದೆ.

‘ಹತ್ಯೆಯಲ್ಲಿ ಭಾಗಿಯಾಗಿರುವ ಸೌದಿ ಅಧಿಕಾರಿಗಳನ್ನು ಅಮೆರಿಕ ಗುರುತಿಸಿದ್ದು, ಅವರ ವೀಸಾವನ್ನು ಹಿಂತೆಗೆದುಕೊಳ್ಳಲಾಗುವುದು’ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವ ಮೈಕ್ ಪೋಂಪಿಯೊ ತಿಳಿಸಿದ್ದಾರೆ.

‘ಸೌದಿ ಅಧಿಕಾರಿಗಳು ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರರಾಗಿದ್ದ ಖಶೋಗ್ಗಿ ಅವರು ಅಕ್ಟೋಬರ್ 2ರಂದು ಟರ್ಕಿಯಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್ ಕಚೇರಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು.

ಖಶೋಗ್ಗಿ ಅವರು ಕಾನ್ಸುಲೇಟ್ ಕಚೇರಿಯ ಹಿಂಬಾಗಿಲಿನ ಮೂಲಕ ಮರಳಿದ್ದರು ಎಂದು ಸೌದಿ ಅರೇಬಿಯಾ ಸರ್ಕಾರ ಮೊದಲಿಗೆ ಹೇಳಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದಾಗ, ಕಾನ್ಸುಲೇಟ್ ಕಚೇರಿಯಲ್ಲಿ ಖಶೋಗ್ಗಿ ಹತ್ಯೆ ನಡೆದಿದೆ ಎಂದು ಸೌದಿ ಹೇಳಿಕೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.