ಅಂಕಾರ: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಅಧ್ಯಕ್ಷೀಯ ಚುನಾವಣಾಯಲ್ಲಿ ಮತ್ತೊಂದು ಅವಧಿಗೆ ಗೆಲುವು ಸಾಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಭೀಕರ ಭೂಕಂಪ, ಹೆಚ್ಚಿದ ಹಣದುಬ್ಬರ ನಡುವೆಯೇ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಎರ್ಡೊಗನ್ ಯಶಸ್ವಿಯಾಗಿದ್ದಾರೆ. ಈ ಮೂಲಕ 20 ವರ್ಷಗಳಿಂದ ಈ ಸ್ಥಾನದ ಮೇಲಿದ್ದ ಅವರ ಹಿಡಿತ ಮೂರನೇ ದಶಕಕ್ಕೂ ಮುಂದುವರಿದಿದೆ.

ವಿರೋಧ ಪಕ್ಷದ ಅಭ್ಯರ್ಥಿ ಕೆಮಾಲ್ ಕಿಲಿಕ್ಡರೊಗ್ಲು ಅವರು ಸೋಲುಂಡಿರುವುದಾಗಿ ಅಲ್ಲಿನ ಸರ್ಕಾರಿ ಸುದ್ದಿ ಮಾಧ್ಯಮ 'ಅನಾಡೋಲು' ತಿಳಿಸಿದೆ.

ಈಗಾಗಲೇ ಶೇಕಡ 97ರಷ್ಟು ಮತಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಲಾಗಿದೆ. ಎರ್ಡೊಗನ್ ಶೇ 52.1 ಮತಗಳೊಂದಿಗೆ ಮುಂದಿದ್ದರೆ, ಅವರ ಪ್ರತಿಸ್ಪರ್ಧಿ ಶೇ 47.9ರೊಂದಿಗೆ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

ದೇಶದ ಚುನಾವಣಾ ಪರಿಷತ್ತು ಕೂಡ ಎರ್ಡೊಗನ್ ಮುನ್ನಡೆ ಸಾಧಿಸಿರುವುದಾಗಿ ತಿಳಿಸಿದೆ.

ಮೇ 14 ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ, ಎರ್ಡೊಗನ್ ಶೇಕಡ 49.52 ಮತಗಳನ್ನು ಗಳಿಸಿದ್ದರು. ಕಿಲಿಕ್ಡರೋಗ್ಲು ಶೇ 44.88 ರಷ್ಟು ಮತಗಳನ್ನು ಪಡೆದಿದ್ದರು. ಮೊದಲ ಸುತ್ತಿನಲ್ಲಿ ಯಾರೊಬ್ಬರೂ ಶೇ 50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸದ ಹಿನ್ನೆಲೆಯಲ್ಲಿ ಮರು ಚುನಾವಣೆ ನಡೆಸಲಾಗಿತ್ತು.

2017ರ ಏಪ್ರಿಲ್ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನದ ಪ್ರಕಾರ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಹಿಂದೆ ಟರ್ಕಿಯಲ್ಲಿ ಅಧ್ಯಕ್ಷರು ಎರಡು ಅವಧಿಗೆ ಮಾತ್ರ ಆಡಳಿತ ನಡೆಸಬಹುದಾಗಿತ್ತು. 2017ರ ನಂತರದ ಅಧ್ಯಕ್ಷರಿಗೆ ಐದು ವರ್ಷಗಳ ಅಧಿಕಾರ ಒದಗಿಸಲಾಗಿದೆ. ಹೊಸ ಸಂವಿಧಾನ ಜಾರಿ ಬಳಿಕ ನಡೆದ ಚುನಾವಣೆಯಲ್ಲೂ ಎರ್ಡೊಗನ್ ಜಯಶಾಲಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.