ಲಂಡನ್: ‘ನಾಗರಿಕರ ಜೀವನ ನಿರ್ವಹಣೆ ವೆಚ್ಚ ತಗ್ಗಿಸುವ ಉದ್ದೇಶದಿಂದ ಸರ್ಕಾರವುಗೃಹ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರಗಳ ಮೇಲೆ ಮಿತಿ ಹೇರಲು ನಿರ್ಧರಿಸಿದೆ’ ಎಂದು ಬ್ರಿಟನ್ನ ನೂತನ ಪ್ರಧಾನಿ ಲಿಜ್ ಟ್ರಸ್ ಗುರುವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

‘ಎರಡು ವರ್ಷಗಳ ಅವಧಿಯ ‘ಇಂಧನ ದರ ಖಾತರಿ’ ನೀತಿ ಅನ್ವಯ ಮನೆಯೊಂದರ ವಾರ್ಷಿಕ ಸರಾಸರಿ ವಿದ್ಯುತ್ ಬಿಲ್ 2,500 ಪೌಂಡ್ಸ್ (₹2.29 ಲಕ್ಷ) ಮೀರುವಂತಿಲ್ಲ. ನಾವು ಬೆಲೆ ಏರಿಕೆಯ ಮೂಲವನ್ನು ಹುಡುಕಿ ಅದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತೇವೆ. ಸದ್ಯದ ಬಿಕ್ಕಟ್ಟಿನಿಂದ ದೇಶವನ್ನು ಮೇಲಕ್ಕೆ ಎತ್ತಲಿದ್ದೇವೆ’ ಎಂದು ಹೇಳಿದ್ದಾರೆ.

‘ಆಸ್ಪತ್ರೆ ಹಾಗೂ ಶಾಲೆಗಳಂತಹ ಸಾರ್ವಜನಿಕ ಮತ್ತು ವಾಣಿಜ್ಯ ಸಂಸ್ಥೆಗಳಿಗೂ ಸರ್ಕಾರದ ಬೆಂಬಲ ಸಿಗಲಿದೆ. ಈ ಸಂಸ್ಥೆಗಳಿಗೆ ವಿದ್ಯುತ್ ದರ ಮಿತಿ ನಿಯಮ ಆರು ತಿಂಗಳ ಅವಧಿಗಷ್ಟೇ ಅನ್ವಯವಾಗಲಿದೆ. ಹಣದುಬ್ಬರ ದರ ಪ್ರಮಾಣವನ್ನು ತಗ್ಗಿಸಲು ಈ ನಿಯಮ ಸಹಕಾರಿಯಾಗಲಿದೆ’ ಎಂದಿದ್ದಾರೆ.

ತೈಲ ಕಂಪನಿಗಳ ಲಾಭದ ಮೇಲೆ ವಿಂಡ್ ಫಾಲ್ ತೆರಿಗೆ ವಿಧಿಸುವಂತೆ ವಿರೋಧ ಪಕ್ಷ ಲೇಬರ್ ಪಾರ್ಟಿ ಒತ್ತಾಯಿಸಿತು. ಈ ಆಗ್ರಹವನ್ನು ಟ್ರಸ್ ತಳ್ಳಿಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.