ಕೀವ್: ರಷ್ಯಾದೊಂದಿಗೆ ವ್ಯಾಪಾರ –ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಡಚ್ ಸಂಸತ್ತಿಗೆ (ನೆದರ್ಲೆಂಡ್ಸ್) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಝೆಲೆನ್‌ಸ್ಕಿ, ‘ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಪ್ರತಿಯಾಗಿ ಆ ರಾಷ್ಟ್ರದಿಂದ ಶಸ್ತ್ರಾಸ್ತ್ರಗಳು, ಪುನರ್ ನಿರ್ಮಾಣ ನೆರವು ಸೇರಿದಂತೆ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಡಚ್ ಸಂಸತ್ತಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದ್ದಾರೆ.

ಯುರೋಪ್‌ನಲ್ಲಿ ಯುದ್ಧವನ್ನು ಮುಂದುವರಿಸಲು ರಷ್ಯಾಕ್ಕೆ ಅವಕಾಶ ನೀಡದಂತೆ ಬಲವಾದ ನಿರ್ಬಂಧಗಳನ್ನು ಹೇರುವ ಅಗತ್ಯವಿದೆ ಎಂದು ಝೆಲೆನ್‌ಸ್ಕಿ ಒತ್ತಾಯಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಸತತ ಎರಡು ತಿಂಗಳಿನಿಂದ ದಾಳಿ ನಡೆಸುತ್ತಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಸೈನಿಕರು ಸೇರಿದಂತೆ ನಾಗರಿಕರು ಮೃತಪಟ್ಟಿದ್ದಾರೆ.

ಓದಿ...5 ವಾರಗಳಿಂದ ಮಕ್ಕಳನ್ನು ನೋಡಿಲ್ಲ: ಉಕ್ರೇನ್ ವಿದೇಶಾಂಗ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.