ವಾಷಿಂಗ್ಟನ್: ಭೂತಾನ್ ಮೇಲಿನ ಹಕ್ಕು ಪ್ರತಿಪಾದನೆ, ಭಾರತದ ಭೌಗೋಳಿಕ ಪ್ರದೇಶದ ಮೇಲಿನ ಇತ್ತೀಚಿನ ಅತಿಕ್ರಮಣಗಳು ಚೀನಾದ ಉದ್ದೇಶ ಏನೆಂಬುದನ್ನು ಸೂಚಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಚೀನಾ ವಿಚಾರ ಪ್ರಸ್ತಾಪಿಸಿದ್ದಾರೆ.

ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಹಲವೆಡೆ ಭಾರತ–ಚೀನಾ ಯೋಧರು ಮೇ 5ರಂದು ಮುಖಾಮುಖಿಯಾಗಿದ್ದರು. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಉಭಯ ದೇಶಗಳ ಸೇನಾಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು.

ವಿಶ್ವ ಪರಿಸರ ಸೌಲಭ್ಯ ಮಂಡಳಿಯಲ್ಲಿ (ಜಿಇಎಫ್) ಚೀನಾವು ಇತ್ತೀಚೆಗೆ ಭೂತಾನ್‌ನ ಸಕ್‌ತೇಂಗ್ ವನ್ಯಜೀವಿ ಅಭಯಾರಣ್ಯದ ಮೇಲೆ ಹಕ್ಕು ಪ್ರತಿಪಾದಿಸಿತ್ತು. ಆ ಪ್ರದೇಶದಲ್ಲಿನ ಯೋಜನೆಗೆ ಧನಸಹಾಯ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು.

‘ಈ ಕ್ರಮಗಳು ಚೀನಾದವರು ದಶಕಗಳಿಂದ, 1989ರಿಂದ ಈಚೆಗೆ, ಅದರಲ್ಲೂ ಕ್ಸಿ ಜಿನ್‌ಪಿಂಗ್ ಅಧಿಕಾರಕ್ಕೆ ಬಂದ ಬಳಿಕ ಜಗತ್ತಿಗೆ ನೀಡುತ್ತಿದ್ದ ಸಂಕೇತಗಳೊಂದಿಗೆ ತಾಳೆಯಾಗುತ್ತವೆ. ಚೀನಾವು ತನ್ನ ಶಕ್ತಿಯನ್ನು ವಿಸ್ತರಿಸುವ ಬಯಕೆ ಹೊಂದಿದೆ’ ಎಂದು ಪಾಂಪಿಯೊ ಹೇಳಿದ್ದಾರೆ.

‘ಅವರು ಚೀನಾದ ಗುಣಲಕ್ಷಣ ಹೊಂದಿರುವ ಸಮಾಜವಾದವನ್ನು ಜಗತ್ತಿನಾದ್ಯಂತ ವಿಸ್ತರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಭೂತಾನ್ ಮೇಲೆ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಭಾರತದ ಮೇಲೆ ಅತಿಕ್ರಮಣ ಎಸಗುತ್ತಿದ್ದಾರೆ. ಇವುಗಳೆಲ್ಲ ಅವರ ಉದ್ದೇಶ ಏನೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರ ಬೆದರಿಕೆಗಳು ಮತ್ತು ಬೆದರಿಸುವಿಕೆಗೆ ನಾವು ಎದುರು ನಿಲ್ಲುತ್ತೇವೆಯೇ ಎಂದು ಅವರು ಜಗತ್ತನ್ನು ಪರಿಶೀಲಿಸುತ್ತಿದ್ದಾರೆ’ ಎಂದು ಪಾಂಪಿಯೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.