ನೆದರ್ಲ್ಯಾಂಡ್ಸ್: ಅಕ್ಟೋಬರ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಡಚ್ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

ಡಚ್ ಭದ್ರತಾ ಸಂಶೋಧಕರಾದ 44 ವರ್ಷದ ವಿಕ್ಟರ್ ಗೇವರ್ಸ್ ಎಂಬುವವರು ಟ್ರಂಪ್ ಅವರ ಟ್ವಿಟರ್ ಖಾತೆಗೆ ಲಾಗ್ಇನ್ ಆಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.

'@realDonaldTrump' ಖಾತೆಯ ಪಾಸ್ವರ್ಡ್ ಅನ್ನು ಊಹಿಸುವ ಮೂಲಕ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಖಾತೆಗೆ ವಿಕ್ಟರ್ ಗೇವರ್ಸ್ ಅವರು ಲಾಗ್ಇನ್ ಆಗಿದ್ದರೆಂದು ಡಚ್ ಸರ್ಕಾರದ ಪರ ವಕೀಲರು ಹೇಳಿದ್ದಾರೆ.

ಸಂಶೋಧಕ ವಿಕ್ಟರ್ ಗೇವರ್ಸ್ ಅವರು ಯಾವುದೇ ದುರುದ್ದೇಶ ಇಟ್ಟುಕೊಂಡು ಟ್ರಂಪ್ ಅವರ ಖಾತೆಗೆ ಲಾಗ್ಇನ್ ಆಗಿಲ್ಲ. ಹೀಗಾಗಿ, ಅವರಿಗೆ ಯಾವುದೇ ಶಿಕ್ಷೆ ವಿಧಿಸಲಾಗುವುದಿಲ್ಲ. ಅವರೊಬ್ಬ 'ಎಥಿಕಲ್ ಹ್ಯಾಕರ್' ಎಂದು ಡಚ್ ಸರ್ಕಾರ ಪರ ನ್ಯಾಯವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿಕ್ಟರ್ ಗೇವರ್ಸ್ ಅವರು ಟ್ರಂಪ್ ಅವರ ಖಾತೆಗೆ ಲಾಗ್ಇನ್ ಆಗಲು ಹಲವು ಬಾರಿ ಪ್ರಯತ್ನಿಸಿದ ನಂತರ 'maga2020' ಎಂಬ ಪಾಸ್ವರ್ಡ್ ಅನ್ನು ಟೈಪ್ ಮಾಡಿದ್ದಾರೆ. ಆಗ ಟ್ರಂಪ್ ಅವರ ಖಾತೆಯು ತೆರೆದುಕೊಂಡಿದೆ. 'maga2020' ಎಂದರೆ 'Make America Great Again' ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಈ ಹೇಳಿಕೆಯು ಟ್ರಂಪ್ ಅವರ ಭಾಷಣಗಳಲ್ಲಿ ಪದೇಪದೆ ಉಲ್ಲೇಖವಾಗುತ್ತಿದ್ದರಿಂದ ಗೇವರ್ಸ್ ಅವರು ಇದನ್ನು ಊಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಟ್ರಂಪ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿಲ್ಲವೆಂದು ವೈಟ್ಹೌಸ್ ಮತ್ತು ಟ್ವಿಟರ್ನ ಆಡಳಿತ ವರ್ಗಗಳು ಈ ಹಿಂದೆ ಸ್ಪಷ್ಟನೆ ನೀಡಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.