ಲಂಡನ್: ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾ ಪಡೆದಿರುವವರಲ್ಲಿ ಭಾರತದವರ ಸಂಖ್ಯೆ ಈಗಲೂ ವಿದೇಶೀಯರ ಪೈಕಿ ಮೊದಲ ಸ್ಥಾನದಲ್ಲಿದೆ. ಆದರೆ, ವಲಸೆ ನಿಯಮಗಳಲ್ಲಿನ ಬದಲಾವಣೆಯಿಂದಾಗಿ ಕಳೆದ ಒಂದು ವರ್ಷದಲ್ಲಿ ಈ ದೇಶದಲ್ಲಿ ಕಲಿಯಲು ಬಯಸುತ್ತಿರುವ ಭಾರತದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಸಾಕಷ್ಟು ಕಡಿಮೆಯಾಗಿದೆ.

ಗುರುವಾರ ಬಿಡುಗಡೆ ಮಾಡಲಾದ ಇಲ್ಲಿನ ಗೃಹ ಸಚಿವಾಲಯದ ಅಂಕಿಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸಿವೆ.

ಜೂನ್ 2024ರವರೆಗಿನ ಒಂದು ವರ್ಷದ ಅವಧಿಯಲ್ಲಿ ಬ್ರಿಟನ್‌ನ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 23ರಷ್ಟು ಕುಸಿತ ಕಂಡುಬಂದಿದೆ ಎಂದು ಅಂಕಿಅಂಶಗಳು ಹೇಳಿವೆ.

ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದ ನಂತರ ಎರಡು ವರ್ಷ ಉಳಿದುಕೊಳ್ಳುವಂತೆ ವೀಸಾ ಅವಧಿ ವಿಸ್ತರಣೆಯಾಗುವ ನಿಯಮವೇನೋ ಇದೆ. ಆದರೆ, ಭಾರತದಿಂದ ತಂದೆ–ತಾಯಿ ಅಥವಾ ಕುಟುಂಬದವರನ್ನು ಆ ಅವಧಿಯಲ್ಲಿ ಕರೆದುಕೊಂಡು ಬಂದು ತಮ್ಮ ಜೊತೆ ವಾಸ ಮಾಡುವ ಅವಕಾಶವನ್ನು ಬದಲಾದ ವಲಸೆ ನಿಯಮಗಳು ನೀಡುವುದಿಲ್ಲ.

2024ರ ಜೂನ್‌ಗೆ ಮುಕ್ತಾಯಗೊಂಡ ಶೈಕ್ಷಣಿಕ ವರ್ಷದಲ್ಲಿ 1,10,006 ಭಾರತೀಯ ವಿದ್ಯಾರ್ಥಿಗಳಿಗೆ ಪ್ರಾಯೋಜಿತ ಶೈಕ್ಷಣಿಕ ವೀಸಾ ದೊರೆತಿತ್ತು. ಒಟ್ಟಾರೆ ವಿದೇಶಿ ವಿದ್ಯಾರ್ಥಿಗಳ ಪೈಕಿ ಇಂತಹ ವೀಸಾ ಪಡೆದ ಶೇ 25ರಷ್ಟು ಮಂದಿ ಭಾರತದವರೇ ಆಗಿದ್ದಾರೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ, ಭಾರತದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 32,687 ಕಡಿಮೆ ಆಗಿದೆ ಎಂದು ಅಂಕಿಅಂಶ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.