ವಾಷಿಂಗ್ಟನ್: ನೂತನ ಅಧ್ಯಕ್ಷರ ಆಯ್ಕೆಗೆ ಅಮೆರಿಕದಲ್ಲಿ ಮತದಾನ ಆರಂಭವಾಗಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ (ಭಾರತದಲ್ಲಿ 4PM) ಗೆ ನ್ಯೂ ಹಾಂಪ್ಶಿರ್ ರಾಜ್ಯದಲ್ಲಿ ಜನ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ.

ಅಮೆರಿಕವನ್ನು ಮುಂದಿನ ಐದು ವರ್ಷ ಆಳುವ ವ್ಯಕ್ತಿಯನ್ನು ಆಯ್ಕೆ ಮಾಡಲು ಜನತೆಗೆ ಇಂದು ಕೊನೆಯ ಅವಕಾಶವಾಗಿದೆ.

ಈಗಾಗಲೇ ಕಳೆದ ಒಂದು ವರ್ಷದಿಂದ ನಡೆದ ಬ್ಯಾಲೆಟ್ ಮತಗಳ ಮೂಲಕ 82 ಲಕ್ಷಕ್ಕೂ ಹೆಚ್ಚು ಜನ ಮತ ಚಲಾಯಿಸಿದ್ದಾರೆ.

ಕೊನೆಯ ದಿನದವರೆಗೂ ಜಿದ್ದಿಗೆ ಬಿದ್ದಂತೆ ಪ್ರಚಾರ ಮಾಡಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ಗೆ ಇದು ಕೊನೆಯ ಪರೀಕ್ಷೆಯಾಗಿದೆ.

ಇಂದು ಅರಿಜೋನಾ, ಜಾರ್ಜಿಯಾ, ಮಿಚಿಗನ್, ನಾವಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ಎಂಬ 7 ಪ್ರಾಂತ್ಯಗಳ ಜನ ಹಕ್ಕು ಚಲಾಯಿಸುತ್ತಿದ್ದಾರೆ.

ಭಾರತದ ಕಾಲಮಾನ ಪ್ರಕಾರ ಮಧ್ಯರಾತ್ರಿ 2.30ರ ಹೊತ್ತಿಗೆ ಎಕ್ಸಿಟ್ ಪೋಲ್ ಆರಂಭವಾಗಲಿದೆ.

ದೇಶದಲ್ಲಿ 24.4 ಕೋಟಿ ಜನ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. 2020ರಲ್ಲಿ ಶೇ 66ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಏರ್ಪಡಲಿದೆ ಎಂದು ವಿಶ್ಲೇಷಿಸಲಾಗಿದೆ.
.ವಿದೇಶ ವಿದ್ಯಮಾನ | ಅಮೆರಿಕ ಚುನಾವಣೆ ಕೌತುಕ.ಅಮೆರಿಕ | ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ: ಕಮಲಾ, ಟ್ರಂಪ್ ಅಬ್ಬರದ ಪ್ರಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.