ಮ್ಯಾಡ್ರಿಡ್: ‘ಫಿಟ್ ಆಗಿರಿ, ಆರೋಗ್ಯವಾಗಿರಿ’ ಇದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂದೇಶ.

ಸ್ಪೇನ್ ಪ್ರವಾಸದಲ್ಲಿರುವ ಮಮತಾ, ಮ್ಯಾಡ್ರಿಡ್ನ ಉದ್ಯಾನದಲ್ಲಿ ಅಧಿಕಾರಿಗಳೊಂದಿಗೆ ಜಾಗಿಂಗ್ ಮಾಡಿದ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎಂದಿನಂತೆಯೇ ಸೀರೆ ತೊಟ್ಟು, ಕಾಲಿಗೆ ಚಪ್ಪಲಿ ಹಾಕಿಕೊಂಡು ಉದ್ಯಾನದಲ್ಲಿ ಓಡಿದ ಮಮತಾ, ‘ಇದೊಂದು ಸುಂದರ ಬೆಳಗು. ದಿನವಿಡೀ ಉಲ್ಲಾಸದಿಂದಿರಲು ಒಂದು ಉತ್ತಮ ಜಾಗ್ ನೆರವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ನಿತ್ಯ ಥ್ರೆಡ್ಮಿಲ್ ಮೇಲೆ ವೇಗವಾಗಿ ನಡೆಯುವ ಅಭ್ಯಾಸ ಹೊಂದಿದ್ದಾರೆ. 2019ರಲ್ಲಿ ಡಾರ್ಜಲಿಂಗ್ನ ಗುಡ್ಡದ ಮೇಲೆ 10 ಕಿ.ಮೀ. ಜಾಗ್ ಮಾಡಿದ್ದ ವಿಡಿಯೊ ಎಲ್ಲೆಡೆ ಹರಿದಾಡಿತ್ತು.

ಮತ್ತೊಮ್ಮೆ ಸಂಗೀತ ಸಾಧನ ಅಕಾರ್ಡಿಯಾನ್ ಜತೆ ಕಾಣಿಸಿಕೊಂಡಿದ್ದ ಮಮತಾ, ‘ಸಂಗೀತ ನಿರಂತರ. ಸಂಗೀತ ಎನ್ನುವುದು ಬೆಳೆಯಬೇಕು. ನಮ್ಮ ಕೊನೆಯವರೆಗೂ ಅದು ನಮ್ಮೊಂದಿಗೇ ಇರುವಂತದ್ದು’ ಎಂದು ಬರೆದುಕೊಂಡಿದ್ದರು.

ಸ್ಪೇನ್ ಪ್ರವಾಸದಲ್ಲಿರುವ ಮಮತಾ, ಫುಟ್ಬಾಲ್ ತಂಡವಾದ ಲಾ ಲಿಗಾದ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಫುಟ್ಬಾಲ್ ಕುರಿತ ಒಪ್ಪಂದ ಈ ಇಬ್ಬರು ನಾಯಕರ ನಡುವೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 1929ರಲ್ಲಿ ಆರಂಭವಾದ ಈ ತಂಡ, ಬಾರ್ಸೆಲೊನಾ, ರಿಯಲ್ ಮ್ಯಾಡ್ರಿಡ್, ಅಟೆಲೆಟಿಕೊ ಮ್ಯಾಡ್ರಿಡ್ ತಂಡಗಳಂತೆಯೇ ಜನಪ್ರಿಯತೆ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.