ಯುರೋಪ್: ಕೋವಿಡ್ ಲಸಿಕೆಯಿಂದ ಕೊರೊನಾ ಸೋಂಕು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮಾನವನ್ನು ವ್ಯಕ್ತಪಡಿಸಿದೆ.

ಕೊರೊನಾವೈರಸ್ನ ಹೊಸ ರೂಪಾಂತರಿ ತಳಿಯಿಂದಾಗಿ ಕೋವಿಡ್ ಲಸಿಕೆಗಳು ರೋಗನಿರೋಧಕ ಶಕ್ತಿಯನ್ನು ತಲುಪುವ ನಿರೀಕ್ಷೆಯನ್ನು ಹಾಳು ಮಾಡುತ್ತಿವೆ ಎಂದು ಡಬ್ಲ್ಯುಎಚ್ಒ ನಿರ್ದೇಶಕ (ಯುರೋಪ್) ಹ್ಯಾನ್ಸ್ ಕ್ಲುಗೆ ವರದಿಗಾರರಿಗೆ ತಿಳಿಸಿದ್ದಾರೆ.

'ಸೋಂಕು ಹಲವು ವರ್ಷಗಳ ಕಾಲ ಇರುವ ಸಾಧ್ಯತೆಯಿದೆ. ಹಾಗಾಗಿ ಆರೋಗ್ಯ ಅಧಿಕಾರಿಗಳು ಲಸಿಕೆ ತಂತ್ರವನ್ನು ಕ್ರಮೇಣವಾಗಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಅಂದಾಜಿಸಬೇಕು. ವಿಶೇಷವಾಗಿಯೂ ಹೆಚ್ಚುವರಿ ಲಸಿಕೆ ಡೋಸ್ಗಳ ಬಗ್ಗೆ' ಎಂದು ಹೇಳಿದ್ದಾರೆ.

ಕೋವಿಡ್ ಲಸಿಕೆ ವಿತರಣೆಯು ಶೇಕಡಾ 70ರಷ್ಟು ತಲುಪಿದಾಗ ಸಾಂಕ್ರಾಮಿಕ ಪಿಡುಗು ಅಂತ್ಯವಾಗಲಿದೆಎಂದು ವಿಶ್ವ ಆರೋಗ್ಯ ಸಂಸ್ಥೆಯು ಮೇ ತಿಂಗಳಲ್ಲಿ ಹೇಳಿಕೆ ನೀಡಿತ್ತು.

ಆದರೆ ಡೆಲ್ಟಾದಂತಹ ಹೊಸ ರೂಪಾಂತರಿ ತಳಿಗಳಿಂದಾಗಿ ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿದೆ. ಆದ್ಯಾಗೂ ಗಂಭೀರ ರೋಗಗಳನ್ನುನಿಯಂತ್ರಿಸುವ ಮೂಲಕ ಸಾವಿನ ಪ್ರಮಾಣ ತಡೆಗಟ್ಟುವುದಕ್ಕೆ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.