ವಾಷಿಂಗ್ಟನ್: ನಾಸಾದ ಪರ್ಸೆವೆರೆನ್ಸ್ ರೋವರ್ ಯಶಸ್ವಿಯಾಗಿಮಂಗಳನ ನೆಲ ಸ್ಪರ್ಶಿಸಿದ್ದು, ಈ ಯೋಜನೆಯ ಮಾರ್ಗದರ್ಶನ, ಪಥದರ್ಶಕ ಮತ್ತು ನಿಯಂತ್ರಣ ಕಾರ್ಯಾಚರಣೆಗಳ (ಜಿಎನ್ ಮತ್ತು ಸಿ) ನೇತೃತ್ವ ವಹಿಸಿದವರು ಭಾರತ ಮೂಲದ ವಿಜ್ಞಾನಿ ಸ್ವಾತಿ ಮೋಹನ್!

‘ಪರ್ಸೆವೆರೆನ್ಸ್ ರೋವರ್, ಮಂಗಳಗ್ರಹದ ಕಠಿಣ ವಾತಾವರಣಗಳನ್ನು ಎದುರಿಸಿ ಬಳಿಕ ಸಫಲವಾಗಿ ಗ್ರಹವನ್ನು ಸ್ಪರ್ಶಿಸಿದೆ.ಮಾರ್ಗದರ್ಶನ, ಪಥದರ್ಶಕ ಮತ್ತು ನಿಯಂತ್ರಣ ಕಾರ್ಯಾಚರಣೆಯು ಬಾಹ್ಯಾಕಾಶ ನೌಕೆಯ ಕಣ್ಣು ಮತ್ತು ಕಿವಿಗಳಿದ್ದಂತೆ ’ ಎಂದು ಸ್ವಾತಿ ಮೋಹನ್ ಅವರು ತಿಳಿಸಿದರು.

ಸ್ವಾತಿ ಮೋಹನ್ ಒಂದು ವರ್ಷದವರಾಗಿದ್ದಾಗ ತನ್ನ ಪೋಷಕರೊಂದಿಗೆ ಭಾರತದಿಂದ ಅಮೆರಿಕಕ್ಕೆ ಬಂದವರು. ತಮ್ಮ ಬಾಲ್ಯ ಜೀವನವನ್ನು ಉತ್ತರ ವರ್ಜೀನಿಯಾ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಕಳೆದರು.

ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದ ಅವರು, ನಂತರ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ(ಎಂಐಟಿ) ಎಂ.ಎಸ್ ಮತ್ತು ಪಿಎಚ್ಡಿಯನ್ನು ಪೂರ್ಣಗೊಳಿಸಿದರು. 2013ರಿಂದ ಮಂಗಳನ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.