ಮಾಸ್ಕೊದತ್ತ ಮುಖಮಾಡಿದ ‘ವ್ಯಾಗ್ನರ್’ ವಿರುದ್ಧ ಕಾರ್ಯಾಚರಣೆ
ಸೇನೆ ವಿರುದ್ದ ಬಂಡಾಯ ಎದ್ದಿರುವ ಯೆವ್ಗೆನಿ ಪ್ರಿಗೋಷಿನ್ ನೇತೃತ್ವದ ‘ವ್ಯಾಗ್ನರ್’ ಗುಂಪು ರಾಜಧಾನಿ ಮಾಸ್ಕೊದತ್ತ ಮುನ್ನಡೆಯುವ ಸಾಧ್ಯತೆ ಇದೆ ಎಂದು ವೊರೊನೆಜ್ ನಗರದ ಗವರ್ನರ್ ಹೇಳಿದ್ದಾರೆ. ‘ನಗರದ ಇಂಧನ ಸಂಗ್ರಹಾಗಾರಕ್ಕೆ ಬೆಂಕಿ ಹಚ್ಚಲಾಗಿದೆ. ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಭಯೋತ್ಪದನಾ ನಿಗ್ರಹ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ’ ಎಂದೂ ಅವರು ಹೇಳಿದ್ದಾರೆ. ಪುಟಿನ್ ಟೀಕೆ–ತಿರುಗೇಟು: ‘ಮಹತ್ವಾಕಾಂಕ್ಷೆ ಹಾಗೂ ವೈಯಕ್ತಿಕ ಹಿತಾಸಕ್ತಿಗಳೇ ಇಂಥ ದೇಶದ್ರೋಹ ನಡೆಗೆ ಕಾರಣ’ ಎಂದು ಪ್ರಿಗೋಷಿನ್ ವಿರುದ್ಧ ವಿಡಿಯೊ ಸಂದೇಶದಲ್ಲಿ ಪುಟಿನ್ ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರಿಗೋಷಿನ್ ‘ನನ್ನ ಮಾತೃಭೂಮಿಗೆ ದ್ರೋಹ ಬಗೆಯುತ್ತಿದ್ದೇನೆ ಎಂಬ ಅಧ್ಯಕ್ಷರ ಹೇಳಿಕೆ ತಪ್ಪು. ನಾವೂ ದೇಶಪ್ರೇಮಿಗಳೇ’ ಎಂದಿದ್ದಾರೆ. ‘ಅಧ್ಯಕ್ಷ ಪುಟಿನ್ ಎಫ್‌ಎಸ್‌ಬಿ ಅಥವಾ ಇನ್ನಾರೋ ಮನವಿ ಮಾಡಿದರೂ ನಮ್ಮ ಯೋಜನೆಗಳು ಬದಲಾಯಿಸುವುದಿಲ್ಲ’ ಎಂದೂ ಹೇಳಿದ್ದಾರೆ.