ಕೈರೋ: ಯೆಮನ್ನಲ್ಲಿ ಹೌತಿ ಬಂಡುಕೋರರು ಶನಿವಾರ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಐದು ವರ್ಷದ ಬಾಲಕಿ ಸೇರಿದಂತೆ17 ನಾಗರಿಕರುಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧ ಪೀಡಿತ ರಾಷ್ಟ್ರದಲ್ಲಿ ಶಾಂತಿ ಕಾಪಾಡಿಕೊಳ್ಳಲು ಬಂಡುಕೋರರು ವಿಫಲವಾಗಿದ್ದಾರೆ ಎಂದು ಯೆಮನ್ನ ಅಮೆರಿಕ ರಾಯಭಾರಿ ಆರೋಪಿಸಿದ್ದಾರೆ.

ಕೇಂದ್ರ ನಗರವಾದ ಮಾರಿಬ್ನ ರೌಧಾ ನೆರೆಹೊರೆಯಲ್ಲಿರುವ ಗ್ಯಾಸ್ ಸ್ಟೇಷನ್ಗೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪ್ರಾಂತೀಯ ಗವರ್ನರ್ ಪತ್ರಿಕಾ ಕಾರ್ಯದರ್ಶಿ ಅಲಿ-ಅಲ್-ಗುಲಿಸಿ ತಿಳಿಸಿದ್ದಾರೆ.

ಇದನ್ನೂ ಓದಿ:ಮೆಕ್ಸಿಕೊ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ 7 ಕಾರ್ಮಿಕರು: ಮುಂದುವರಿದ ಶೋಧ ಕಾರ್ಯ

ಈ ದಾಳಿಯಲ್ಲಿ ಕನಿಷ್ಠ 17 ನಾಗರಿಕರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಚಿವ ಮೌಮರ್ ಅಲ್-ಇರ್ಯಾನಿ ತಿಳಿಸಿದ್ದಾರೆ. ಅಲ್ಲದೆ ದಾಳಿಯನ್ನು ಖಂಡಿಸುವಂತೆ ವಿಶ್ವಸಂಸ್ಥೆ ಹಾಗೂ ಅಮೆರಿಕಕ್ಕೆ ಕರೆ ನೀಡಿದ್ದಾರೆ.

ಅತ್ತ ಹೌತಿ ಬಂಡುಕೋರರಿಂದ ತಕ್ಷಣಕ್ಕೆ ಯಾವುದೇ ಪ್ರತ್ರಿಕ್ರಿಯೆ ಬಂದಿಲ್ಲ.

ಕ್ಷಿಪಣಿ ದಾಳಿಯ ಸ್ವಲ್ಪ ಸಮಯದ ಬೆನ್ನಲ್ಲೇ ಬಂಡುಕೋರರು ಸ್ಫೋಟಕ ತುಂಬಿದ ಡ್ರೋನ್ ದಾಳಿ ನಡೆಸಿದರು. ಇದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಧಾವಿಸಿದ ಎರಡು ಆಂಬುಲೆನ್ಸ್ಗಳನ್ನು ನಾಶಪಡಿಸಿವೆ ಎಂದು ಸರ್ಕಾರಿ ಪ್ರಾಯೋಜಿತ ಎಸ್ಎಬಿಎ ಸುದ್ದಿ ಸಂಸ್ಥೆ ತಿಳಿಸಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರ್ಕಾರದಿಂದ ಮಾರಿಬ್ ಪಟ್ಟಣವನ್ನು ವಶಪಡಿಕೊಳ್ಳಲು ಕಳೆದ ಫೆಬ್ರುವರಿಯಿಂದ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಪ್ರಯತ್ನಿಸುತ್ತಿದ್ದು, ಯೆಮನ್ನ ಉತ್ತರ ಭಾಗದಲ್ಲಿ ತನ್ನ ನಿಯಂತ್ರಣ ಸ್ಥಾಪಿಸಲು ಯತ್ನಿಸುತ್ತಿದೆ.

ಆದರೆ ಸೌದಿ ನೇತೃತ್ವದ ಒಕ್ಕೂಟದ ಬೆಂಬಲಿತ ಸರ್ಕಾರಿ ಪಡೆಗಳು ತಕ್ಕ ತಿರುಗೇಟು ನೀಡುತ್ತಿರುವ ಹಿನ್ನೆಲೆಯಲ್ಲಿ ಬಂಡುಕೋರರಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಅಲ್ಲದೆ ಭಾರಿ ನಷ್ಟವನ್ನು ಅನುಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.