ಕ್ವಾಲಾಲಂಪುರ: ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ತಮ್ಮ ಪ್ರಚೋದನಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

‘ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೊಂದಿರುವುದಕ್ಕಿಂತ ನೂರು ಪಟ್ಟು ಹೆಚ್ಚು ಹಕ್ಕುಗಳನ್ನು ಮಲೇಷ್ಯಾದಲ್ಲಿರುವ ಹಿಂದೂಗಳು ಹೊಂದಿದ್ದಾರೆ. ತಮ್ಮನ್ನು ಗಡಿಪಾರು ಮಾಡುವ ಮೊದಲು ಚೀನೀ ಮಲೇಷ್ಯನ್ನರನ್ನು ಹೊರ ಹಾಕಬೇಕು’ ಎನ್ನುವ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

‘ನನ್ನ ಹೇಳಿಕೆಯನ್ನು ಬೇರೆಯದೇ ರೀತಿ ಅರ್ಥೈಸಲಾಗುತ್ತಿದೆ. ಯಾವುದೇ ವ್ಯಕ್ತಿ, ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ನನ್ನ ಹೇಳಿಕೆಗೆ ಹೃದಯಪೂರ್ವಕವಾಗಿ ಕ್ಷಮೆ ಕೋರುತ್ತೇನೆ’ ಎಂದು ನಾಯ್ಕ್ ಹೇಳಿದ್ದಾರೆ.

ಕ್ಷಮೆ ಯಾಚಿಸುವ ಮೊದಲು ನಾಯ್ಕ್ ಪೊಲೀಸ್ ಮುಖ್ಯ ಕಚೇರಿಯಲ್ಲಿ 10 ತಾಸು ವಿಚಾರಣೆ ಎದುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.