ಅಟ್ಲಾಂಟಾ(ಅಮೆರಿಕ): ಅಟ್ಲಾಂಟಾದ ಮೃಗಾಲಯದ ಕೆಲ ಗೊರಿಲ್ಲಾಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

‘ಗೊರಿಲ್ಲಾಗಳಲ್ಲಿ ಕೆಮ್ಮು, ನೆಗಡಿ ಮುಂತಾದ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ, ಲಕ್ಷಣಗಳು ಕಾಣಿಸಿಕೊಂಡ ಗೊರಿಲ್ಲಾಗಳ ಮಲ, ಮೂಗಿನ ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ, ಜಾರ್ಜಿಯಾ ವಿಶ್ವವಿದ್ಯಾಲಯಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷಾ ವರದಿಯಲ್ಲಿ ಗೊರಿಲ್ಲಾಗೆ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಅಟ್ಲಾಂಟಾ ಮೃಗಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಎಷ್ಟು ಗೊರಿಲ್ಲಾಗಳು ಸೋಂಕಿಗೆ ತುತ್ತಾಗಿವೆ ಎಂಬುದರ ಬಗ್ಗೆ ಮೃಗಾಲಯವು ನಿಖರ ಮಾಹಿತಿ ನೀಡಿಲ್ಲ. ಆದರೆ, 13 ಗೊರಿಲ್ಲಾಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.

‘ಪ್ರಾಣಿಗಳ ಆರೈಕೆ ಮಾಡುವ ಸಿಬ್ಬಂದಿಯೊಬ್ಬರಲ್ಲಿ ಕೋವಿಡ್ ದೃಢಪಟ್ಟಿತ್ತು. ಅವರಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಅವರಿಂದಲೇ ಗೊರಿಲ್ಲಾಗಳಿಗೆ ಸೋಂಕು ಹರಡಿರಬಹುದು’ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.