ವಿಂಡ್ಹಾಕ್:ಆಫ್ರಿಕಾದ ಬರಪೀಡಿತ ನಮೀಬಿಯಾದಲ್ಲಿ, ರಾಷ್ಟ್ರೀಯ ಉದ್ಯಾನಗಳಲ್ಲಿರುವ600 ಎಮ್ಮೆಗಳು, 150 ಸಾರಂಗಗಳು, 65 ಒರೆಕ್ಸ್ ಜಿಂಕೆ, 60 ಜಿರಾಫೆ, 28 ಆನೆಗಳು ಸೇರಿದಂತೆ ಸುಮಾರು 1 ಸಾವಿರ ಪ್ರಾಣಿಗಳನ್ನು ಹರಾಜು ಹಾಕುವುದಾಗಿ ಪರಿಸರ ಸಚಿವಾಲಯ ಘೋಷಿಸಿದೆ.

ಹರಾಜು ಕುರಿತು ಸ್ಥಳೀಯ ಪತ್ರಿಕೆಗಳಲ್ಲಿ ಶುಕ್ರವಾರದಿಂದಲೇ ಜಾಹೀರಾತು ಪ್ರಕಟಿಸಲಾಗುತ್ತಿದೆ.

‘ಈ ವರ್ಷ ಬರದ ತೀವ್ರತೆ ಗಮನಿಸಿದರೆ, ಪ್ರಾಣಿಗಳ ಜೀವರಕ್ಷಣೆಗಾಗಿ ಹಾಗೂ ಮೇವು ಒದಗಿಸುವುದಕ್ಕಾಗಿ ಅವುಗಳನ್ನು ಹರಾಜಿನಲ್ಲಿ ಮಾರುವುದೇ ಉತ್ತಮ. ರಾಷ್ಟ್ರೀಯ ಉದ್ಯಾನಗಳ ಮತ್ತುವನ್ಯಜೀವಿಗಳ ನಿರ್ವಹಣೆಗಾಗಿ ಆರ್ಥಿಕ ನೆರವು ಸಹ ದೊರಕಲಿದೆ ಎಂದು ಈ ನಿರ್ಣಯಕ್ಕೆ ಬರಲಾಗಿದೆ. ಹರಾಜಲ್ಲಿ ಸುಮಾರು ₹ 7.68 ಕೋಟಿ ಗಳಿಸುವ ನಿರೀಕ್ಷೆ ಇದೆ’ ಎಂದು ಪರಿಸರ ಸಚಿವಾಲಯದ ವಕ್ತಾರ ರೋಮಿಯೊ ಮುಯುಂಡ ತಿಳಿಸಿದ್ದಾರೆ.

‘ಹಲವು ರಾಷ್ಟ್ರೀಯ ಉದ್ಯಾನಗಳಲ್ಲಿ ಮೇವಿನ ಕೊರತೆ ತೀವ್ರವಾಗಿದೆ. ಪ್ರಾಣಿಗಳ ಸಂಖ್ಯೆಗಳನ್ನು ಕಡಿಮೆ ಮಾಡದಿದ್ದಲ್ಲಿ ಅವುಗಳು ಹಸಿವಿನಿಂದ ಸಾವಿಗೀಡಾಗುವ ಸಂಭವ ಇದೆ. ದೇಶದ ಸುಮಾರು 90 ವರ್ಷಗಳ ಇತಿಹಾಸದಲ್ಲಿಯೇ ಈ ಬಾರಿ ಕೆಲವು ಪ್ರದೇಶಗಳಲ್ಲಿ ಭೀಕರ ಬರಗಾಲ ಎದುರಾಗಿದೆ’ ಎಂದುಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.