1.ಬಿ. ಲಕ್ಕಣ್ಣ, ಬೆಂಗಳೂರು
ಅಮೆರಿಕ ಅಧ್ಯಕ್ಷರು ಎರಡು ಅವಧಿಗೆ ಮಾತ್ರ ಅರ್ಹರಾಗಿರುತ್ತಾರೆ. ಈ ನಿಯಮ ಯಾರ ಕಾಲದಲ್ಲಿ ಜಾರಿಯಾಯಿತು ? ಇದರ ಉದ್ದೇಶ ಏನು ?

ಅಧ್ಯಕ್ಷರು ಮೂರನೆಯ ಪೂರ್ಣಾವಧಿಗೆ ಚುನಾಯಿತರಾಗುವುದನ್ನು ನಿಷೇಧಿಸುವ ಸಂವಿಧಾನದ 22ನೇ ತಿದ್ದುಪಡಿಯನ್ನು 1951ರಲ್ಲಿ ಅಂಗೀಕರಿಸಲಾಯಿತು. ವ್ಯಕ್ತಿಯೊಬ್ಬರು ಒಂದಕ್ಕಿಂತಲೂ ಹೆಚ್ಚು ಬಾರಿ ಅಧ್ಯಕ್ಷರಾಗಿ, ಇಲ್ಲವೇ ಎರಡು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಹಂಗಾಮಿ ಅಧ್ಯಕ್ಷರಾಗಿ (ಅಂದರೆ, ಮತ್ತೊಬ್ಬರ ಅವಧಿಯಲ್ಲಿ) ಕಾರ್ಯ ನಿರ್ವಹಿಸಿದ್ದರೆ, ಅಂಥವರು ಚುನಾಯಿತರಾಗುವುದನ್ನು ಈ ತಿದ್ದುಪಡಿ ನಿಷೇಧಿಸುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರು ಕೇವಲ ಎರಡು ಅವಧಿಗಳಿಗೆ ಮಾತ್ರ ಅಧ್ಯಕ್ಷರಾಗಿರಬೇಕು ಎಂಬ ಪೂರ್ವ ನಿದರ್ಶನವನ್ನು ಸ್ವಇಚ್ಚೆಯಿಂದ ಸೃಷ್ಟಿಸಿದರು. ಈ ಪೂರ್ವನಿದರ್ಶನವನ್ನು 1940ರವರೆಗಿನ ಅಧ್ಯಕ್ಷರು ಪಾಲಿಸಿದರು. ಫ್ರಾನ್ಕ್ ಲಿನ್ ರೂಸ್ವೆಲ್ಟ್ ಅವರು 1940, ಮೂರನೇ ಅವಧಿಗೆ ಮುಂದುವರಿಯಲು ನಿರಾಕರಿಸಿದರಾದರೂ, ಡೆಮಾಕ್ರಾಟ್ ಪಕ್ಷವು ಅವರನ್ನೇ ಅಭ್ಯರ್ಥಿಯನ್ನಾಗಿ ನೇಮಿಸಲು ಅವಕಾಶ ನೀಡಿತು.

ಹಾಗಾಗಿ ಅವರು ಮೂರನೇ ಅವಧಿಗೂ ಆಯ್ಕೆಯಾದರು. 1941ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಎರಡನೇ ಜಾಗತಿಕ ಯುದ್ಧಕ್ಕೆ ಧುಮುಕಿದ್ದರಿಂದಾಗಿ 1944ರಲ್ಲಿಯೂ ಅವರನ್ನೇ ನಾಲ್ಕನೇ ಅವಧಿಗೆ ಮತದಾರರು ಚುನಾಯಿಸಿದರು. ಎರಡನೇ ಜಾಗತಿಕ ಯುದ್ಧದ ತರುವಾಯ, ರೂಸ್ವೆಲ್ಟ್ ಅವರ ಅನಾರೋಗ್ಯ ಹಾಗೂ ಆನಂತರದ ಅಧಿಕಾರಾವಧಿಯಲ್ಲಿ ಅವರ ಮರಣವನ್ನು ಗಮನದಲ್ಲಿಟ್ಟುಕೊಂಡು 22ನೇ ತಿದ್ದುಪಡಿ ಅಂಗೀಕರಿಸಲಾಯಿತು.

2.ಸಂಪತ್ ಬೆಟ್ಟಗೆರೆ, ಮೂಡಿಗೆರೆ
ಭಾರತೀಯರು `ಹಿಂದಿ'ಯನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸುವಂತೆ ಅಮೆರಿಕನ್ನರಿಗೆ ರಾಷ್ಟ್ರ ಭಾಷೆ ಇದೆಯೇ? ಕನ್ನಡದಂತೆ ಅಮೆರಿಕ ದೇಶದಲ್ಲಿ ಪ್ರಾದೇಶಿಕ ಹಾಗೂ ಉಪಭಾಷೆಗಳು ಬಳಕೆಯಲ್ಲಿವೆಯೇ?

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಯಾವುದೇ ಅಧಿಕೃತ ರಾಷ್ಟ್ರೀಯ ಭಾಷೆ ಇಲ್ಲ. ಆದರೆ, ಶಾಸನಗಳು, ನಿಯಮಾವಳಿಗಳು, ಅಧ್ಯಾದೇಶಗಳು, ಒಪ್ಪಂದಗಳು, ಫೆಡರಲ್ ನ್ಯಾಯಾಲಯದ ಆದೇಶಗಳು ಹಾಗೂ ಇನ್ನಿತರ ಎಲ್ಲ ಅಧಿಕೃತ ಹೇಳಿಕೆಗಳಲ್ಲಿ ಪ್ರಾಥಮಿಕ ಭಾಷೆಯಾಗಿ ಇಂಗ್ಲಿಷ್‌ನ್ನು ಬಳಸಲಾಗುತ್ತದೆ. ಕೆಲ ರಾಜ್ಯಗಳಲ್ಲಿ ಹಾಗೂ ಸ್ಥಳೀಯ ಕಾನೂನುಗಳಲ್ಲಿ, ಬಹುಸಂಖ್ಯಾತ ಇಂಗ್ಲಿಷ್ ಭಾಷೇತರರು ಇರುವೆಡೆಗಳಲ್ಲಿ ಮತಪತ್ರಗಳಂತಹ ದಾಖಲೆಗಳನ್ನು ಬಹುಭಾಷೆಗಳಲ್ಲಿ ಮುದ್ರಿಸುವ ಅಗತ್ಯವಿರುತ್ತದೆ.

ಜಗತ್ತಿನ ಎಲ್ಲ ದೇಶಗಳಿಂದಲೂ ಬಂದಿರುವ ವಲಸಿಗರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವುದರಿಂದ ಪ್ರಪಂಚದ ಎಲ್ಲ ಭಾಷೆ ಬಳಸುವವರನ್ನು ಅಲ್ಲಿ ಕಾಣಬಹುದು. ಬಹು-ಜನಾಂಗೀಯ ಸಮುದಾಯಗಳನ್ನು ಹೊಂದಿರುವ ನ್ಯೂಯಾರ್ಕಿನಂಥ ನಗರಗಳಲ್ಲಿ ಇಂಗ್ಲಿಷ್ ಜತೆಗೆ ದೈನಂದಿನ ವ್ಯವಹಾರಕ್ಕೆ ಬೇರೆ ಭಾಷೆ ಬಳಸುವವರ ನೂರಾರು ಸಮುದಾಯಗಳಿವೆ.

ದೊಡ್ಡ ಪ್ರಮಾಣದ ಭಾರತೀಯ ಸಂಜಾತ ಅಮೆರಿಕನ್ನರೂ ಸೇರಿದಂತೆ ಅನೇಕ ಸಮುದಾಯಗಳು ಒಂದಾಗಿ ಸೇರಿ, ತಮ್ಮ ಮಕ್ಕಳು ಹಾಗೂ ಇತರ ಅಮೆರಿಕನ್ನರ ಅನುಕೂಲಕ್ಕಾಗಿ ಹಿಂದಿ, ಕನ್ನಡ ಹಾಗೂ ಇತರ ಮಾತೃಭಾಷೆಗಳ ತರಗತಿಗಳನ್ನು ಮಾತ್ರವಲ್ಲದೆ ಸಂಸ್ಕೃತಿ ಕುರಿತ ತರಗತಿಗಳನ್ನೂ ಹಮ್ಮಿಕೊಳ್ಳುತ್ತಾರೆ. ಅಮೆರಿಕದಲ್ಲಿ ಮಾತನಾಡುವ ಭಾಷೆಯ ವೈಖರಿ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ.

ಅಮೆರಿಕದ ದಕ್ಷಿಣ ಗಡಿಭಾಗದಲ್ಲಿರುವ ಶಹರಗಳಲ್ಲಿ ಅನೇಕ ಅಮೆರಿಕನ್ನರು ಸ್ಪ್ಯಾನಿಶ್ ಮಾತನಾಡುತ್ತಾರೆ. ಪೆನ್ಸಿಲ್ವೇನಿಯಾ ರಾಜ್ಯದ ಅನೇಕ ಪಟ್ಟಣಗಳಿಗೆ ಭೇಟಿ ನೀಡಿದರೆ, ನೀವು ಡಚ್ ಭಾಷೆಯ ಪ್ರಕಾರವೊಂದನ್ನು ಮಾತನಾಡುವವರನ್ನು ಕೇಳುತ್ತೀರಿ. ಅದೇ ತೆರನಾಗಿ, ಲೌಸಿಯಾನಾದಲ್ಲಿ ಅನೇಕ ಸ್ಥಳೀಕರು ಕಜುನ್ ಫ್ರೆಂಚ್ ಎಂಬ ಫ್ರೆಂಚ್ ಭಾಷೆಯ ಪ್ರಕಾರವೊಂದನ್ನು ಮಾತನಾಡುತ್ತಾರೆ.

3.ಡಾ.ಮಲ್ಲಿಕಾರ್ಜುನ ಕುಂಬಾರ, ರಾಜೂರ (ಗಜೇಂದ್ರಗಡ) ತಾಲೂಕ; ರೋಣ
ಒಬಾಮಾ ಅವರು ಮೆಚ್ಚುವ, ಹೆಚ್ಚು ಓದುವ ಸಾಹಿತ್ಯ ಯಾವ ಬಗೆಯದು?
ಅಧ್ಯಕ್ಷ ಒಬಾಮ ಅವರ ಓದಿನ ಒತ್ತಾಸೆಗಳು ಹಲವು. ಕಥನ, ರಾಜಕೀಯ ಹಾಗೂ ಇತಿಹಾಸ ಕುರಿತ ಪುಸ್ತಕಗಳು ಅವರ ಓದಿನ ಪಟ್ಟಿಯಲ್ಲಿರುತ್ತವೆ. ಹರ್ಮನ್ ಮೆಲ್ವಿಲ್ಲೆ ಅವರ ಮೊಬಿ ಡಿಕ್ ಹಾಗೂ ಶೇಕ್ಸ್ ಪಿಯರನ ದುರಂತ ನಾಟಕಗಳು ಅವರಿಗೆ ಅಚ್ಚುಮೆಚ್ಚು.

4.ಬಿ. ಶಿವಾನಂದ, ಧಾರವಾಡ
ಭಾರತದಲ್ಲಿ ಇಂಡಿಯನ್ ವೆಟರ್ನರಿ ರೀಸರ್ಚ್ ಇನ್‌ಸ್ಟಿಟ್ಯೂಟ್ ಇರುವ ಹಾಗೆ, ಅಮೆರಿಕದಲ್ಲಿ ಪಶು ವೈದ್ಯಕೀಯ ವಿಭಾಗಕ್ಕೆ ಭಾರತದಲ್ಲಿರುವ ವಿದ್ಯಾರ್ಥಿಗಳು ಹೇಗೆ ಸೇರಿಕೊಳ್ಳಬಹುದು. ಈ ವಿಷಯದ ಕುರಿತು ಸಂಶೋಧನೆಯಲ್ಲಿರುವ ವಿವಿಧ ಇನ್‌ಸ್ಟಿಟ್ಯೂಟ್‌ಗಳು ಯಾವುವು. 10 +2 ನಂತರ ಮಾಡಬೇಕಾದ ಪ್ರಕ್ರಿಯೆ ಬಗ್ಗೆ ತಿಳಿಸಿ.

ಅಮೆರಿಕದಲ್ಲಿನ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗಳಿಗಾಗಿ ದಯವಿಟ್ಟು ಅಮೆರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೋಶನ್ (AVMA) ವೆಬ್ ಸೈಟಿಗೆ https://www.avma.org/Pages/home.aspx ಭೇಟಿ ನೀಡಿ. ವಿದೇಶಗಳ ವೆಟರ್ನರಿ ಪದವೀಧರರ ಪ್ರಮಾಣೀಕರಣ ಶೈಕ್ಷಣಿಕ ಆಯೋಗ (Educational Commission for Foreign Veterinary Graduates ECFVG)) ಹಾಗೂ ವೆಟರ್ನರಿ ಶೈಕ್ಷಣಿಕ ಮಾನ್ಯತೆಯ ಕೇಂದ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಾವು ಅಲ್ಲಿ ಪಡೆಯಬಹುದು.

ಸರಿಯಾದ ಶಾಲೆಯ ಆಯ್ಕೆಗೆ ಸಹಾಯ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ವಿಶ್ವವಿದ್ಯಾಲಯಗಳ ಅರ್ಜಿ ಪ್ರಕ್ರಿಯೆಯ ಕುರಿತ ಮಾರ್ಗದರ್ಶನವು ಯು.ಎಸ್.-ಭಾರತ ಶೈಕ್ಷಣಿಕ ಪ್ರತಿಷ್ಠಾನ (USIEF) ದಲ್ಲಿರುವ EducationUSA ಕೇಂದ್ರದಲ್ಲಿ ಲಭ್ಯ. ಹೆಚ್ಚಿನ ನೆರವಿಗಾಗಿ ದಯವಿಟ್ಟು ಪ್ರತಿಷ್ಠಾನವನ್ನು 044-28574423/4131 ದೂರವಾಣಿ ಮೂಲಕ ಇಲ್ಲವೇ,usiefchennai@usief.org.in ಇ-ಮೇಲ್ ಮುಖಾಂತರ ಸಂಪರ್ಕಿಸಬಹುದು. ಅಲ್ಲದೇ, ಫೇಸ್ ಬುಕ್ www.Facebook.com/EducationUSAChennai ಮುಖಾಂತರವೂ ಸಂಪರ್ಕಿಸಬಹುದು. ಅಲ್ಲದೇ, ಈ ಮುಂದಿನ ವೆಬ್ ಸೈಟುಗಳಿಗೂ www.EducationUSA.state.gov ಹಾಗೂ www.usief.org.in ಭೇಟಿ ನೀಡಬಹುದು

5.ಸುಚೇತಾ ಕಡೇ ಶಿವಾಲಯ ಗ್ರಾಮ, ಬಂಟ್ವಾಳ ತಾಲೂಕು
ನಾನು ಪ್ರೌಢಶಾಲಾ ವಿದ್ಯಾರ್ಥಿನಿ. ಭಾರತದಲ್ಲಿರುವ ಶಿಕ್ಷಣ ವ್ಯವಸ್ಥೆ ಹಾಗೂ ಅಮೆರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ವ್ಯತ್ಯಾಸವಿದೆ. ಅಲ್ಲಿಯ ಶಿಕ್ಷಣದಲ್ಲಿ ಯಾವ ಅಂಶವನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಪಠ್ಯಕ್ರಮ ಹಾಗೂ ಶಿಕ್ಷಣದ ಗುಣಮಟ್ಟವನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ರಾಜ್ಯಗಳ ಶಿಕ್ಷಣ ಇಲಾಖೆಗಳು ನಿಯಂತ್ರಿಸುತ್ತವೆ. ಅಲ್ಲಿನ ಸರ್ಕಾರಿ ಶಾಲೆಗಳು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸರ್ವಾಂಗೀಣ ಶಿಕ್ಷಣ ನೀಡಲು ಗಮನ ಹರಿಸುತ್ತವೆ. ಓದುವುದು, ಬರೆಯುವುದು, ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರಗಳ ಮೇಲೆ ವಿಶೇಷ ಗಮನ ನೀಡಲಾಗುತ್ತದೆ. ದೃಶ್ಯ ಕಲೆ, ಸಂಗೀತ, ದೈಹಿಕ ಶಿಕ್ಷಣಗಳನ್ನೂ ಕಲಿಸಲಾಗುತ್ತದೆ. ಅಲ್ಲದೇ, ಪ್ರೌಢ ಹಂತದಲ್ಲಿ ಮಾತ್ರ ಕಲಿಸಲಾಗುತ್ತಿದ್ದ ವಿದೇಶಿ ಭಾಷೆಗಳನ್ನು ಪ್ರಾಥಮಿಕ ಹಂತದಿಂದಲೇ ಕಲಿಸುವ ಪ್ರವೃತ್ತಿ ಈಚೆಗೆ ಬೆಳೆಯುತ್ತಿದೆ. ಪ್ರತಿ ತರಗತಿಯೂ ಸುಮಾರು 20ರಿಂದ 35 ವಿದ್ಯಾರ್ಥಿಗಳನ್ನು ಹೊಂದಿರುತ್ತದೆ.

ಶಾಲೆಗಳು ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನಿಗಾ ವಹಿಸಲು ಹಾಗೂ ಅದನ್ನು ಖಾತರಿ ಪಡಿಸಿಕೊಳ್ಳಲು ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರವು ವಿವಿಧ ಗ್ರೇಡ್‌ಗಳಿಗೆ ರಾಷ್ಟ್ರಾದ್ಯಂತ ಪರೀಕ್ಷೆಗಳ ಪ್ರಮಾಣೀಕರಣವನ್ನು ಅಗತ್ಯಗೊಳಿಸಿದೆ.

ಅಧ್ಯಕ್ಷ ಒಬಾಮಾ ಅವರು ಶಾಲೆಗಳಲ್ಲಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ) ವಿಷಯಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಶಿಕ್ಷಣ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಮುಂದಿನ ವೆಬ್ ಸೈಟಿಗೆ http://www.ed.gov/ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.