ಪ್ರಬಲ ರಾಜಕೀಯ ನಾಯಕನೊಬ್ಬನ ಪತ್ನಿಯ ಬದುಕಿನಲ್ಲಿ ಉಂಟಾಗುವ ತಲ್ಲಣಗಳು, ಪತಿ ಅಧಿಕಾರದ ತುತ್ತತುದಿಯನ್ನೇರಿದಾಗ ಆಕೆ ಎದುರಿಸುವ ಏಳು -ಬೀಳುಗಳು ಹಾಗೂ ತನ್ನ ಪತಿ ಅಧಿಕಾರವನ್ನು ಕಳೆದುಕೊಂಡಾಗ ಆಕೆ ಅನುಭವಿಸುವ ಅನಾಮಧೇಯತ್ವ - ಇವೇ ಮುಂತಾದ ವಿಷಯಗಳನ್ನು ಕಥಾವಸ್ತುವನ್ನಾಗಿ ಹೊಂದಿದ ಪುಸ್ತಕವೊಂದು ಮೊನ್ನೆ ನನಗೆ ಸಿಕ್ಕಿತು. ಅದನ್ನು ಓದುತ್ತಾ ಹೋದ ಹಾಗೆಲ್ಲ ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಪ್ರಚಾರವೆಂಬ ಭೂಮಿಕೆಯಲ್ಲಿ ಗಮನಾರ್ಹವಾದ ಗೋಚರತೆಯನ್ನು ಪಡೆದು ಈಗ ಹೆಚ್ಚುಕಡಿಮೆ ಸಾರ್ವಜನಿಕ ಮನಃಪಟಲದಿಂದ ಮರೆಯಾಗಿರುವ ರಾಜಕಾರಣಿಗಳ ಪತ್ನಿಯರತ್ತ ನನ್ನ ಯೋಚನೆ ತಿರುಗಿತು.

ರಾಜಕೀಯ ಕ್ಷೇತ್ರದ ಪುರುಷಪ್ರಧಾನ ಸ್ವರೂಪವನ್ನು ವಿಶ್ಲೇಷಣೆಗೆ ಒಳಪಡಿಸುವಾಗ ನಾವು ಸಾಮಾನ್ಯವಾಗಿ ಅಧಿಕಾರವನ್ನು ಪಡೆಯುವ ಅವಕಾಶಗಳಿಂದ ವಂಚಿತರಾದ, ಅಥವಾ ಸಂದರ್ಭೋಚಿತವಾಗಿ ಸ್ವಾರ್ಥ ರಾಜಕಾರಣದಲ್ಲಿ ದಾಳಗಳಾಗಿ ಬಳಸಿಕೊಳ್ಳಲ್ಪಡುವಂಥ ಮಹಿಳೆಯರ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ ಅಧಿಕಾರದ ಸ್ಧಾನದಲ್ಲಿರುವ ರಾಜಕಾರಣಿಗಳ ಪತ್ನಿಯರ ಬಗ್ಗೆ ಮಹಿಳಾ ದೃಷ್ಟಿಕೋನದಿಂದ ಆಲೋಚಿಸಲಾರಂಭಿಸಿದಾಗ, ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ ಹಾಗೂ ಅವರು ಸಮಾಜದಲ್ಲಿ ನಡೆದುಕೊಳ್ಳುವ ಹಾಗೂ ಇತರರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆಯೂ ಅನೇಕ ಚಿತ್ರಗಳು ಮನದಲ್ಲಿ ಮೂಡಿ ಬರಲಾರಂಭಿಸಿದವು.

ಹಾಗೆಯೇ ರಾಜಕಾರಣಿಗಳ ಪತ್ನಿಯರು ಒಂದು ವಿಶೇಷ ವರ್ಗವೇ ಅಥವಾ ಬಹುತೇಕ ಮಹಿಳೆಯರನ್ನು ಬಾಧಿಸುವ ಲಿಂಗ ಸ್ಥಿರ ಮಾದರಿಗಳು ಇವರನ್ನೂ ಬಾಧಿಸುತ್ತವೆಯೋ ಎಂಬ ಪ್ರಶ್ನೆಯನ್ನು ಎತ್ತಿದಾಗ ರಾಜಕಾರಣಿಗಳ ಕುಟುಂಬಗಳ ಮಹಿಳೆಯರಿಗೂ ಇತರರಿಗೂ ಹೆಚ್ಚಿನ ವ್ಯತ್ಯಾಸಗಳೇನೂ ಕಾಣಲಿಲ್ಲ.

ಇದಕ್ಕೆ ನಿದರ್ಶನವಾಗಿ ಮೊದಲಿಗೆ ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರಕ್ಕಿಳಿದಿದ್ದ ಮಹಿಳೆಯರನ್ನೇ ತೆಗೆದುಕೊಳ್ಳಬಹುದು. ತಮ್ಮ ಪತಿಯ ಪರ ಮತಯಾಚನೆಗಿಳಿದಿದ್ದ ಕೆಲವು ಪ್ರಮುಖ ರಾಜಕೀಯ ನಾಯಕರ ಪತ್ನಿಯರು ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು. ಆದರೆ ಪಕ್ಷಾತೀತವಾಗಿ ಇವರೆಲ್ಲರ ಪ್ರಚಾರ ವೈಖರಿಯಲ್ಲಿ ಒಂದು ರೀತಿಯ ಏಕಪ್ರಕಾರತೆ ಇತ್ತು. ತಮ್ಮನ್ನು ಸ್ವತಂತ್ರ ವ್ಯಕ್ತಿತ್ವವುಳ್ಳ ವ್ಯಕ್ತಿಗಳಂತೆ ಗುರುತಿಸಿಕೊಳ್ಳುವುದಕ್ಕಿಂತ ಪತಿಯ ನೆರಳಿನಲ್ಲಿ ಚಲಿಸುತ್ತಾ ಆತನ ಯಶಸ್ಸನ್ನೇ ಏಕೈಕ ಗುರಿಯಾಗಿಸಿಕೊಂಡಿದ್ದಂತೆ ಬಿಂಬಿಸುತ್ತಿದ್ದವರೇ ಈ ಗುಂಪಿನಲ್ಲಿ ಹೆಚ್ಚಾಗಿದ್ದುದು. ವಿಷಯಾಧಾರಿತ ಪ್ರಚಾರಕ್ಕಿಂತ ವೈಯಕ್ತಿಕ ಅಂಶಗಳಿಗೇ ಇವರಲ್ಲನೇಕರು ಒತ್ತು ನೀಡಲು ಪ್ರಯತ್ನಿಸುತ್ತಿದ್ದುದು, ಎಲ್ಲೋ ಒಂದೆಡೆ ಹೆಣ್ಣಿನ ವಿಶೇಷ ಗುಣ ಎಂದು ಪರಿಗಣಿಸಿರುವ ಭಾವುಕತೆಯನ್ನು ಬಂಡವಾಳವನ್ನಾಗಿರಿಸಿಕೊಂಡು ಪತಿಯನ್ನು ಗೆಲ್ಲಿಸಲು ಹೊರಟಹಾಗಿತ್ತು.

ಮಹಿಳಾ ಪ್ರಚಾರಕರಿಗೂ ಮಹಿಳಾ ಮತದಾರರಿಗೂ ನಡುವೆ ವಿಶೇಷವಾದ ನಂಟು ಇದೆ ಎಂಬ ಭಾವನೆಯ ಸುತ್ತ ತಮ್ಮ ಪ್ರಚಾರ ತಂತ್ರಗಳನ್ನು ಹೆಣೆದಿದ್ದರು. ಪುರುಷ ಅಭ್ಯರ್ಥಿಗಳೊಡನೆ ಮುಕ್ತವಾಗಿ ಮಾತನಾಡಲು ಮಹಿಳಾ ಮತದಾರರಿಗೆ ಹಿಂಜರಿಕೆಯಿದೆ, ಆದ್ದರಿಂದ ನಮ್ಮಡನೆ ತಮ್ಮ ನೋವು-ನಲಿವುಗಳನ್ನೂ, ಬವಣೆಗಳನ್ನೂ ಸಂಕೋಚವಿಲ್ಲದೆ ಹಂಚಿಕೊಳ್ಳುತ್ತಾರೆ ಎಂದು ಈ ಪತ್ನಿಯರು ಹೇಳಿಕೊಂಡದ್ದು ನಿಜವೇ ಇರಬಹುದು. ಆದರೆ ಇಲ್ಲಿ ಏಳುವ ಒಂದು ಪ್ರಶ್ನೆಯೆಂದರೆ ಅವರ ಬಳಿ ಈ ಮಹಿಳಾ ಮತದಾರರು ಹಂಚಿಕೊಂಡಂಥ ಅನುಭವಗಳು ಮತ್ತು ಆದ್ಯತೆಗಳು ಕೇವಲ ಮತಗಳಾಗಿ ಪರಿವರ್ತಿತವಾದುವೇ ಅಥವಾ ಪತಿ ಪಡೆದ ಅಧಿಕಾರದ ಮೂಲಕ ಮಹಿಳಾಪರ ಅಥವಾ ಜನಪರ ನೀತಿಗಳಾಗಿ ರೂಪಿತವಾದುವೇ ಎಂಬುದು.

ಚುನಾವಣೆಗಳು ಮುಗಿದು ಇವರಲ್ಲನೇಕ ಮಹನೀಯರು ಅಧಿಕಾರದ ಗದ್ದುಗೆಯನ್ನೂ ಏರಿದ್ದಾರೆ. ಆದರೆ ಎಷ್ಟು ಮಂದಿ ಪತ್ನಿಯರು ಪತಿಯ ಪರ ತಾವು ನೀಡಿದ ಆಶ್ವಾಸನೆಗಳನ್ನು ಆತ ಕಾರ್ಯರೂಪಕ್ಕೆ ತಂದಿರುವುದರ ಬಗ್ಗೆ ಪತಿಯನ್ನು ಪ್ರಶ್ನಿಸಿದ್ದಾರೆ? ಚುನಾವಣೆಗಳು ಮುಗಿದು ಫಲಿತಾಂಶಗಳು ಪ್ರಕಟವಾದ ಮೇಲೆ ಇವರಲ್ಲೆಷ್ಟು ಮಂದಿ ಕ್ಷೇತ್ರಗಳಿಗೆ ಹಿಂದಿರುಗಿ ತಾವು ಮತ ಯಾಚಿಸಿದ ಮಹಿಳಾ ಮತದಾರರೊಡನೆ ಸಂಪರ್ಕ ಮುಂದುವರೆಸಿದ್ದಾರೆ? ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬ ಹಳೇ ಕತೆಯನ್ನೇ ಕೇಳಿಕೊಂಡು ಪತಿ ಕಂಡ ಯಶಸ್ಸಿನಲ್ಲಿಯೇ ತೃಪ್ತಿಪಡಲು ಇವರು ಯತ್ನಿಸುತ್ತಿದ್ದಾರೆಯೋ ಅಥವಾ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೋ? ಈ ಪ್ರಶ್ನೆಗಳಿಗೆಲ್ಲ ಮಾಹಿತಿ ಆಧರಿತ ಉತ್ತರಗಳನ್ನು ಹುಡುಕಬೇಕಿದೆ.

ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಲ್ಲಿ ಹೆಚ್ಚಿನ ಸಂಖ್ಯೆಯವರು ಅಧಿಕಾರಾರೂಢ ರಾಜಕಾರಣಿಗಳ ಪತ್ನಿಯರು. ಮಾಧ್ಯಮಗಳ ಮೂಲಕ ನಮಗೆ ಗೋಚರವಾದವರು ಹತ್ತೋ-ಇಪ್ಪತ್ತು ಮಂದಿಯಷ್ಟೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಪುರುಷರಲ್ಲಿ ಎಲ್ಲ ವಿವಾಹಿತ ಅಭ್ಯರ್ಥಿಗಳ ಪರವಾಗಿ ಅವರ ಪತ್ನಿ ಅಥವಾ ಕುಟುಂಬದ ಇತರ ಸದಸ್ಯರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಮೇಲ್ನೋಟಕ್ಕೆ ಕಾಣುವ ಹಾಗೆ ಬಹುತೇಕ ರಾಜಕಾರಣಿಗಳ ಪತ್ನಿಯರಿಗೆ ಸಾರ್ವಜನಿಕ ವಲಯಕ್ಕೆ ಪ್ರವೇಶಿಸುವ ಇಚ್ಛೆಯಾಗಲಿ, ಕೌಟುಂಬಿಕ ಕೋಟೆಯಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶವಾಗಲಿ ಇಲ್ಲ ಎಂಬ ಭಾವನೆ ಮೂಡುತ್ತದೆ.

ಅಧಿಕಾರದಲ್ಲಿರುವ ಹಲವಾರು ಪ್ರಮುಖ ನಾಯಕರ ಪತ್ನಿಯರು ಸಾರ್ವಜನಿಕ ಬದುಕಿನಿಂದ ಹೆಚ್ಚು ಕಡಿಮೆ ದೂರವೇ ಇದ್ದಾರೆ. ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳ ಪತ್ನಿ ಇಡೀ ಚುನಾವಣೆಯ ಪ್ರಕ್ರಿಯೆಯಿಂದ ದೂರವೇ ಇದ್ದದ್ದು, ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಭಾಗವಹಿಸದೇ ಇದ್ದದ್ದು - ಇದನ್ನು ಕುರಿತು ಪ್ರಶ್ನೆಗಳು ಎದ್ದಿದ್ದವು. ಆದರೆ ಅವರ ಕುಟುಂಬ ವಲಯದಿಂದ ಬಂದ ಪ್ರತಿಕ್ರಿಯೆ ಏನೆಂದರೆ `ಮೊದಲಿನಿಂದಲೂ ಅವರ ಸ್ವಭಾವವೇ ಹಾಗೆ, ಯಾವ ಕಾಲಕ್ಕೂ ತಮ್ಮ ಪತಿಯ ರಾಜಕೀಯ ಬದುಕಿನಲ್ಲಿ ಅವರು ಪ್ರವೇಶಿಸಿಲ್ಲ, ಆದ್ದರಿಂದ ಈಗಲೂ ಬದಲಾಗುವ ಕಾರಣವೇ ಇಲ್ಲ' ಎಂಬುದು.

ತನ್ನ ಪತಿ ರಾಜ್ಯದ ಮುಖ್ಯಮಂತ್ರಿಯಾದಾಗಲೂ ಸಾರ್ವಜನಿಕ ಸಾರಿಗೆಯನ್ನೇ ಬಳಸಿರುವಂಥ, ಕೆಲ ವಿಶೇಷ ಸೌಲಭ್ಯಗಳನ್ನು ಅವರು ಬಳಸಿಕೊಳ್ಳಲು ಅವಕಾಶವಿದ್ದರೂ ಅದರಿಂದ ದೂರ ಉಳಿದಿರುವಂಥ ಪತ್ನಿಯರು ಇದ್ದಾರೆ. ಖಾಸಗಿ ಮತ್ತು ಸಾರ್ವಜನಿಕ ಬದುಕುಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ಪತಿಯ ಬದಲಾದ ಸ್ಧಾನ ತನ್ನ ಬದುಕಿನಲ್ಲಿ ಬದಲಾವಣೆಗಳನ್ನು ತರುವ ಅವಶ್ಯಕತೆ ಇಲ್ಲ ಎನ್ನುವ ಧೋರಣೆಯನ್ನು ರಾಜಕೀಯ ನಾಯಕರ ಪತ್ನಿಯರು ತೋರಿದ್ದಾರೆ. ಇದು ಅವರ ಆಯ್ಕೆಯೋ ಅಥವಾ ಪತಿಯ ನಿರ್ಧಾರವೋ, ಒಟ್ಟಿನಲ್ಲಿ ಸಮಾಜಕ್ಕೆ ಒಂದು ಸ್ಪಷ್ಟ ಸತ್ಸಂದೇಶವನ್ನಂತೂ ಕಳುಹಿಸುತ್ತದೆ.

ಇದಕ್ಕೆ ವಿರುದ್ಧವಾದ ಪ್ರವೃತ್ತಿಯೆಂದರೆ ಪತ್ನಿಯಾದವಳು ಪತಿಯ ರಾಜಕೀಯ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಆತನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಹುದು. ಕೆಲ ಸಂದರ್ಭಗಳಲ್ಲಂತೂ ಪತ್ನಿ ಪರ್ಯಾಯ ಅಧಿಕಾರ ಕೇಂದ್ರವಾಗಿ ಕೆಲಸ ಮಾಡಿದಂಥ ನಿದರ್ಶನಗಳೂ ನಮ್ಮ ಮುಂದಿವೆ. ಭ್ರಷ್ಟಾಚಾರವೂ ಸೇರಿದಂತೆ, ಪತಿಯ ಇಲಾಖಾ ಅಧಿಕಾರಿಗಳ ಅಥವಾ ಇತರ ಸಿಬ್ಬಂದಿ ವರ್ಗದ ಮೇಲೆ ಅಧಿಕಾರ ಚಲಾಯಿಸುವುದು, ಕಛೇರಿ ಸೌಲಭ್ಯಗಳನ್ನು ವೈಯಕ್ತಿಕ ಕೆಲಸಗಳಿಗಾಗಿ ಬಳಸಿಕೊಳ್ಳುವುದು, ಪತಿಯ ರಾಜಕೀಯ ಸ್ಧಾನದ ಬೆಂಬಲದಿಂದ ಆರ್ಥಿಕವಾಗಿ ಲಾಭದಾಯಕವಾದ ಉದ್ಯಮಗಳನ್ನು ತೆರೆಯುವುದು ಅಥವಾ ತನ್ನ ಕುಟುಂಬ ಅಥವಾ ಬಂಧುತ್ವ ವಲಯಕ್ಕೆ ಅನುಕೂಲವಾಗುವಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಬಂಧಿಸಿದ ವ್ಯಕ್ತಿಗಳು ಅಥವಾ ವ್ಯವಸ್ಧೆಗಳ ಮೇಲೆ ಪ್ರಭಾವ ಬೀರುವುದು - ಇವೇ ಮುಂತಾದ ಆರೋಪಗಳು ಕೇಳಿ ಬಂದಿವೆ.

ಒಮ್ಮಮ್ಮೆ ಇಂಥ ಪ್ರಕರಣಗಳು ಅತಿರೇಕಕ್ಕೆ ಹೋಗಿ ಪತಿಯ ದುರಾಡಳಿತಕ್ಕೆ ಪತ್ನಿಯ ದುರಾಸೆ, ದೌರ್ಬಲ್ಯ ಅಥವಾ ದಬ್ಬಾಳಿಕೆಯೇ ಕಾರಣ ಎಂಬ ವ್ಯಾಖ್ಯಾನವನ್ನೂ ನಾವು ಕೇಳಬಹುದು. ಇಂತಹ ಘಟನೆಗಳೇನಾದರೂ ನಿಜವಾಗಿ ನಡೆಯುತ್ತಿದ್ದಲ್ಲಿ ಅವುಗಳನ್ನು ಖಂಡಿಸಿ, ತಡೆ ಹಾಕುವ ಜವಾಬ್ದಾರಿ ಜನ ಪ್ರತಿನಿಧಿಯಾಗಿ ಆಯ್ಕೆಯಾದ ಪುರುಷನ ಮೇಲೂ ಇರುತ್ತದೆ. ಪತಿ ಮಂತ್ರಿಯ ಅಥವಾ ಮತ್ತ್ಯಾವುದೋ ಅಧಿಕಾರ ಸ್ಧಾನದಲ್ಲಿಯೋ ಇದ್ದಾಗ ಆ ಸ್ಥಾನವನ್ನು ಪತ್ನಿಯಾದವಳು ಯಾವುದೇ ಸಂದರ್ಭದಲ್ಲೂ ಅಪಬಳಕೆ ಮಾಡಕೊಳ್ಳಲು ಆಸ್ಪದ ಇಲ್ಲ.

ನಮ್ಮ ಸಮಾಜದಲ್ಲಿ ರಾಜಕೀಯ ನಾಯಕನ ಪತ್ನಿಗೆ ಅತಿಯಾದ ಪ್ರಾಶಸ್ತ್ಯವನ್ನಿತ್ತು ಆಕೆಯನ್ನೂ ಓರ್ವ ನಾಯಕಿಯಂತೆ ಬಿಂಬಿಸಿ, ಆಕೆಯ ಮನಸ್ಸಿನಲ್ಲಿ ತನ್ನ ಪ್ರಾಮುಖ್ಯತೆಯ ಬಗ್ಗೆ ಹುಸಿಯಾದ ಕಲ್ಪನೆಗಳನ್ನು ಬಿತ್ತುವ ಹಿಂಬಾಲಕರ ವರ್ಗವೊಂದು ಅಧಿಕಾರ ವಲಯವನ್ನು ಸಾಮಾನ್ಯವಾಗಿ ಸುತ್ತುವರೆದಿರುತ್ತದೆ. ಇಂಥವರ ಬಗ್ಗೆ ಮಹಿಳೆಯರು ಎಚ್ಚರ ವಹಿಸದಿದ್ದರೆ ಪತಿ ಅಧಿಕಾರ ಕಳೆದುಕೊಂಡಾಗ ಅಥವಾ ಆತನ ಅಧಿಕಾರಾವಧಿ ಮುಗಿದಾಗ ಅವರು ಅನುಭವಿಸಬೇಕಾದ ನೋವುಗಳಿಗೆ ಅವರೇಗುರಿಯಾಗುತ್ತಾರಷ್ಟೆ.

ನಮ್ಮ ಸಮಾಜದಲ್ಲಿ ರಾಜಕಾರಣಿಗಳ ಪತ್ನಿಯರ ಮತ್ತೊಂದು ವರ್ಗವನ್ನೂ ನಾವು ಕಾಣಬಹುದು. ಆಕೆಗೆ ಸ್ವಪ್ರತಿಭೆ ಇರಲಿ ಇಲ್ಲದಿರಲಿ, ಸಂದರ್ಭಕ್ಕೆ ತಕ್ಕ ಹಾಗೆ ಪತಿ ಅಥವಾ ಆತನ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲು ಪತ್ನಿಯನ್ನು ದಾಳವಾಗಿ ಬಳಸಿಕೊಳ್ಳುವುದುಂಟು. ಮಹಿಳೆಯರನ್ನು ಮತದಾರರಾಗಿ ಅಥವಾ ಪ್ರಚಾರದ ಸಾಧನಗಳಾಗಿ ಬಳಸಿಕೊಳ್ಳುವ ರಾಜಕೀಯ ವ್ಯವಸ್ಥೆ ಅವರಿಗೆ ಮುಕ್ತ ಸ್ಪರ್ಧೆಗೆ ಅವಕಾಶ ನೀಡುವ ವಿಚಾರ ಬಂದಾಗ ಮಾತ್ರ ಏಕೆ ಹಿಂಜರಿಯುತ್ತದೆ ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಆದರೆ ಪತಿ ಸತ್ತಾಗ ಅಥವಾ ಅಧಿಕಾರವನ್ನು ಕಳೆದು ಕೊಂಡಾಗ ಯಾವುದೇ ಮುಲಾಜಿಲ್ಲದೆ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲು ರಾಜಕೀಯ ಪಕ್ಷಗಳು ಸಿದ್ಧವಾಗುತ್ತವೆ.

ವೈಧವ್ಯಕ್ಕೆ ಸಾಮಾಜಿಕ ಕಳಂಕ ಅಂಟಿಸುವ ಪುರುಷ ಪ್ರಧಾನ ವ್ಯವಸ್ಥೆ ಇದೇ ವೈಧವ್ಯವನ್ನು ವೈಭವೀಕರಿಸಿ, ಅದು ಸೃಷ್ಟಿಸುವ ಅನುಕಂಪವನ್ನು ಬಂಡವಾಳವಾಗಿರಿಸಿಕೊಂಡು ವಿಧವೆ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿರುವಂಥ ಹಲವಾರು ಪ್ರಕರಣಗಳು ನಮ್ಮ ಮುಂದಿವೆ. ಆದರೆ ಇಂಥವರ ರಾಜಕೀಯ ಭವಿಷ್ಯ ಸುಸ್ಥಿರ ಅಥವಾ ಸುಭದ್ರ ಸ್ಥಿತಿಯಲ್ಲಿರುತ್ತದೆ ಎಂಬ ಭರವಸೆಯೇನಿಲ್ಲ. ಮುಂದಿನ ಚುನಾವಣೆ ಬಂದಾಗ ಮತ್ತ್ಯಾವುದೋ ಒತ್ತಡಗಳಿಗೆ ಮಣಿದು ಇವರನ್ನು ಚುನಾವಣಾ ಕಣದಿಂದ ಕಿತ್ತೊಗೆಯಬಹುದು. ಹಣಬಲ, ಜನಬಲ, ಪಕ್ಷಬಲಗಳ್ಯಾವುದೂ ಇಲ್ಲದೆ ಈ ಮಾಜಿ ರಾಜಕಾರಣಿಯ ಪತ್ನಿ ರಾಜಕೀಯದಿಂದ ನಿರ್ಗಮಿಸುವ ಸ್ಥಿತಿ ತಲುಪಿದರೂ ಆಶ್ಚರ್ಯವಿಲ್ಲ.

ಪತಿ ಭ್ರಷ್ಟಾಚಾರದ ಆರೋಪ ಹೊತ್ತು ಅಧಿಕಾರ ಕಳೆದುಕೊಳ್ಳುವಂಥ ಸಂದರ್ಭ ಸೃಷ್ಟಿಯಾದಾಗ ಪತ್ನಿಯಾದವಳು ಒಂದು ಸಿದ್ಧ ಅಭ್ಯರ್ಥಿಯಾಗುತ್ತಾಳೆ. ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ ಎನ್ನುವಂಥ ಸಂದರ್ಭ ಎದುರಾದಾಗ ಶೂನ್ಯ ರಾಜಕೀಯ ಅನುಭವವನ್ನು ಹೊಂದಿದ್ದ ಆತನ ಪತ್ನಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲ್ಪಟ್ಟಿದ್ದು, ಆಕೆಯ ಆಡಳಿತಾವಧಿಯಲ್ಲಿ ನಡೆದು ಹೋದ ಅಚಾತುರ್ಯಗಳು ಈಗ ಇತಿಹಾಸದ ಒಂದು ಭಾಗ. ಭ್ರಷ್ಟಾಚಾರಿ ಪತಿಯ ಬದಲಿಗೆ ಗಾದಿಗೇರುವ ಪತ್ನಿ ಸ್ವತಃ ಭ್ರಷ್ಟ ಮುಕ್ತಳಾಗಬೇಕೆಂಬ ನಿಯಮವೇನೂ ಇಲ್ಲ.

ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ, ಮಂತ್ರಿಯಾಗಿದ್ದ ಪತಿಯ ಮರಣಾನಂತರ ಗೃಹಿಣಿ ಪಟ್ಟದಿಂದ ರಾಜ್ಯದ ಗೃಹ ಮಂತ್ರಿ ಪಟ್ಟಕೇರಿಸಲ್ಪಟ್ಟು ಆಂಧ್ರದ ಪ್ರಥಮ ಮಹಿಳಾ ಗೃಹ ಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರಳಾಗಿ ತೀರಾ ಇತ್ತೀಚೆಗೆ ಭ್ರಷ್ಟಾಚಾರದ ಆರೋಪದ ಮೇಲೆ ಪದಚ್ಯುತಿಗೊಂಡ ಸಬಿತಾ ಇಂದ್ರ ರೆಡ್ಡಿ ಪ್ರಕರಣ ಕೂಡ ಪತ್ನಿಗೆ ಅಧಿಕಾರವನ್ನು ನೀಡಿದ ಮಾತ್ರಕ್ಕೆ ಅದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳುತ್ತಾರೆಂದು ಆಶ್ವಾಸನೆಯೇನಿಲ್ಲ ಎನ್ನುವುದಕ್ಕೂ ಸಾಕ್ಷಿಯಾಗಿದೆ.

ಭಾರತದ ರಾಜಕಾರಣಿಗಳ ಪತ್ನಿಯರ ಜೀವನ, ಅವರ ಬದುಕಿನಲ್ಲಿ ತಲೆದೋರುವ ಸಮಸ್ಯೆಗಳು ಮತ್ತು ಸವಾಲುಗಳು, ಪತಿಗೆ ಅಧಿಕಾರ ಬಂದಾಗ ಅವರು ನಡೆದುಕೊಳ್ಳುವ ರೀತಿ ಹಾಗೂ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಇವರನ್ನು ನಡೆಸಿಕೊಳ್ಳುವ ರೀತಿ - ಇವುಗಳನ್ನೆಲ್ಲಾ ವಿಶ್ಲೇಷಿಸುತ್ತಾ ಹೊರಟರೆ ನಮ್ಮ ಮುಂದೆ ಮೂಡಿ ಬರುವ ಚಿತ್ರದಲ್ಲಿ ಏಕಪ್ರಕಾರತೆ ಇರುವುದಿಲ್ಲ. ಸಂಪೂರ್ಣ ಅನಾಮಧೇಯತ್ವ ಸ್ಥಿತಿಯಲ್ಲಿರುವುದರಿಂದ ಹಿಡಿದು ಪತಿ ಅಧಿಕಾರದಲ್ಲಿರುವವರೆಗೂ ನಿರಂತರವಾಗಿ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುವವರೆಗೆ ರಾಜಕಾರಣಿಗಳ ಪತ್ನಿಯರನ್ನು ವಿವಿಧ ಗುಂಪುಗಳಲ್ಲಿ ನಾವು ಇಡಬಹುದು.

ಸಮಾಜದ ಕಣ್ಣಿಗೆ ಕಾಣಿಸಿಕೊಳ್ಳುವವರಲ್ಲಿ ಕೆಲವರು ತಮ್ಮ ಸನ್ನಡತೆಯಿಂದ, ಸದಭಿರುಚಿಯಿಂದ, ಸರಳತೆಯಿಂದ ಗೋಚರತೆಯನ್ನು ಪಡೆದರೆ, ಮತ್ತೆ ಕೆಲವರು ಪತಿ ಪಡೆದ ಅಧಿಕಾರವನ್ನು ನಕಾರಾತ್ಮಕವಾಗಿ ಬಳಸಿಕೊಂಡೇ ಗೋಚರತೆಯನ್ನು ಗಿಟ್ಟಿಸುತ್ತಾರೆ.ತನ್ನ ಪತಿ ಸಂವಿಧಾನಾತ್ಮಕವಾಗಿ ದತ್ತವಾದ ಅಧಿಕಾರವನ್ನು ಗಳಿಸಿರುವುದರಿಂದಲೂ ಆ ಅಧಿಕಾರ ಜನರಿಂದ ಪ್ರದಾನವಾಗಿರುವುದರಿಂದಲೂ ಆ ಸ್ಥಾನದ ಗೌರವ ಮತ್ತು ಜವಾಬ್ದಾರಿಗಳನ್ನು ಕಾಪಾಡುವುದರಲ್ಲಿ ಪತ್ನಿಯ ಪಾತ್ರವೂ ಇದೆ. ಆದರೆ ಪತಿಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಮಾತ್ರ ಪತ್ನಿಗಿಲ್ಲ. ಹಾಗೆಯೇ ಪತಿಯ ರಾಜಕೀಯ ಬದುಕಿಗೂ ತನಗೂ ಸಂಬಂಧವೇ ಇಲ್ಲ ಎನ್ನುವ ಮನೋಭಾವವೂ ಸರಿಯಲ್ಲ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.