ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಿರ್ಚಿ-ಮಂಡಕ್ಕಿ

ADVERTISEMENT

ಮೊಸರಿನಿಂದ ಮೆಹಂದಿ ಖರ್ಚಿನವರೆಗೆ...

ಯರ್ಲಗಡ್ಡ ಈಶ್ವರಿ ಯಾಕೋ ಬಹಳ ಸುಸ್ತಾದಂತಿದ್ದಳು. ಒಂಥರಾ ಆಲಸ್ಯ. ಯಾರ ಹತ್ತಿರವೂ ಮಾತಿಲ್ಲ. ನಿಜವಾದ ಹಿಂಸೆ ನೋಡಬೇಕು ಅಂದ್ರೆ ಭರ್ಜರಿ ದಾಂದಲೆ ಹಾಕುವವರ ಜೊತೆ ಒಂದು ಸೈಲೆಂಟ್ ಪಾರ್ಟಿ ಸೇರಿಸಿಬಿಡಬೇಕು. ಆ ಪಾರ್ಟಿ ಮಾತಾಡಲ್ಲ, ಉಳಿದವರು ಅದನ್ನು ಅಲಕ್ಷ್ಯ ಮಾಡಿ ಮಜಾ ಮಾಡೋ ಹಂಗೂ ಇಲ್ಲ.
Last Updated 16 ಜೂನ್ 2018, 9:04 IST
fallback

ಭಾಮೆಯ ನೋಡಲು ಬಂದ ಗಂಡಿನ ಗುಂಡಿಗೆ!

ವಿಜಿಯ ಪಕ್ಕದ ರೂಮಿನಲ್ಲಿದ್ದ ಗೌಡರ ಹುಡುಗಿ ಇಂದುಮತಿ ಒಂಥರಾ ಮಜಾ ಇದ್ದಳು. ನೋಡಲು ಕಟ್ಟುಮಸ್ತಾಗಿ, ಗುಂಡ ಗುಂಡಗೆ ಇದ್ದಳು. ಹೆಂಗಸರ ಥರ ಬಳುಕಿ ನಡೆಯಲು ಅವಳಿಗೆ ಬರುತ್ತಿರಲಿಲ್ಲ. ಗಟವಾಣಿ ಥರದ ವ್ಯಕ್ತಿತ್ವ.
Last Updated 16 ಜೂನ್ 2018, 9:04 IST
fallback

ಜಯರಥನಿಂದ ಶುರುವಾದ ಅತಿ ಆಚಾರ

ರಶ್ಮಿಯ ಅಪ್ಪ ಆರ್ಮಿಮ್ಯಾನ್. ಅದರ ಫಲವಾಗಿ ಈ ಹುಡುಗಿ ಮೈಸೂರಲ್ಲಿ ಹುಟ್ಟಿ, ಅಖಿಲ ಭಾರತದಲ್ಲಿ ಬೆಳೆದು ಟಿಸಿಲುಗಳನ್ನು ಬೆಳೆಸಿಕೊಂಡಿದ್ದಳು. ತೀರಾ ಸಿಟ್ಟು ಬಂದರೆ ಬಾಯಲ್ಲಿ ಹಿಂದಿ ಬೈಗುಳಗಳು, ಇಂಗ್ಲಿಷಿನ ‘ಬ್ಲಡಿ’ ’**** ಯೂ’ ಗಳೂ ಹೂವು ಅರಳುವಷ್ಟೇ ಸಹಜವಾಗಿ ಅರಳುತ್ತಿದ್ದವು.
Last Updated 16 ಜೂನ್ 2018, 9:04 IST
fallback

ಪುಣ್ಯನಗರೀ ಕೃಪಾಜನಿತ ಚಪಾತಿ ಸುಂದರಿ

ಇಂದುಮತಿಯ ವಧುಪರೀಕ್ಷೆ ವರನಿಗೆ ಇಕ್ಕಟ್ಟಾಗಿ ಪರಿಣಮಿಸಿ ಅವಳು ಅಮೆರಿಕದ ಸೈಂಟಿಸ್ಟ್ ಅನ್ನು ‘ಹಾಡೋಕೆ, ಮಕ್ಕಳನ್ನ ಆಡಿಸೋಕೆ, ಅಡುಗೆ ಮಾಡೋಕೆ ಬರುತ್ತಾ’ ಅಂತ ತಿರುಗಿಸಿ ಕೇಳಿದ್ದು ಹಳೇ ಕಥೆಯಾಗುತ್ತಾ ಬಂದಿತ್ತು.
Last Updated 16 ಜೂನ್ 2018, 9:04 IST
fallback

ಸರ್ವ ರೋಗಾನಿಕಿ ಕುದುರೆ ಸಾರೇ ಮದ್ದು

ಶಿವರಾಜನಿಗೆ ‘ದಿನಕ್ಕೊಂದು ಇಂಗ್ಲಿಶ್ ಪದ’ ಅಂತ ಪ್ರಾಮಿಸ್ ಮಾಡಿದ ರಶ್ಮಿ ಮತ್ತೆ ಮಾತಾಡಿಸುವ ಗೋಜಿಗೆ ಹೋಗಿರಲಿಲ್ಲ. ಅದ್ಯಾಕೋ ಏನೋ ಅವಳ ಮೌನ ಬಹಳ ಅಸಹನೀಯವಾಗಿತ್ತು. ಅವಳ ಮಾತು ಬರಬರುತ್ತಾ ಕಡಿಮೆಯಾಗಿ ಸಂಪೂರ್ಣವಾಗಿ ನಿಂತು ಹೋಗುವ ಹಂತಕ್ಕೆ ಬಂದಿತ್ತು.
Last Updated 16 ಜೂನ್ 2018, 9:04 IST
fallback

‘ಅವ್ನ್ ಕೈಯಿಂದ ಇನ್ನ್ ಮೇಲೆ ಲೆಟರ್ ಇಸ್ಕೊಳೋದು ಹೆಂಗೇ’

ವೈನು ಕಕ್ಕಿಕೊಂಡು ಗೋವಾದಿಂದ ಬಂದ ಮೇಲೆ ಹುಡುಗಿಯರಲ್ಲಿ ಆದ ಒಂದು ಮುಖ್ಯ ಮಾರ್ಪಾಟೆಂದರೆ ಸ್ವಲ್ಪ ದಿನ ನೀರನ್ನೂ ಬಹಳ ಎಚ್ಚರ ವಹಿಸಿ ಕುಡಿದಿದ್ದು. ಇಂದುಮತಿಯ ಬಗ್ಗೆಯಂತೂ ಹೇಳುವುದೇ ಬೇಡ. ಅವಳ ರೂಮಲ್ಲಿದ್ದ ಕೊಡವರ ಹುಡುಗೀರು ವೈನ್ ತಂದಿಟ್ಟುಕೊಂಡರೂ ಅವಳಿಗೆ ವಾಂತಿ ಬರುತ್ತಿತ್ತು. ಇವಳು ಹೀಗೆ ಆಗಾಗ್ಗೆ ವಾಕರಿಸುವುದನ್ನು ನೋಡಿ ಇಂದುವಿನ ರೂಮ್‌ಮೇಟ್ ಕಾವೇರಿ ತಮಾಷೆಗೆ ಕೇಳಿಯೂ ಬಿಟ್ಟಳು. ‘ಆರ್ ಯೂ ಪ್ರೆಗ್ನೆಂಟ್?’
Last Updated 16 ಜೂನ್ 2018, 9:04 IST
fallback

ಗುಲ್‌ ಮೊಹರ್ ಕೆಳಗೆ ಮನಸ್ಸಿನ ಚೂರುಗಳು

ಇಪ್ಪತ್ತೆರಡರ ಈಶ್ವರಿ ಬಹಳ ನಿರ್ಲಿಪ್ತವಾಗಿ ತನ್ನ ಡೈವೋರ್ಸಿನ ಸಂಗತಿ ಹೇಳಿದ್ದಳು. ಅದೂ ಜೀವನ್ಮುಖಿಯಾಗಿದ್ದ ಸಂದರ್ಭದಲ್ಲಿ ಹೇಳಿದ ವಿಷಯ ಅದು. ಅಂದರೆ, ಹಿಂದೆ ನಡೆದದ್ದರ ಮೇಲೆ ನನ್ನ ನಿಯಂತ್ರಣವಿಲ್ಲ, ನಾಳೆ ಏನು ಜರುಗಬೇಕೋ ಅದನ್ನು ಕೈಲಾದಷ್ಟು ಮಟ್ಟಿಗೆ ನನ್ನ ಕಣ್ಣಳತೆಯಲ್ಲೇ ನಡೆಯುವಂತೆ ನೋಡಿಕೊಳ್ಳುತ್ತೇನೆ ಎನ್ನುವ ಹಾಗೆ. ನಿಜಕ್ಕೂ ಅವಳ ಜೀವಂತಿಕೆಯಿಂದ ಹುಡುಗಿಯರಿಗೆ ಬಹಳ ಹುಮ್ಮಸ್ಸು ಬಂದಿತ್ತು.
Last Updated 16 ಜೂನ್ 2018, 9:04 IST
fallback
ADVERTISEMENT

ಚಿಂತೆಯ ಭ್ರಾಂತಿಗೆ ಸಿಕ್ಕ ಬಲಿ

ಒಂದು ಮಧ್ಯಾಹ್ನ ಕ್ಲಾಸ್ ಮುಗಿಸಿ ಹಾಸ್ಟೆಲ್ ರೂಮಿಗೆ ಬಂದ ತಕ್ಷಣ ಅಟೆಂಡರ್ ಮೋನ ವಿಜಿಯನ್ನು ಹುಡುಕಿಕೊಂಡು ಬಂದ. ರೂಮಿನ ಹೊರಗೇ ನಿಂತು ಉಸಿರು ತಿರುಗುವುದರೊಳಗೆ ಹತ್ತು ಸಾರಿ ಕರೆದ. ಮುಖ ತೊಳೆದುಕೊಳ್ಳುತ್ತಿದ್ದವಳಿಗೆ ರೇಗಿ ಹೋಯಿತು. ಮುಖದ ತುಂಬೆಲ್ಲ ಸೋಪು ಮೆತ್ತಿದೆ, ಓ ಎನ್ನಲೂ ಕಷ್ಟ.
Last Updated 16 ಜೂನ್ 2018, 9:04 IST
fallback

ಮೋಅನ ಮತ್ತು ದೆವ್ವದ ರೂಮು

ರೂಮಿನಲ್ಲಿ ಕೂತಿದ್ದ ವಿಜಿಯನ್ನು ಕರೆಯಲು ರಶ್ಮಿ ಧಡಭಡ ಓಡಿ ಬಂದಳು. ಮಧ್ಯಾಹ್ನ ಕ್ಲಾಸು ಮುಗಿಸಿ ಬಂದು, ಊಟ ಮಾಡಿ, ಬಟ್ಟೆ ತೊಳೆದು ಒಣಗಲು ಹಾಕಿ ಅಸಾಧ್ಯ ಶೆಖೆಯಲ್ಲೂ ಇಬ್ಬರೂ ಸುಖವಾಗಿ ಮಲಗಿದ್ದರು. ರಶ್ಮಿ ಟೀ ಕುಡಿಯಲಿಕ್ಕೆಂದು ಲೋಟ ಹಿಡಿದುಕೊಂಡು ಮೆಸ್ಸಿಗೆ ಹೋದವಳು ಹೊರಗೆ ಇಣುಕಿ ನೋಡಿದಳು. ಕಪ್ಪನೆ ಮೋಡ ತೂಗುತ್ತಿದೆ. ಯಾವ ಕ್ಷಣದಲ್ಲಾದರೂ ಕಪ್ಪನೆ ಮೋಡ ಸ್ಫಟಿಕ ಶುಭ್ರ ಹನಿಗಳನ್ನು ಭೂಮಿಗೆ ಕಳಿಸುವ ತಯಾರಿ ಮಾಡುತ್ತಿತ್ತು.
Last Updated 16 ಜೂನ್ 2018, 9:04 IST
fallback

‘ಕುಡುದ್ ಸಾಯ್ರೀ ಅತ್ಲಾಗೆ’

ಕಿಚನ್ ಟೆಂಡರ್ ಮನೋಹರನ ಪಾಲಿಗೆ ಬಂದದ್ದು ಅವನಿಗಿಂತ ಹಾಸ್ಟೆಲ್ಲಿನ ಹುಡುಗಿಯರಿಗೆ ಬಹಳ ಸಂತೋಷವಾಗಿತ್ತು. ಏಕೆಂದರೆ ಮೊದಲನೆಯದಾಗಿ, ದಿನಾ ಸೀಮೆ ಎಣ್ಣೆ ಸ್ಟೌವ್‌ ಬಳಸಿ ಎಲ್ಲರ ಎದೆಗಳು ಕಟ್ಟಿಕೊಂಡಂತಾಗಿದ್ದವು. ಸೀಮೆ ಎಣ್ಣೆ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಮಾನ್ಯವಾಗಿ ಅದಕ್ಕೆಲ್ಲ ಮೋನ, ಇಲ್ಲಾ ಇನ್ನಿಬ್ಬರು ಅಟೆಂಡರುಗಳಾದ ಮರಿಯಮ್ಮ ಅಥವಾ ಚಂದ್ರಣ್ಣರನ್ನು ಅವಲಂಬಿಸಬೇಕಾಗಿತ್ತು. ಅವರ ಲಾಭದ ಡಿವಿಷನ್ ವಿಚಿತ್ರವಾಗಿತ್ತು. ಸೀಮೆ ಎಣ್ಣೆಯ ಬೆಲೆಯು ಬಹುಶಃ ಆಗ ಲೀಟರಿಗೆ ಹತ್ತು ರೂಪಾಯಿಯೂ ಇರಲಿಲ್ಲವೇನೋ. ಆದರೆ, ಒಂದು ಲೀಟರ್ ಸೀಮೆ ಎಣ್ಣೆ ತಂದು ಕೊಟ್ಟರೆ ಹದಿನೈದು ರೂಪಾಯಿ ಕೀಳುತ್ತಿದ್ದರು.
Last Updated 16 ಜೂನ್ 2018, 9:04 IST
fallback
ADVERTISEMENT
ADVERTISEMENT
ADVERTISEMENT