ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರತಿಸ್ಪಂದನ

ADVERTISEMENT

ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?

ಕಳೆದ ಕೆಲವು ಶತಮಾನಗಳ ವಿದ್ಯಮಾನಗಳು ನಮ್ಮ ಮನದಾಳದಲ್ಲಿ ಸಂಘರ್ಷಾತ್ಮಕತೆಯ ಬೀಜಗಳನ್ನು ನೆಟ್ಟುಬಿಟ್ಟಿವೆ. ನಿರಂತರ ಸಂಘರ್ಷದ ಹಿಡಿಗಟ್ಟು-ನುಡಿಗಟ್ಟು-ನಡೆಗಟ್ಟುಗಳು ನಮ್ಮೆ­ಲ್ಲರ ಕನಸು ಮನಸುಗಳನ್ನು ಆವರಿಸಿಬಿಟ್ಟಿವೆ. ನಾವು ಕೊಲ್ಲದಿದ್ದರೆ ನಾವೇ ಕೊಲೆಯಾಗಿ­ಬಿಡುವೆ-­ವೆಂಬ ತತ್ವ ನಮ್ಮ ಆಚಾರ-ವಿಚಾರಗಳ ಚಾಲಕ­ಶಕ್ತಿಗಳು. ಕೂಡುಬಾಳಿನ ಸೋಗಿನ ಪ್ರಜಾಪ್ರಭುತ್ವ­ಗಳೂ ಆಧುನಿಕ ಜಗತ್ತಿನಲ್ಲಿ ಎದುರಾಳಿ ಕುರಿತ ಹೆದರಿಕೆಯ ಅಲುಗುತಳಹದಿಯ ಮೇಲೆ ನಿಂತಿವೆ. ಆಧುನಿಕ ಸಂಸ್ಕೃತಿ, ಸಮಾಜರಚನೆ, ವ್ಯಕ್ತಿಗತ ಬದು­ಕಿನ ವ್ಯವಹಾರಗಳೆಲ್ಲಾ ‘ಹೋರಾಟವೆ ಹಾದಿ’ ಎಂಬ ಅಪ್ರಜ್ಞಾಪೂರ್ವಕ ವಿಶ್ವಾಸದ ಕೈಗೊಂಬೆ­ಗಳಾಗಿವೆ.
Last Updated 18 ಡಿಸೆಂಬರ್ 2014, 19:30 IST
ಸಂಘರ್ಷ ಮೊದಲೊ? ಸಹಬಾಳುವೆ ಮೊದಲೊ?

ಆಧುನಿಕ ನಾಗರಿಕತೆಯ ನಿರಸನ...

‘ಮನುಷ್ಯನೆಂಬುವನು ಅದೆಂಥಾ ಕೃತಿ! ವಿಚಾರ­­ಶಕ್ತಿಯಲ್ಲಿ ಅದೆಷ್ಟು ಶ್ರೇಷ್ಠ! ಗುಣಗಳೋ ಅನಂತ! ರೂಪ-ರೂಢಿಗಳಲ್ಲಿ ಅದೆಷ್ಟು ಸ್ಪಷ್ಟ, ಅಭಿನಂದ­ನೀಯ! ನಡವಳಿಕೆಯಲ್ಲಿ ಕಿನ್ನರನ ಹಾಗೆ! ತಿಳಿವಳಿಕೆ­ಯಲ್ಲಿ ದೇವತೆಯ ಹಾಗೆ! ಜಗತ್ತಿನ ಸೊಗಸು! ಜೀವಿಗಳಲ್ಲಿ ಉತ್ಕೃಷ್ಟ!’ ಆದರೆ ಈ ಮೆಚ್ಚುಗೆ ಮಾತುಗಳ ಸರ ಮಾ­ಲೆಯ ಕೊನೆಗೆ ಮಾನವ ಸ್ವಭಾವದ ಭ್ರಷ್ಟ­ಸಾಧ್ಯತೆ­ಯನ್ನು ಕಂಡು ಹೌಹಾರಿ ಹೀಗೆನ್ನುತ್ತಾನೆ: ‘ಆದರೂ ಯಾಕೆ ಇದೆಲ್ಲಾ ನನಗೆ ದೂಳಿನ ಸಮ?’
Last Updated 4 ಡಿಸೆಂಬರ್ 2014, 19:30 IST
fallback

‘ಚಿಂತಾಮಣಿ’ಗೆ ಗುಡ್ ಬೈ

ಇಡೀ ಏಷ್ಯಾದಲ್ಲೇ ಅತ್ಯಂತ ಮನೋಹರ ತಾಣಗಳಲ್ಲಿ ಒಂದಾದ ಬಾಲಿ ದ್ವೀಪ ಹಲವು ಕಾರಣಗಳಿಗಾಗಿ ಕುತೂಹಲಜನಕ­ವಾಗಿದೆ. ಪ್ರಧಾನವಾಗಿ ಇಸ್ಲಾಮೀಯ ದೇಶ­ವಾದ ಇಂಡೊನೇಷ್ಯಾದಲ್ಲಿ ಇನ್ನೂ ಹಿಂದೂ ಧರ್ಮ ಪ್ರಧಾನವಾದ ಪ್ರದೇಶವಿದು.
Last Updated 20 ನವೆಂಬರ್ 2014, 19:30 IST
‘ಚಿಂತಾಮಣಿ’ಗೆ ಗುಡ್ ಬೈ

ದಾವಾನಲದ ಮುಂದೆ ಯುಗಧರ್ಮದ ಧ್ಯಾನ...

ಇಂಡೊನೇಷ್ಯಾದ ಹಳೆಯ ರಾಜಧಾನಿ ಬಾಂಡುಂಗ್. ಅಲ್ಲಿ ಮುಂದಿನ ವರ್ಷ ನಡೆಯಲಿರುವ ಏಷ್ಯಾ-ಆಫ್ರಿಕಾ ಶಾಂತಿ ಸಮಾವೇಶದ ೬೦ನೇ ವರ್ಷದ ಆಚರಣೆಗೆ ಈಗಾಗಲೇ ಸಿದ್ಧತೆ ಶುರುವಾಗಿಬಿಟ್ಟಿದೆ. ೧೯೫೫­ರಲ್ಲಿ ನಡೆದ ಆ ಸಮಾವೇಶದಲ್ಲಿ ನೆಹರೂ ಅವ­ರನ್ನೂ ಒಳಗೊಂಡು ಇಂಡೊನೇಷ್ಯಾ, ಭಾರತ, ಪಾಕಿಸ್ತಾನ, ಮ್ಯಾನ್ಮಾರ್‌ ಮತ್ತು ಶ್ರೀಲಂಕಾ ದೇಶಗಳ ನಾಯಕರು, ಬಿಳಿಯರ ದಬ್ಬಾಳಿಕೆ­ಯಿಂದ ಜಗತ್ತನ್ನು ಬಿಡುಗಡೆಗೊಳಿಸಲು ಇಚ್ಛಿಸಿ­ದ್ದರು. ಅಂದಿನ ಇಂಡೊನೇಷ್ಯಾದ ಅಧ್ಯಕ್ಷ ಸುಕರ್ಣೊ ‘ಏಷ್ಯಾ ಮತ್ತು ಆಫ್ರಿಕಾದ ನವ­ಯುಗ ಆರಂಭವಾಗಿದೆ’ ಎಂದು ಆಗ ಘೋಷಿಸಿದ್ದರು.
Last Updated 6 ನವೆಂಬರ್ 2014, 19:30 IST
ದಾವಾನಲದ ಮುಂದೆ ಯುಗಧರ್ಮದ ಧ್ಯಾನ...

ಸಂಪತ್ತು ಸಿಗಬಹುದು... ಸಮಾಧಾನ?

ಹದಿನಾಲ್ಕು ವರ್ಷಗಳ ಹಿಂದೆ ನಾನು ಷಿಕಾಗೊಗೆ ಹೋಗಿದ್ದಾಗ ನನ್ನ ಸನ್ಮಿತ್ರರೂ, ಭಾರತ ಮೂಲದ ಚಿತ್ರಕಾರರೂ ಆದ ರಾಮರಾವ್ ಅವರ ಅತಿಥಿಯಾಗಿದ್ದೆ. ಅವರು ಆ ನಗರದ ಹೊರವಲಯದಲ್ಲಿನ ಒಬ್ಬ ನಿವೃತ್ತ, ಭಾರತ ಮೂಲದ ಡಾಕ್ಟರೊಬ್ಬರ ಮನೆಯಲ್ಲಿ ನನಗಾಗಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸಂಜೆಯ ನೆನಪು ನನ್ನ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.
Last Updated 23 ಅಕ್ಟೋಬರ್ 2014, 19:30 IST
ಸಂಪತ್ತು ಸಿಗಬಹುದು... ಸಮಾಧಾನ?

ಬೃಂದಾವನದಿಂದ ಕಾಣೆಯಾಗಿದ್ದಾಳೆ ‘ರಾಧೆ’!

ರಾಧೆ-ಕೃಷ್ಣರೆಂಬ ದೈವತಗಳು ಸುಮಾರು ಒಂದು ಸಹಸ್ರಮಾನ ಪರ್ಯಂತ ಭಾರತೀಯ ಪ್ರತಿಭಾ ಸೃಷ್ಟಿಗೆ ಮಹಾನ್ ಸ್ಫೂರ್ತಿಯಾಗಿದ್ದಾರೆ. ‘ಅಲ್ಲಿ ನೋಡಲು ಕೃಷ್ಣ; ಇಲ್ಲಿ ನೋಡಲು ಕೃಷ್ಣ; ಎಲ್ಲೆಲ್ಲಿ ನೋಡಲು ಶ್ರೀಕೃಷ್ಣ’ ಹೀಗೊಂದು ದಾಸರ ಪದದ ಪಂಕ್ತಿ.
Last Updated 9 ಅಕ್ಟೋಬರ್ 2014, 19:30 IST
ಬೃಂದಾವನದಿಂದ ಕಾಣೆಯಾಗಿದ್ದಾಳೆ ‘ರಾಧೆ’!

ಬದುಕಲು ಕಲಿಸಿದ ನನ್ನ ಮೇಷ್ಟ್ರುಗಳು

ಈ ಸಲ ಶಿಕ್ಷಕರ ದಿನಾಚರಣೆಯ ದಿವಸ ನನ್ನ ಐದಾರು ವಿದ್ಯಾರ್ಥಿ– ವಿದ್ಯಾರ್ಥಿ­ನಿಯರ ಹೊರತು ಯಾರೂ ನನಗೆ ವಿಷ್‌­ಮಾಡಲಿಲ್ಲ. ಪ್ರತಿ ವರ್ಷ ಆ ದಿನ ನನಗೆ ಅಭಿ­ನಂದನೆಗಳ ಸುರಿಮಳೆ.
Last Updated 11 ಸೆಪ್ಟೆಂಬರ್ 2014, 19:30 IST
ಬದುಕಲು ಕಲಿಸಿದ ನನ್ನ ಮೇಷ್ಟ್ರುಗಳು
ADVERTISEMENT

ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು

ಯ ಪ್ರೊ.ಅನಂತಮೂರ್ತಿ ಅವರೇ, ತಮಗೆ ಕೆಲವು ಮಾಸಗಳ ಹಿಂದೆ ದೂರ ದೇಶದಿಂದ ನಾನು ಫೋನು ಮಾಡಿದ್ದೆ. ಆಗ ನೀವು ಹೇಳಿದ್ದಿರಿ; ‘ಬಾರಯ್ಯ, ನಿನ್ನನ್ನು ನೋಡಿ ತುಂಬಾ ದಿವಸ ಆಯಿತು. ನನಗೆ ಈಚೆಗೆ ಆರೋಗ್ಯ ತೀರಾ ಅಷ್ಟಕ್ಕಷ್ಟೆ. ಆದಷ್ಟು ಬೇಗ ಬಾ. ನನಗೂ ನಿನಗೂ ಮನಸ್ತಾಪ ಆಗಿದೆ. ಅದನ್ನು ಬೇಗ ಸರಿಪಡಿಸಿಕೋಬೇಕು’.
Last Updated 28 ಆಗಸ್ಟ್ 2014, 19:30 IST
ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು

ಡಿ . ಆರ್ . ನಾಗರಾಜ್ ಎಂಬ ಸವಾಲು

ಮೊನ್ನೆ ಗೆಳೆಯ ಮಂಜೇಶ್ ಫೋನು ಮಾಡಿ ನನ್ನನ್ನು ಕೇಳಿದ: ‘ಅಲ್ಲಯ್ಯ, ನೀನು ನಿನ್ನ ಡ್ರೈವರ್ ಮೇಲೂ ಅಂಕಣ ಬರೀತೀಯ. ನಮ್ಮ ನಾಗರಾಜನ ಮೇಲೆ ಯಾಕೆ ಬರೆಯಲ್ಲ?’ ಮಂಜೇಶ್ ನನ್ನ ಆತ್ಮೀಯ ಗೆಳೆಯರ­ಲ್ಲೊಬ್ಬ; ಕಷ್ಟಗಳಲ್ಲಿ ಒದಗು­ವಂಥ­ವನು.
Last Updated 14 ಆಗಸ್ಟ್ 2014, 19:30 IST
ಡಿ . ಆರ್ . ನಾಗರಾಜ್ ಎಂಬ ಸವಾಲು

ನಂಬಿಕೆಗಳನ್ನು ಅಲುಗಾಡಿಸಿದ ‘ಸರಿತಾ ಚರಿತೆ’

ನಾನು ನನ್ನ ಜರ್ಮನಿ ವಾಸವನ್ನು ಕೊನೆ­ಗೊಳಿಸಿ ದೆಹಲಿಗೆ ಮರಳಿದ ಮೇಲೆ ನನ್ನ ಓಡಾಟಕ್ಕಾಗಿ ಒಂದು ಕಾರನ್ನು ಕೊಂಡೆ. ನನಗೆ ಡ್ರೈವಿಂಗ್ ಬರುವುದಿಲ್ಲವಾದ್ದರಿಂದ ಮೊದಲೇ ನನ್ನ ವಿಭಾಗದ ಸಿಬ್ಬಂದಿ ಗೆಳೆಯರಿಗೆ ‘ಒಬ್ಬ ಒಳ್ಳೆ ಡ್ರೈವರನನ್ನು ಹುಡುಕಿಕೊಡಿ’ ಎಂದು ಕೇಳಿಕೊಂಡಿದ್ದೆ.
Last Updated 31 ಜುಲೈ 2014, 19:30 IST
ನಂಬಿಕೆಗಳನ್ನು ಅಲುಗಾಡಿಸಿದ ‘ಸರಿತಾ ಚರಿತೆ’
ADVERTISEMENT
ADVERTISEMENT
ADVERTISEMENT