ಪಂಜಾಬಿ ಜನಪದ ಭಕ್ತಿಗೀತೆಯೊಂದರ ಸಾಲುಗಳು ಇವು:
ಜ್ಯಾ ಜಾವೇ ಊಧೋ ಉಡ್ ಆಜಾ
ಅಸಿ ಹೋರ್ ಕಿಸೇಣು ಕೀ ಲೇಣಾ
ವೋ ನಯನನ್ ಕೇ ವಿಚ್ ಬಸದಾರಹೇ
ಅಸಿ ಮಥುರಾಬೃಂದಾವನ್ ಕಿ ಲೇಣಾ
(ತೊಲಗಯ್ಯ, ಉದ್ಭವ, ಈ ಕೂಡಲೇ
ಇತರರ ಗೊಡವೆ ನಮಗಿನ್ನೇತಕೆ?
ಕಂಗಳಲಿ ಆತನೇ ನೆಲೆಸಿರುವನು
ಮಥುರೆ -ಬೃಂದಾವನ ನಮಗೇತಕೆ?)

ರಾಧೆ-ಕೃಷ್ಣರೆಂಬ ದೈವತಗಳು ಸುಮಾರು ಒಂದು ಸಹಸ್ರಮಾನ ಪರ್ಯಂತ ಭಾರತೀಯ ಪ್ರತಿಭಾ ಸೃಷ್ಟಿಗೆ ಮಹಾನ್ ಸ್ಫೂರ್ತಿಯಾಗಿದ್ದಾರೆ. ‘ಅಲ್ಲಿ ನೋಡಲು ಕೃಷ್ಣ; ಇಲ್ಲಿ ನೋಡಲು ಕೃಷ್ಣ; ಎಲ್ಲೆಲ್ಲಿ ನೋಡಲು ಶ್ರೀಕೃಷ್ಣ’ ಹೀಗೊಂದು ದಾಸರ ಪದದ ಪಂಕ್ತಿ. ಭಾರತದ ಸಾಂಸ್ಕೃತಿಕ ಸಮೂಹ ಚೇತನದಲ್ಲಿ ಶ್ರೀಕೃಷ್ಣನ ಕಲ್ಪನೆ ರಾಧೆಗಿಂತಲೂ ಹಳತು. ಕ್ರಿ.ಶ. 300ರ ಸುಮಾರಿನದೆಂದು ಹೇಳಲಾದ ತಮಿಳಿನ ‘ಸಿಲಪ್ಪದಿಕಾರಂ’ನಲ್ಲಿ ಕೃಷ್ಣನನ್ನು ಕಥಾನಾಯಕನನ್ನಾಗಿಸಿಕೊಂಡ ಒಂದು ಒಳನಾಟಕ ಬರುತ್ತದೆ. ಆದರೆ ಅಲ್ಲಿ ರಾಧೆಯಿಲ್ಲ. ಪ್ರಾಚೀನ ತಮಿಳಿನ ವೈಷ್ಣವ ಮೂಲಗಳಲ್ಲಿ ಆಳ್ವಾರರುಗಳ ರಚನೆಯಲ್ಲಿ ರಾಧೆಯಿಲ್ಲ. ಅಲ್ಲಿ ಕೃಷ್ಣನ ಕೆಳದಿಯ ಹೆಸರು ನಪ್ಪಿನ್ನೈ ಎಂದು. ‘ಶ್ರೀಮದ್ಭಾಗವತ’ದಲ್ಲಿ ರಾಧೆ ಒಂದು ಸಣ್ಣ ಪಾತ್ರ.

ಶ್ರೀಕೃಷ್ಣನು ‘ರಾಧಾ ಸಮೇತ ಕೃಷ್ಣ’ನಾಗಿದ್ದು ಜಯದೇವನ ‘ಗೀತಗೋವಿಂದ’ದಲ್ಲಿ. ಅಂದರೆ ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿ. ಜಯದೇವ ತನ್ನ ಸತ್ಕೃತಿಗೆ ಗೋವಿಂದನ ಹೆಸರನ್ನು ನೀಡಿದ್ದಾನೆ, ನಿಜ. ಆದರೆ ಕೃತಿಯ ಆಂತರ್ಯದಲ್ಲಿ ರಾಧೆಯೇ ಕೇಂದ್ರ ಬಿಂದು. ಪುರುಷತ್ವದ ಸಂಕೇತವಾದ ಕೃಷ್ಣ ಇಲ್ಲಿ ಚಂಚಲಚಿತ್ತ. ಆದರೆ ಪ್ರಕೃತಿಯ ರೂಪಕ-ವಾದ ರಾಧೆ ಸ್ಥಿರಬಿಂದು. ಪುರುಷ ಚಾಂಚಲ್ಯ ಮತ್ತು ಪ್ರಕೃತಿ ಸ್ಥಿರತೆ ಭಾರತದ ದರ್ಶನಗಳಲ್ಲಿ ಪ್ರಭಾವಿಯಾದ ಸಾಂಖ್ಯ ದೃಷ್ಟಿಗೆ ವಿರುದ್ಧವಾದರೂ, ತಂತ್ರಗಳ ಮಾತೃಕೆಗಳಾದ ಈಶಾನ್ಯ ಭಾರತದ ಚರಿಯಾಗೀತ ಪರಂಪರೆಗೆ ಸಮ್ಮತ.

ಜಯದೇವ ರಾಧೆಯನ್ನೇ ಶಕ್ತಿಯನ್ನಾಗಿ ಆರಾಧಿಸುವ ತಾಂತ್ರಿಕ ಪಂಥದ ಯೋಗಿ ಇದ್ದಿರಬಹುದೆಂದು ಕೆಲವರ ಅನುಮಾನ. ಅದೇನೇ ಇರಲಿ, ಜಯದೇವ ರಾಧೆಯನ್ನು ಕೃಷ್ಣಕತೆಯ ನಾಯಕಿಯನ್ನಾಗಿಸಿದಾಗಿನಿಂದ ರಾಧೆಯ ಪಾತ್ರ ಭಾರತೀಯ ಸಮೂಹಮಾನಸದ ಕಲ್ಪನಾ ವಿಲಾಸದಲ್ಲಿ ಹೆಚ್ಚುಹೆಚ್ಚು ಮಹತ್ವಪೂರ್ಣವಾಗುತ್ತಾ ಬಂದಿದೆ. ಜಯದೇವನಿಂದ ಪ್ರೇರಣೆ ಪಡೆದ ಬಂಗಾಳದ ಚೈತನ್ಯ ಮಹಾಪ್ರಭು ತಮ್ಮ ಗೌಡೀಯ ವೈಷ್ಣವ ಪಂಥದಲ್ಲಿ ರಾಧೆಗೆ ಅಗ್ರಗಣ್ಯ ಸ್ಥಾನ ಕೊಟ್ಟು, ಮುಂದೆ ರಾಧೆ ಕೆಲವು ವೈಷ್ಣವ ಪಂಥಗಳ ಪ್ರಧಾನ ಆರಾಧ್ಯ ದೈವ ಆಗುವ ಪ್ರಕ್ರಿಯೆಗೆ ಬುನಾದಿ ಹಾಕಿದರು. ತರುವಾಯ ವೈಷ್ಣವ ಕಾವ್ಯ, ಆಖ್ಯಾನಗಳಲ್ಲಿ ರಾಧೆಯ ಸ್ಥಾನ ಮೇಲಕ್ಕೇರುತ್ತಾ ಹೋಯಿತು.

ಗೌಡೀಯ ವೈಷ್ಣವದ ನಂತರ ಅತ್ಯಂತ ಪ್ರೌಢವಾದ ಪೂರ್ಣಾದ್ವೈತ ವೈಷ್ಣವ ದರ್ಶನವನ್ನು ಪ್ರತಿಪಾದಿಸಿದ್ದು ಗುಜರಾತಿನ ವಲ್ಲಭಾಚಾರ್ಯರ ಪುಷ್ಟಿಮಾರ್ಗ. ಈ ಪಂಥದಲ್ಲೂ ಕೃಷ್ಣನ ಮಡದಿಯರಾದ ರುಕ್ಮಿಣಿ, -ಸತ್ಯಭಾಮೆಯರಿಗಿಂತ ಹೆಚ್ಚಿನವಳು ಅವನ ಪ್ರೇಮಿ ರಾಧೆ.

ಗುಜರಾತಿಗಳು ಕೃಷ್ಣನ ಹೆಸರನ್ನು ಉಚ್ಚರಿಸುವಾಗ ರಾಧೆಯ ಹೆಸರನ್ನೂ ಜೋಡಿಸಿಕೊಂಡು ‘ರಾಧಾಕೃಷ್ಣ’ ಎಂದೇ ಜಪಿಸುತ್ತಾರೆ. ದಕ್ಷಿಣದ ಕೇರಳದಲ್ಲೂ ರಾಧೆಗೆ ಅಗ್ರಸ್ಥಾನ. ನಾರಾಯಣ ಪಟ್ಟಪಾದ್ರಿಯ ಭಾಗವತಾಧಾರಿತ ‘ಶ್ರೀನಾರಾಯಣೀಯಂ’ನಲ್ಲಿ ಮತ್ತು ಕೃಷ್ಣನಾಟ್ಟಂ ರಂಗಪ್ರಯೋ-ಗಕ್ಕೆ ಆಧಾರವಾದ ಮನದೇವನ ‘ಕೃಷ್ಣಗೀತಿ’ಯಲ್ಲಿ ರಾಧೆ ರಾರಾಜಿಸುತ್ತಾಳೆ.

ಕೃಷ್ಣಕತೆಯ ಧಾರ್ಮಿಕ ಜಗತ್ತಿನಲ್ಲಿ ಶೃಂಗಾರವನ್ನು ಸ್ಥಾಪಿಸಿದ ಕಾರಣ ಮುಂದಿನ ಕೆಲವು ವೈಷ್ಣವ ಪಂಥಗಳು ರಾಧೆಯನ್ನು ಹೊರದೂಡಿದವು. ಕೃಷ್ಣರಾಧೆಯರ ಅನಿರ್ಬಂಧಿತ ಪ್ರೇಮ ಅವರ ಗಂಡಾಳಿಕೆಯ ವೈರಾಗ್ಯ ದೃಷ್ಟಿಗೆ ಸವಾಲಾಯಿತು. ಮಹಾರಾಷ್ಟ್ರದ ವಾರ್ಖರಿಗಳು ವಿಠಲನಾದ ಕೃಷ್ಣನ ಬಗಲಿನ ಸ್ಥಾನವನ್ನು ರುಖುಮಾಯಿಗೆ ನೀಡಿದರು. ರಾಧೆಯನ್ನು ಮರೆತೇಬಿಟ್ಟರು. ವೈರಾಗ್ಯ ಮತ್ತು ನೀತಿ ಪರವಾದ ಅವರ ಧಾರ್ಮಿಕ ಪಂಥವು ಶೃಂಗಾರ ಮಾಧುರ್ಯದಿಂದ ವಂಚಿತವಾಯಿತು.

ಅದೇ ರೀತಿ ಅಸ್ಸಾಮಿನ ವೈಷ್ಣವ ಧರ್ಮ ಪ್ರವರ್ತಕ ಶ್ರೀಮಂತ ಶಂಕರದೇವನೂ ತನ್ನ ವೈಷ್ಣವ ದೃಷ್ಟಿಯನ್ನು ರಾಧಾ ವಿಮುಕ್ತಗೊಳಿಸಿದ. ತನ್ನ ನಾಮಘರ್‌ಗಳಲ್ಲಿ ಕೃಷ್ಣನ ಎಡವಂಕದಲ್ಲಿ ಅವನ ಮಡದಿ ರುಕ್ಮಿಣಿಯನ್ನು ನಿಲ್ಲಿಸಿದ. ಎಲ್ಲ ಎಲ್ಲೆಗಳನ್ನೂ ದಾಟಿದ ರಾಧಾಕೃಷ್ಣರ ಪ್ರೇಮ ಅವನ ನೈತಿಕಪರ ದೃಷ್ಟಿಗೆ ಸಮ್ಮತವಾಗಲಿಲ್ಲ. ರಾಸಿಕ್ಯ ಪ್ರಧಾನವಾದ ಗೌಡೀಯ ವೈಷ್ಣವ ಮತ್ತು ಪುಷ್ಟಿ ಮಾರ್ಗಗಳು ಮಾತ್ರ ರಾಧೆಯನ್ನು ಸಂಪೂರ್ಣವಾಗಿ ಆತುಕೊಂಡವು.

ರಾಧೆಯನ್ನು ಕುರಿತ ನೀತಿ ಪರಾಯಣರ ದೃಷ್ಟಿ ಹೇಗೇ ಇರಲಿ, ಭಾರತೀಯ ಸಾಮೂಹಿಕ ಪ್ರತಿಭಾ ಸೃಜನದಲ್ಲಿ ಪ್ರೇಮದ ಆದರ್ಶವಾಗಿ ಆಕೆ ಸ್ಥಾಪಿತಳಾದಳು. ಆಕೆಯ ಸಾಂಕೇತಿಕತೆ ಧರ್ಮಪುರಾಣಗಳ ಗಡಿ ದಾಟಿ ಕಾವ್ಯಾದಿ ಕಲೆಗಳಲ್ಲಿ ಕೀರ್ತಿತವಾಯಿತು. ಉತ್ತರ ಭಾರತದ ಭಕ್ತರು ರಾಧೆಯ ಮೂಲಕವೇ ಕೃಷ್ಣನಿಗೆ ಮೊರೆಯಿಡುತ್ತಾರೆ;

ರಾಧೆ ರಾಧೆ
ಶ್ಯಾಂ ಬುಲಾದೆ
ಬೃಂದಾವನಮೇ ರಾಧೆ ರಾಧೆ
ಯಮುನಾ ಕಿನಾರೆ ರಾಧೆ ರಾಧೆ

ಕೃಷ್ಣಭಕ್ತಿ ಪರಂಪರೆಗಳು ರಾಧಾಕೃಷ್ಣರ ಆದರ್ಶಕ್ಕೆ ಒಂದು ಯೋಗ್ಯವಾದ ಭಿತ್ತಿಯನ್ನೂ ಕಟ್ಟುತ್ತಾ ಬಂದವು. ಈ ನಿರ್ಮಿತಿಯಲ್ಲಿ ಮೊದಲಿಗರು ತಮಿಳು ಆಳ್ವಾರರು. ಹರಿವಂಶ ಪುರಾಣದ ಆಧಾರದ ಮೇಲೆ ಬೃಂದಾವನದ ರಮಣೀಯ ದೃಶ್ಯಗಳನ್ನು ನಿರ್ಮಿಸತೊಡಗಿದರು.

ಆಂಡಾಳರ ‘ತಿರುಪ್ಪಾವೈ’ನಲ್ಲಿ ಈ ನಿರ್ಮಿತಿ ಸೌಂದರ್ಯಪೂರ್ಣ ಆಗಿರುವಂತೆ ವಿಸ್ಮಯದಾಯಕವೂ ಆಗಿದೆ. ಅಷ್ಟುಹೊತ್ತಿಗಾ-ಗಲೇ ಉತ್ತರದಿಂದ ಬಂದು ತಮಿಳುನಾಡಿನಲ್ಲಿ ನೆಲೆಸಿದ ಗೋವಳರ ಸ್ಮೃತಿಯ ಬೃಂದಾವನದ ವಿವರಗಳು ಮಿಥಿಕ ಸ್ವರೂಪ ಪಡೆಯತೊಡಗಿವೆ. ಬೃಂದಾವನದ ಮಿಥಿಕ ಭೂಗೋಳದ ವಿವರಗಳಾದ ಯಮುನಾ ತೀರ ಇತ್ಯಾದಿಗಳು ತಮಿಳುನಾಡಿನ ವಾಸ್ತವಿಕ ಭೂಗೋಳದೊಂದಿಗೆ ಸೇರಿಕೊಂಡು ಹೊಸದೊಂದು ಕಾವ್ಯಭೂಗೋಳ ಸೃಷ್ಟಿಯಾಗತೊಡಗಿದೆ. ಆದರೆ ಈ ಜಗತ್ತಿನಲ್ಲಿ ರಾಧೆಯಿಲ್ಲ.

ಆ ನಂತರ ‘ಶ್ರೀಮದ್ಭಾಗವತ’ ಕೃಷ್ಣನ ಕುರಿತ ಹಲವು ಪ್ರಸಂಗಗಳನ್ನು ಒಂದು ಮಿಥಿಕ ಭಿತ್ತಿಯಲ್ಲಿ ಬಿಡಿಸಿಟ್ಟು, ಮುಂದಿನ ಕೃಷ್ಣ ಕೇಂದ್ರಿತ ಕಾವ್ಯಾದಿಗಳ ಆಕರವಾಯಿತು. ವೀರಗೋಪಾಲ ಮತ್ತು ಶೃಂಗಾರ ಗೋಪಾಲನ ಹಲವು ವಿಕ್ರಮಗಳ ಈ ಕಥಾ ಸರಣಿಯಲ್ಲಿ ರಾಧೆಯ ಪಾತ್ರ ನಗಣ್ಯ. ಬೃಂದಾವನವನ್ನು ರಾಧೆ ಆವರಿಸಿಕೊಳ್ಳಲು ಆರಂಭವಾದದ್ದು ಜಯದೇವ ಕವಿಯ ‘ಗೀತಗೋವಿಂದ’ದ ಮೂಲಕ. ಆಧುನಿಕ ಪೂರ್ವ ಭಾರತದಾದ್ಯಂತ ಈ ಕೃತಿ ಎಷ್ಟು ಜನಪ್ರಿಯವಾಯಿತೆಂದರೆ ಅದರ ರೂಪಾಂತರಗಳು, ಅನುಕರ-ಣೆಗಳು ಬಹುತೇಕ ಭಾರತೀಯ ಭಾಗಗಳಲ್ಲಿ ಆಗತೊಡಗಿದವು.

ಗೀತಗೋವಿಂದದ ದೃಶ್ಯಗಳು ಹಲವು ಶೈಲಿಗಳ ಚಿತ್ರಕಲೆಗಳಲ್ಲೂ ಮೂಡಿದವು. ಅದರ ಘಟನೆಗಳು, ಭಾವಗಳು ಎಲ್ಲ ಸ್ತರದ ಕಾವ್ಯ ರಚನೆಗಳಲ್ಲಿ ಅನುರಣಿತವಾದವು. ವಸಾಹತು ಕಾಲದ ನಂತರ ಧಾರ್ಮಿಕ ಆವರಣ ಮುಕ್ತವಾದ ರಾಧೆ ಕೇವಲ ಶೃಂಗಾರ ನಾಯಕಿಯಾಗಿ ಧರ್ಮವೀರಭಾರತಿ ಅವರ ‘ಕನುಪ್ರಿಯಾ’, ರಮಾಕಾಂತ ರಥ ಅವರ ‘ಶ್ರೀರಾಧಾ’, ರಾಧಾವಲ್ಲಭ ಶಾಸ್ತ್ರಿಯವರ ‘ರಾಧಾ’ ಮುಂತಾದ ಕಾವ್ಯಗಳಲ್ಲಿ ಮುನ್ನೆಲೆಗೆ ಬಂದಳು. ರಾಧೆಯ ಕಲ್ಪನೆ ಸಿನಿಮಾದಿ ಜನಪ್ರಿಯ ಕಲೆಗಳಲ್ಲಿಯೂ ವಿಜೃಂಭಿಸತೊಡಗಿತು.

ಮುಂಬೈನ ಸಿನಿಮಾ ಹಾಡುಗಳಲ್ಲಿ ಭಕ್ತಿನಿರಪೇಕ್ಷವಾದ ರಾಧಾಕೃಷ್ಣ ಪ್ರೇಮ ಒಂದು ಹಳಹಳಿಕೆಯ ವಸ್ತುವಾಯಿತು. ಭಾಗವತ ಪ್ರೇರಿತ ಕಲಾ ಸೃಷ್ಟಿಗಳಲ್ಲಿ ರಾಧೆಯು ಕೃಷ್ಣನ ಅಸಂಖ್ಯಾತ ಗೋಪಿಕೆಯರಲ್ಲಿ ಒಬ್ಬಳಾಗಿ ಉಳಿಯದೆ ಎಲ್ಲ ಗೋಪಿಕೆಯರ ಕೃಷ್ಣ ಪ್ರೇಮದ ಮೂಲ ಮಾದರಿಯಾಗಿ ಬಿಟ್ಟಳು. ಆಧುನಿಕ ಕಾಲದ ಜನಪ್ರಿಯ ಕಲೆಗಳಲ್ಲೂ ರಾಧೆಯದು ಸಿಂಹಪಾಲು.

ರಾಧೆಯ ಈ ಅಭೂತಪೂರ್ವ ಜನಪ್ರಿಯತೆಯ ಕಾರಣ ಏನಿದ್ದೀತು? ಚೈತನ್ಯಪ್ರೇರಿತ ಪಂಥಗಳಲ್ಲಿ ರಾಧಾಕೃಷ್ಣ ಪ್ರೇಮ ಜೀವ-ದೇವರ ಸಂಬಂಧದ ಸಂಕೇತ ಮಾತ್ರ. ಆದರೆ ಗೀತ ಗೋವಿಂದದಲ್ಲಿ ಇನ್ನೊಂದು ಪ್ರಕ್ರಿಯೆ ಸುರುವಾಯಿತು. ಜಯದೇವ ತನ್ನ ಕೃತಿಯನ್ನು ಇಬ್ಬಗೆಯ ಓದುಗರಿಗಾಗಿ ರಚಿಸಿದ್ದಾಗಿ ಹೇಳಿಕೊಳ್ಳುತ್ತಾನೆ. ತನ್ನ ಕೃತಿ ಹರಿಭಕ್ತರು ಮತ್ತು ಶೃಂಗಾರ ಕುತೂಹಲಿಗಳು ಇಬ್ಬರಿಗೂ ಅರ್ಪಿತ ಎನ್ನುತ್ತಾನೆ.

ಕೃಷ್ಣ ಭಕ್ತನಾದ ಜಯದೇವ ತನ್ನನ್ನು ತನ್ನ ಪ್ರಿಯತಮೆ ಪದ್ಮಾವತಿಯ ಚರಣ ಚಾರಣ ಚಕ್ರವರ್ತಿ ಎಂದು ಬಣ್ಣಿಸಿಕೊಳ್ಳುತ್ತಾನೆ. ಭಕ್ತಿಯ ಜೊತೆಗೆ ಜಯದೇವ ಶೃಂಗಾರದ ಹೂರಣವನ್ನು ತುಂಬಿ ರಾಧಾಕೃಷ್ಣ ಕಲ್ಪನೆಯನ್ನು ಸಾರ್ವತ್ರಿಕಗೊಳಿಸಿದ. ಶೃಂಗಾರ ಸರ್ವಜನಪ್ರಿಯ ರಸವಾದ ಕಾರಣ ಭಾರತದ ಹಲಬಗೆಯ ನಾಟ್ಯ ಪ್ರಸ್ತುತಿಗಳಿಗೆ ಗೀತಗೋವಿಂದ ಪ್ರಮುಖ ಪಾಠವಾಯಿತು. ಪುರುಷ ಪ್ರಧಾನ ವೈಷ್ಣವ ಕಲ್ಪನೆ ಜಗತ್ತನ್ನು ಜಯದೇವ ಸ್ತ್ರೀ ಪ್ರಧಾನಗೊಳಿಸಿದ.

ದಶಾವತಾರ ಸ್ತುತಿಯ ವೀರಗೋಪಾಲ ಚಂಚಲನಾಗಿದ್ದಾನೆ. ಅವನಿಗೆ ಸ್ಥಿರತೆ ಲಭಿಸುವುದು ಏಕಚಿತ್ತದಿಂದ ತನ್ನಲ್ಲಿ ಅನುರಕ್ತಳಾಗಿರುವ ರಾಧೆಗೆ ಶೃಂಗಾರದಲ್ಲಿ ಶರಣಾಗತನಾದಾಗ ಮಾತ್ರ. ಪುರುಷ ಜಗತ್ತಿನ ಸ್ವಕಲ್ಪನೆ ತನ್ನಿಂದ ತಾನೇ ಮರೆಮಾಚಿಸುವ ಈ ಅನುಭವ ಸತ್ಯವನ್ನು ಮುನ್ನೆಲೆಗೆ ತಂದದ್ದೇ ಗೀತಗೋವಿಂದದ ಮತ್ತು ರಾಧೆಯ ಅಭೂತಪೂರ್ವ ಜನಪ್ರಿಯತೆಗೆ ಕಾರಣ ಆಗಿರಬಹುದು. ಹೀಗಾಗಿ ರಾಧೆಯ ಪಾತ್ರದ ಜನಪ್ರಿಯತೆಗೆ ಕಾರಣ ಮನೋವೈಜ್ಞಾನಿಕವೇ ಹೊರತು ಕೇವಲ ಧಾರ್ಮಿಕವಲ್ಲ.

ರಾಧಾಕೃಷ್ಣರ ಅನಿರ್ಬಂಧಿತ ಪ್ರೇಮ ಎಂದೂ ನನಸಾಗದ ಕನಸು. ಆದರೆ ಎಲ್ಲ ನನಸುಗಳೂ ಆ ಕನಸಿನ ಆದರ್ಶಗಳತ್ತ ತುಡಿಯುತ್ತಿರುತ್ತವೆ. ಆ ಆದರ್ಶ ಅನುಭವ ಕಣಗಳಲ್ಲಿ ಭಾಗಶಃ ನಿಜವಾದರೂ ಅದರಿಂದ ಉಂಟಾಗುವ ಆನಂದ ಪ್ರಾಪ್ತಿಯನ್ನು ಕೃಷ್ಣ ಶೃಂಗಾರ ಲೀಲಾ ಪ್ರಸಂಗಗಳು ಅಭಿವ್ಯಕ್ತಿಸುತ್ತವೆ.

ಶ್ರೀಮದ್ಭಾಗವತದ ಕತೆಯನ್ನು ಅತ್ಯಂತ ಸುಂದರ ಕಾವ್ಯವನ್ನಾಗಿ ಸೃಷ್ಟಿಸಿದ ಗುರುವಾಯೂರಿನ ನಾರಾಯಣ ಭಟ್ಟಪಾದ್ರಿಯ ‘ನಾರಯಣೀಯಂ’ನಲ್ಲಿ ರಾಧೆ ಪ್ರಧಾನ ಪಾತ್ರವಾಗಿ ಪ್ರವೇಶಿಸುತ್ತಾಳೆ. ಪರಮ ವಿಷ್ಣು ಭಕ್ತನಾದ ಭಟ್ಟಪಾದ್ರಿಯ ರಾಸಕ್ರೀಡಾ ಪ್ರಸಂಗದ ವರ್ಣನೆ ಶೃಂಗಾರ ರಸದ ಕಾರಂಜಿಯಂತೆ ಮನ ಸೆಳೆಯುತ್ತದೆ.

ವಾಸ್ತವ ಬದುಕಿನ ನಿತ್ಯ ವಿವರಗಳಲ್ಲಿ ಪ್ರತೀತವಾಗದೆ ಆ ವಿವರಗಳಿಗೆ ಧೃವತಾರೆಯಂತಿರುವ ರಾಧೆ ಎಲ್ಲಿದ್ದಾಳೆ? ಅವಳ ಕಾಲ್ಪನಿಕ ಭಿತ್ತಿಯಾದ ಬೃಂದಾವನ ಎಲ್ಲಿದೆ?

ಇಡೀ ಭಾರತದ ವೈಷ್ಣವರಿಗೆ ರಾಧಾ-ಕೃಷ್ಣರ ನೆನಪಿನಿಂದ ಪವಿತ್ರವಾದ ಮಥುರಾ,-ಬೃಂದಾವನಗಳು ಗಮ್ಯ ಸ್ಥಾನಗಳು. ಹಿಂದೂ ಧರ್ಮದ ರಾಧಾ-ಕೃಷ್ಣ ಕಲ್ಪನೆಯಿಂದ ಪುಳಕಿತವಾಗಿರುವ ದೊಡ್ಡ ಸಂಖ್ಯೆಯ ವಿದೇಶೀಯರೂ ಮಥುರಾ -ಬೃಂದಾವನಗಳಿಗೆ ಧಾವಿಸುತ್ತಾರೆ. ಹೃಷಿಕೇಶ, ಹರಿದ್ವಾರ, ವಾರಾಣಸಿಗಳ ಹಾಗೆ ಈ ವೈಷ್ಣವ ಕ್ಷೇತ್ರಗಳಲ್ಲಿ ಅನೇಕ ಆಶ್ರಮಗಳು ನಿರ್ಮಾಣವಾಗಿ ತಮ್ಮ ವೈಭವೋಪೇತ ಕಟ್ಟಡಗಳಿಂದ ಬಡ ಭಕ್ತರನ್ನು ಹಂಗಿಸುವಂತಿವೆ.

ಪ್ರೇಮಿಗಳಂತೆ ಭಕ್ತರೂ ಕುರುಡರೆಂದು ಚೆನ್ನಾಗಿ ಅರ್ಥ ಮಾಡಿಕೊಂಡ ಸ್ಥಳೀಕರು ಭಕ್ತರ ಮುಗ್ಧತೆಯನ್ನು ಲೂಟಿ ಮಾಡಿ ಅತ್ಯಧಿಕ ಲಾಭ ಪಡೆಯಲೆಂದು ಸದಾ ಹವಣಿಸುತ್ತಿರುತ್ತಾರೆ. ಪೂಜಾರಿಗಳಿಂದ ಹಿಡಿದು ಅಲ್ಲಿನ ರಿಕ್ಷಾವಾಲಾಗಳವರೆಗೆ ಎಲ್ಲರಿಗೂ ಹಣ ಗಳಿಸುವ ತುರಿಕೆ. ಅದು ಅವರ ಬದುಕಿನ ಮಜಬೂರಿ, ಅನಿವಾರ್ಯತೆ.

ಬೃಂದಾವನ ಹೊಕ್ಕ ಕೂಡಲೇ ಎಲ್ಲೆಡೆಯೂ ‘ರಾಧೆ ರಾಧೆ’ ಎಂಬ ಮಂತ್ರ ಪ್ರತಿಧ್ವನಿಸುತ್ತದೆ. ಭಕ್ತರು ಭಾವುಕರಾಗುತ್ತಾರೆ. ತಮ್ಮ ಮುಂದಿನ ವಾಸ್ತವದ ಚಿತ್ರಗಳು ಅವರ ಕಣ್ಣಿಂದ ಮರೆಯಾಗುತ್ತವೆ. ಅವುಗಳ ಮೂಲಕ ತಮ್ಮ ಆದರ್ಶ ಲೋಕದ ವಿವರಗಳಲ್ಲಿ ಕಣ್ಣು ನೆಟ್ಟು ಆ ಕ್ಷೇತ್ರದ ಕೊಳಕು ಮತ್ತು ಕುಟಿಲತೆಯನ್ನು ಪೂರ್ತಿ ಮರೆತುಬಿಡುತ್ತಾರೆ. ಹೀಗಾಗಿ ಪುಣ್ಯಕ್ಷೇತ್ರದ ಯಜಮಾನಪ್ಪಗಳಿಗೆ ನಿತ್ಯವೂ ಹಬ್ಬ.

ದೇವಸ್ಥಾನದ ಪೂಜಾರಿಗಳ ಮೋರೆಯ ಮೇಲೆ ಭಕ್ತಿಯ ಒಂದು ಗೆರೆಯೂ ಕಾಣುವುದಿಲ್ಲ. ಬದಲಿಗೆ ಏಮಾರಿಸಿ ಕಾಸು ಕಬಳಿಸುವ
ದುರಾಸೆ ತಾಂಡವವಾಡುತ್ತಿರುತ್ತದೆ. ಸ್ಥಳೀಯ ಆಡಳಿತದವರೂ ಈ ನಿತ್ಯ ಲೂಟಿಯಲ್ಲಿ ಪಾಲುದಾರರಂತೆ ಕಾಣುತ್ತಾರೆ. ಅವರಿಗೆ ಯಾತ್ರಿಗಳ ಹಿತ ಮತ್ತು ಸ್ವಾಸ್ಥ್ಯದ ಗೊಡವೆಯೇ ಇಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಬೃಂದಾವನದ ಅಸಂಖ್ಯಾತ ಅಸಹಾಯಕ ವಿಧವೆಯರು ಕಣ್ಣಿಗೆ ಮುಳ್ಳಾಗುತ್ತಾರೆ. ವಿಧವೆಯರಿಗಾಗಿ ವಿಶೇಷ ಆಶ್ರಮಗಳು ನಿರ್ಮಾಣವಾಗಿ ಅವರ ಊಟೋಪಚಾರಕ್ಕೆಂದು ಭಕ್ತರಿಂದ ಹೇರಳ ಹಣ ವಸೂಲಿಯಾಗುತ್ತದೆ. ಇನಿ ಮಾತುಗಳ ಮೂಲಕ ಭಕ್ತಾದಿಗಳನ್ನು ಬೇಸ್ತು ಬೀಳಿಸುವ ಪೂಜಾರಪ್ಪಗಳ ಕೈಯಲ್ಲಿ ಹಣ ವಸೂಲಿಯ ರಸೀತಿ ಪುಸ್ತಕ ಕಂಗೊಳಿಸುತ್ತಿರುತ್ತದೆ. ನಿರಾಶ್ರಿತೆಯರಾದ ಆ ವಿಧವೆಯರಿಗೆ ನೆರವು ನೀಡದಿರಲು ಕಟುಕರಿಗೂ ಅಸಾಧ್ಯ. ಆದರೆ ವಸೂಲಿಯಾದ ಹಣ ಎಲ್ಲಿ ಗಾಯಬ್ಬಾಗುತ್ತದೋ ಗೊತ್ತಿಲ್ಲ. ಆ ವಿಧವೆಯರು ಬೀದಿಬೀದಿಗಳಲ್ಲಿ ವಿಹ್ವಲರಾಗಿ ಭಿಕ್ಷೆ ಬೇಡುತ್ತಿರುತ್ತಾರೆ.

ಬೃಂದಾವನಕ್ಕೆ ವಲಸೆ ಬರುವ ವಿಧವೆಯರ ಸಂಖ್ಯೆ ಅತ್ಯಧಿಕವಾಗಿದ್ದು ಇನ್ನು ಮುಂದೆ ಈ ವಲಸೆಯನ್ನು ಪ್ರತಿಬಂಧಿಸಬೇಕು ಎನ್ನುವುದು ಸ್ಥಳೀಯ ಲೋಕಸಭಾ ಸದಸ್ಯೆ ಹೇಮಾಮಾಲಿನಿ ಅವರ ವಾದ. ಆದರೆ ಈಗಾಗಲೇ ಅನಾಥರಾಗಿ ಬೀದಿಪಾಲಾಗಿರುವ ವಿಧವೆಯರ ಅನುಕೂಲದ ಬಗ್ಗೆ ಅವರಿಗೆ ಕಾಳಜಿ ಇದ್ದಂತೆ ತೋರುವುದಿಲ್ಲ.

ಆ ವಿಧವೆಯರನ್ನು ಕಂಡಾಗ ಹೆಂಗರುಳಿಗರ ಕರುಳು ಚುಳ್ಳೆನ್ನುತ್ತದೆ. ಅದರೆ ಆ ಅಸಹಾಯಕರ ಹಿತರಕ್ಷಣೆಯ ಸಾಮೂಹಿಕ ಪ್ರಯತ್ನಗಳು ಒಂದು ಮೋಸವಾಗಿರುವ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಅನುಕಂಪದಿಂದ ಏನು ಪ್ರಯೋಜನ?

ಹೀಗಾಗಿ ಬೃಂದಾವನದ ಕೊಳಕಾದ ಸ್ಥಳಗಳಲ್ಲಾಗಲೀ, ಕುಂಜನಿಕುಂಜಗಳ ನಡುವೆಯಾಗಲೀ ಅನಿರ್ಬಂಧಿತ ಪ್ರೇಮದ ಸಾಕಾರ ಮೂರ್ತಿ ರಾಧೆ ಕಾಣದೆ, ಆ ವಿಧವೆಯರ ಸೋತ ಮುಖಗಳಲ್ಲಿ ಸೊರಗುತ್ತಿರುವ ಹಾಗೆ ಕಾಣುತ್ತದೆ. ರಾಧಾಕೃಷ್ಣರ ಆದರ್ಶ ಪ್ರೇಮ ನರಭಕ್ಷಕರ ಕೈಯಲ್ಲಿ ಒಂದು ಮೋಸದ ಗಳಿಕೆಯ ಸಾಧನ ಆಗಿರುವುದನ್ನು ಕಂಡಾಗ ಹೇಸಿಗೆಯಾಗುತ್ತದೆ.

ಆದ್ದರಿಂದ ನಾನು ಇನ್ನೆಂದಿಗೂ ಭೌತಿಕ ಬೃಂದಾವನಕ್ಕೆ ಹೋಗುವುದಿಲ್ಲ. ಅನಿರ್ಬಂಧಿತ ಪ್ರೇಮದ ಅವಿಸ್ಮರಣೀಯ ರಸಕಣಗಳನ್ನು ಸವಿಯಲು ಕಲಾವಂತರು ಶಬ್ದಗಳಲ್ಲಿ, ರಾಗ, -ಲಯಗಳಲ್ಲಿ, ರಂಗು -ರೇಖೆಗಳಲ್ಲಿ, ಕಲ್ಪನಾ ಭಿತ್ತಿಗಳಲ್ಲಿ ಬಿಡಿಸಿಟ್ಟಿರುವ
ಮನೋ ಬೃಂದಾವನಗಳಿಗೆ ಮರಳುತ್ತೇನೆ.
ಈ ಬರಹದ ಸುರುವಲ್ಲಿ ಉಲ್ಲೇಖಿಸಿರುವ ಪಂಜಾಬಿ ಗೀತೆಯೂ ಇದನ್ನೇ ಹೇಳುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.