ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಕಳ್ಳು ಬಳ್ಳಿ

ADVERTISEMENT

ಬುದ್ಧನಿಂದ ಅಂಬೇಡ್ಕರ್‌ವರೆಗೆ...

ಅಸಮಾನತೆಯ ನೆಲಗಟ್ಟಿನ ಮೇಲೆ ನಿಂತ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ವನ್ನು ಸ್ವೀಕರಿಸಿದಾಗ ಅದು ಅಂಬೇಡ್ಕರ್‌ ಒಬ್ಬರ ಬದುಕಿಗೆ ತಿರುವಾಗಿರಲಿಲ್ಲ. ಭಾರತದ ಭವಿಷ್ಯಕ್ಕೆ ಬರೆದ ತಿರುವಾಗಿತ್ತು. ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ ಈ ದಿನ ಬುದ್ಧ ಮತ್ತು ಬೌದ್ಧ ಧರ್ಮದ ಜಾಡನ್ನು ಹಿಡಿದು ಚಿಂತಿಸುವಂತೆ ಮಾಡಿದೆ.
Last Updated 13 ಅಕ್ಟೋಬರ್ 2014, 19:30 IST
ಬುದ್ಧನಿಂದ ಅಂಬೇಡ್ಕರ್‌ವರೆಗೆ...

ಪುರಾಣದೊಳಗೆ ಚರಿತ್ರೆಯ ಹೂರಣ

ದಸರಾ ಹಬ್ಬ, ಚಾಮುಂಡಿ ಬೆಟ್ಟಕ್ಕೆ ಹೋದ­ವ­ರೆಲ್ಲಾ ಮಹಿಷಾಸುರನ ಆಳೆತ್ತರದ ಮೂರ್ತಿಯ ಮುಂದೆ ನಿಂತು ಫೋಟೊ ತೆಗೆಸಿ­ಕೊಳ್ಳುವ ಸಂಭ್ರಮ. ಕಣ್ಣಿಗೆ ರಾಚುವ ಬಣ್ಣಗಳು. ಕೋರೆ ಹಲ್ಲುಗಳು, ಕೆದರಿದ ಜಟೆ, ದೈತ್ಯಾಕಾರ, ಒಂದು ಕೈಯಲ್ಲಿ ಅಗಲವಾದ ಖಡ್ಗ ಮತ್ತೊಂದ­ರಲ್ಲಿ ಹಾವು. ಇಪ್ಪತ್ತನೇ ಶತಮಾನದ ಕಲಾವಿದ­ನೊಬ್ಬನ ಕಲ್ಪನೆಯ ದುಷ್ಟ ರಾಕ್ಷಸನ ಗಾರೆಶಿಲ್ಪ. ಮಹಿಷನ ಕಾರಣಕ್ಕೆ ಈ ನಾಡನ್ನು ಮೈಸೂರು ಎಂದು ಕರೆಯಲಾಗಿದೆ ಎಂದು ಹೇಳುವುದು ವಾಡಿಕೆ.
Last Updated 29 ಸೆಪ್ಟೆಂಬರ್ 2014, 19:30 IST
ಪುರಾಣದೊಳಗೆ ಚರಿತ್ರೆಯ ಹೂರಣ

ಮನದ ಭಾವ ‘ಹಸೆ’ಯಾಗಿ...

ಕಾಜಾಣ ಹೀಗೊಂದು ಮಹಿಳಾ ಕವಿ­ಗೋಷ್ಠಿ ನಡೆದಿತ್ತು. ರೂಪಾ, ಶಮ್ಮಿ, ಭಾರತಿ, ಚಂದ್ರಿಕಾ, ಮಂಜುಳಾ ಹೀಗೆ ಕವಯಿತ್ರಿ­ಯರ ಸಾಲೆ ಅಲ್ಲಿತ್ತು. ಅವರು ಕಟ್ಟಿಕೊಂಡ ರೂಪಕ ಸಾಮ್ರಾಜ್ಯದಲ್ಲಿ ಬಹುತೇಕ ಅವರೇ ಇದ್ದರು. ಹೇಳಿಕೊಳ್ಳದ, ಹೇಳಲಾಗದ ಅಂತ­ರಂಗದ ಮಾತುಗಳೆಲ್ಲ ಕವನದ ರೂಪ ಪಡೆದಿ­ದ್ದವು. ಅದರಿಂದ ಒಂದಂಶ ಸ್ಪಷ್ಟವಾಗಿತ್ತು, ಹೆಣ್ಣಿನ ತುಮುಲಗಳನ್ನು ಹೊರಹಾಕಲು ಆಸ್ಪದ ಸಿಕ್ಕರೆ ಸಾಕು ಅವು ಹೊರ ಬರಲು ತವಕಿಸುತ್ತಿವೆ. ಹಾಗೆ ಬಿಕ್ಕಿದ ಉಕ್ಕಿದ ಭಾವಗಳು ನೋಟ್ಸ್ ನ ಕಡೆಯ ಪುಟದಲ್ಲಿ ಅಡಗಿರುತ್ತಿದ್ದವು. ಅವು ಹೊರಬರಲು ಕಂಡ ಸೆಲೆ ‘ಫೇಸ್‌ಬುಕ್’ ಆಗಿದೆ. ಎಲ್ಲಾ ಅವಾಂತರಗಳ ನಡುವೆ ಫೇಸ್‌ಬುಕ್‌ ಅನ್ನು ವೇದಿಕೆಯಾಗಿಸಿಕೊಂಡು ಆಗುತ್ತಿರುವ ಕವಿಗಳ ಹುಟ್ಟು ಸೊಗಸಲ್ಲವೆ?
Last Updated 15 ಸೆಪ್ಟೆಂಬರ್ 2014, 19:30 IST
ಮನದ ಭಾವ ‘ಹಸೆ’ಯಾಗಿ...

ಚರಿತ್ರೆ ಸೃಷ್ಟಿಸಿದ ಇತಿಹಾಸ ತಜ್ಞ

ಭಾರತದಲ್ಲಿ ಸಮಾಜಶಾಸ್ತ್ರ, ರಾಜ್ಯ­ಶಾಸ್ತ್ರ ವಿಷಯಗಳಲ್ಲಿ ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳು ದೆಹಲಿಯ ಜವಾ­ಹರ­ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆ.ಎನ್‌.­ಯು.) ಓದಬೇಕೆಂಬ ಕನಸನ್ನು ಹೊತ್ತಿ­ರು­­ತ್ತಾರೆ.
Last Updated 1 ಸೆಪ್ಟೆಂಬರ್ 2014, 19:30 IST
ಚರಿತ್ರೆ ಸೃಷ್ಟಿಸಿದ ಇತಿಹಾಸ ತಜ್ಞ

ಮಾರ್ಕ್ಸ್‌ವಾದದ ಸುತ್ತ ಒಂದು ಸುತ್ತು

ಸೈಕಲ್ ಮೇಲೆ ಪುಸ್ತಕ ಹೇರಿಕೊಂಡು ಮನೆ ಮನೆಗೆ ಪುಸ್ತಕ ಮಾರಿದ ಗುಲ್ಬರ್ಗದ ಪ್ರಭಾಕರ ಕಾಂತಾ ಅವರು ಸತ್ತಾಗ ಅವರ ಮನೆಯವರ ನೆರವಿಗೆ ಬರಲು ಮಿತ್ರರು ನಿರ್ಧರಿ ಸಿದ್ದರು. ಅವರು ಸಂಗ್ರಹಿಸಿದ ಪುಸ್ತಕಗಳನ್ನು ಮಾರಾಟ ಮಾಡಲು ಆಗಸ್ಟ್ 15ರಂದು ಸಾಹಿತ್ಯ ಪರಿಷತ್ ಸಭಾಂಗಣದ ತುಂಬಾ ಹರಡ­ಲಾಗಿತ್ತು.
Last Updated 18 ಆಗಸ್ಟ್ 2014, 19:30 IST
fallback

ಮಹಾಕಾವ್ಯಗಳ ಬಹುಮುಖಿ ಜಗತ್ತು

‘ಮಾಣ್ ನಿಷಾದ ಮಾಣ್’. ಹುತ್ತ­ದಿಂದ ಹೊರಬಂದ ವಾಲ್ಮೀಕಿ, ಹಾರುತ್ತಿದ್ದ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ತೊಟ್ಟ ಬಾಣವನ್ನು ಕಂಡು ಉಚ್ಚರಿಸಿದ ಮೊದಲ ಸಾಲು ಇದೆಂಬ ಪ್ರತೀತಿ.
Last Updated 4 ಆಗಸ್ಟ್ 2014, 19:30 IST
ಮಹಾಕಾವ್ಯಗಳ ಬಹುಮುಖಿ ಜಗತ್ತು

ಬ್ರಾಹ್ಮಣೀಕರಣದ ಭ್ರಮೆಯೊಡೆಯುವ ‘ಹಳಗನ್ನಡ’

‘ಚಪಡೇನ ಲಿಖಿತೇ-–ಲಿಪಿಕರೇಣ’. 2,300 ವರ್ಷಗಳ ಹಿಂದೆ ರಾಜಾ­ಶೋಕನ ಆದೇಶದ ಮೇರೆಗೆ ಕನ್ನಡ ನಾಡಿನಲ್ಲಿ ಬಂಡೆಗಲ್ಲಿನ ಮೇಲೆ ಶಾಸನವನ್ನು ಬರೆದ ಲಿಪಿ­ಕಾರ ಚಪಡ.
Last Updated 21 ಜುಲೈ 2014, 19:30 IST
ಬ್ರಾಹ್ಮಣೀಕರಣದ ಭ್ರಮೆಯೊಡೆಯುವ ‘ಹಳಗನ್ನಡ’
ADVERTISEMENT

ತೃತೀಯ ಲಿಂಗಿಗಳನ್ನು ಗೌರವಿಸೋಣ

ವಿಚಾರ ಕಮ್ಮಟವೊಂದರಿಂದ ಹೊರ­ಬರು­ತ್ತಿದ್ದ ಗುಂಪು ತನ್ನದೇ ಲೋಕದಲ್ಲಿ ಮುಳುಗಿ ಹೋಗಿತ್ತು. ಪರಸ್ಪರ ‘ಏನೇ ಹುಡುಗ, ಏನೋ ಹುಡುಗಿ’ ಎಂದು ಗೇಲಿ ಮಾಡಿ­ಕೊಳ್ಳುತ್ತಾ ಬರುತ್ತಿರುವುದನ್ನು ನೋಡಿದರೆ ಮತ್ತೊಮ್ಮೆ ಅವರ ಕಡೆ ಕಣ್ಣು ಹಾಯದೇ ಇರಲು ಸಾಧ್ಯವಿರಲಿಲ್ಲ.
Last Updated 7 ಜುಲೈ 2014, 19:30 IST
fallback

ಮಲ ಹೊರುವವರ ದೇಶದಲ್ಲಿ ನಿಷೇಧದ ಕತೆ

ಇದು ನಮ್ ಕಥೆ. ಬಾಳ ಹಳೇದು. ನಮಗೂ ಒಂದು ಕಥೆಯಿದೆ, ಬದುಕಿದೆ ಅಂತ ಯಾರಿಗೂ ಅನ್ಸೋದಿಲ್ಲ. ಏನೋ ಗೋಳು ಅಂತ ತಿಳಿಬೇಡಿ. ನಮ್ಮ ಕಾಯಕದಿಂದ ನಮ್ಮನ್ನು ಬಿಡು­ಗಡೆಗೊಳಿಸ್ಬೇಕು ಅಂತ ಸುಪ್ರೀಂ ಕೋರ್ಟ್‌ ಇದೇ ವರ್ಷ ಮಾರ್ಚ್‌ ೨೭ರಂದು ಆದೇಶ ಹೊರ­­­ಡಿಸಿದೆ. ನಮಗೆ ಮನೆಗಳನ್ನು ಕಟ್ಟಿ­ಕೊಡ­ಬೇಕು ಅಂತ ಸರ್ಕಾರಕ್ಕೆ ಸೂಚನೆ ನೀಡಿದೆ. ನಮಗೆ ಅಂಥದ್ದೊಂದು ಕನಸು ಸಹ ಎಂದೂ ಬಿದ್ದಿ­­ರ­ಲಿಲ್ಲ. ಯಾಕೆಂದರೆ ನಮಗೆ ಮನೆಗಳಲ್ಲಿ ಬದುಕೇ ಗೊತ್ತಿರಲಿಲ್ಲ. ಊರ ಹೊರಗಲ ಕೇರಿಯ ಕೊಂಪೆಗಳಲ್ಲಿ ನಮ್ದೂ ಒಂದು ಜೋಪಡಿ. ನಗರಕ್ ಬಂದ್ರೆ ಅಲ್ಲೂ ನಮಗೇ ಅಂತ ಜಾಗ ಇರೋದೇ ಬಿಡಿ, ಕಾಲೋನಿ ಇಲ್ಲವೇ ಸ್ಲಮ್ಮು ಅಂತೀರ.
Last Updated 23 ಜೂನ್ 2014, 19:30 IST
ಮಲ ಹೊರುವವರ ದೇಶದಲ್ಲಿ ನಿಷೇಧದ ಕತೆ

ತಿರುಳ ಬಿಟ್ಟು ಸಿಪ್ಪೆ ಮೆಲ್ಲುವ ಸಿರಿ

‘ತಗ್ಗಿದವರ ಎಚ್ಚುಸಬೇಕು ಎಚ್ಚಿದವರ ತಗ್ಗುಸಬೇಕು’ ಇದು ಜನಪದರ ಸಾಲು. ಮುಂದುವರಿದು ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೀಮೆಯ ಜನಮಾನಸದಲ್ಲಿ ಮನೆಮಾಡಿರುವ ಆರಾಧ್ಯ ದೈವ ಮಂಟೇಸ್ವಾಮಿಯ ಕಾವ್ಯದ ಸಾಲು. ಪದ, ಸಾಲು ಎಂದು ಕರೆಯುವ ಈ ಹಾಡುಗಳು ಯಾವ ಕಾವ್ಯಕ್ಕೂ ಕಡಿಮೆಯಿಲ್ಲ.
Last Updated 9 ಜೂನ್ 2014, 19:30 IST
fallback
ADVERTISEMENT
ADVERTISEMENT
ADVERTISEMENT