ಮಿಲಿಟರಿ ಕಾರ್ಯತಂತ್ರದಲ್ಲಿ, ವಿಶೇಷವಾಗಿ ವಾಯುಪಡೆಯಲ್ಲಿ, ಆಕ್ರಮಣಕಾರಿ ಮುಂಚೂಣಿ ದಳವು ಉತ್ತಮ ರಕ್ಷಣೆಯನ್ನು ಹೊಂದಿದ್ದರೆ ಮಾತ್ರ ಅದನ್ನು ಅತ್ಯುತ್ತಮವೆಂದು ಪರಿಗಣಿಸಬಹುದು. ಒಂದು ಸಶಸ್ತ್ರ ಪಡೆಯು ಪರಿಣಾಮಕಾರಿಯಾದ ನಿಗ್ರಹ ಶಕ್ತಿಯನ್ನು ಹೊಂದಿದ್ದರೆ ಮಾತ್ರ ಇದು ಸಾಧ್ಯ.

ಎಷ್ಟೇ ಅತ್ಯಾಧುನಿಕವಾಗಿದ್ದರೂ ಯುದ್ಧ ವಿಮಾನವನ್ನು ನೆಲದಿಂದ ನಭಕ್ಕೆ ನೆಗೆಯುವ ಕ್ಷಿಪಣಿ ಅಥವಾ ರಾಡಾರ್ ಹೊಡೆದುರುಳಿಸಬಹುದು. ಹೀಗಾಗಿ ರಕ್ಷಣಾತ್ಮಕ ಕ್ರಮಗಳ ಕುರಿತಾಗಿ ಒತ್ತು ನೀಡುವುದು ಹೆಚ್ಚು ಮುಖ್ಯವಾಗಿದೆ. ಅದಕ್ಕಾಗಿ ಇಡಬ್ಲ್ಯು ಸೂಟ್, ಚಾಫ್, ಫ್ಲೇರ್ಸ್, ಜಾಮರ್ಗಳು ಮುಂತಾದ ಹಲವು ವ್ಯವಸ್ಥೆಗಳಿವೆ.

ಇಡಬ್ಲ್ಯೂ ಸೂಟ್: ಇದು ಎಲೆಕ್ಟ್ರಾನಿಕ್ ದಾಳಿಯ ಒಂದು ರೂಪವಾಗಿದೆ. ಇದರಲ್ಲಿ ಅಡ್ಡಿಪಡಿಸುವ ಸಂಕೇತಗಳನ್ನು ಜಾಮರ್ಗಳು ಶತ್ರುಗಳ ವ್ಯವಸ್ಥೆಯ ಕಡೆಗೆ ಹೊರಸೂಸುತ್ತವೆ. ಹೆಚ್ಚು ಕೇಂದ್ರೀಕೃತ ಶಕ್ತಿಯ ಸಂಕೇತದೊಂದಿಗೆ ರಿಸೀವರ್ ಅನ್ನು ನಿರ್ಬಂಧಿಸುತ್ತವೆ.

ಚಾಫ್ ಮತ್ತು ಫ್ಲೇರ್ ಎಂದರೆ, ಶತ್ರುವಿಮಾನಗಳಿಂದ ಚಿಮ್ಮುವ ಕ್ಷಿಪಣಿಗಳ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಬಳಸುವ ಪ್ರತಿಕ್ರಮಗಳಾಗಿವೆ.

ಚಾಫ್: ಇದು ಅಲ್ಯೂಮಿನಿಯಂ ಅಥವಾ ಸತುವಿನ ಸಣ್ಣ ಪಟ್ಟಿಗಳನ್ನು ಒಳಗೊಂಡಿರುತ್ತದೆ, ವಿಮಾನವು ದೊಡ್ಡ ಗೊಂಚಲುಗಳಲ್ಲಿ ಇವುಗಳನ್ನು ಬಿಡುಗಡೆ ಮಾಡಿ ಶತ್ರುಗಳ ರಾಡಾರ್ನ ದಿಕ್ಕು ತಪ್ಪಿಸುತ್ತದೆ. ಈ ಲೋಹೀಯ ಮೋಡಗಳು ಕ್ಷಿಪಣಿಯ ರಾಡಾರ್ಗೆ ಪ್ರತ್ಯೇಕ ಗುರಿಯಾಗಿ ಗೋಚರಿಸುತ್ತವೆ. ಈ ಮೂಲಕ ಕ್ಷಿಪಣಿಯನ್ನು ಕ್ಷಣಕಾಲ ಗೊಂದಲಕ್ಕೆ ಈಡು ಮಾಡುತ್ತವೆ. ಈ ಸಮಯವನ್ನು ಬಳಸಿಕೊಂಡು ಯುದ್ಧ ವಿಮಾನಗಳು ಅಪಾಯದಿಂದ ಪಾರಾಗುತ್ತವೆ.

ಫ್ಲೇರ್: ಒಳಬರುವ ಕ್ಷಿಪಣಿ ಅಥವಾ ರಾಡಾರ್ ಅನ್ನು ಬೇರೆಡೆಗೆ ತಿರುಗಿಸಲು ವಿಮಾನಗಳು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು. ಒಂದು ಜ್ವಾಲೆಯು ಬಲವಾದ ಶಾಖದ ಅಲೆಯನ್ನು ಹೊರಸೂಸುತ್ತದೆ. ಈ ಮೂಲಕ ಶಾಖ ಅನ್ವೇಷಕ ಕ್ಷಿಪಣಿಯನ್ನು ಬೇರೆಡೆಗೆ ತಿರುಗಿಸಲಾಗುತ್ತದೆ.

ಶಾಖ ಅನ್ವೇಷಕ ಕ್ಷಿಪಣಿ: ಅತಿಗೆಂಪು ಹೊರಸೂಸುವಿಕೆಗಳು ಬಿಡುಗಡೆಯಾಗುತ್ತವೆ ಮತ್ತು ಜೆಟ್ನ ಎಂಜಿನ್ನಂತಹ ಶಾಖವನ್ನು ಸೂಸುವ ಭಾಗಗಳಿಂದ ಬಲವಾಗಿ ಹರಡುತ್ತವೆ. ಈ ಕ್ಷಿಪಣಿಗಳನ್ನು ಉಡಾವಣೆ ಮಾಡಿದಾಗ ಶಾಖದ ಮೂಲವನ್ನು ಟ್ರ್ಯಾಕ್ ಮಾಡುತ್ತವೆ ಮತ್ತು ಅದನ್ನು ಅನುಸರಿಸುತ್ತವೆ. ಜೆಟ್ ಇಂಜಿನ್ಗಳು ಗರಿಷ್ಠ ಶಾಖವನ್ನು ಹೊರಸೂಸುವುದರಿಂದ, ಈ ಕ್ಷಿಪಣಿಗಳು ಗುರಿಯನ್ನು ಸುಲಭವಾಗಿ ಗುರುತಿಸಿ, ಬೆನ್ನಟ್ಟುತ್ತವೆ.

ಜಾಮರ್ಗಳು: ಮಿಲಿಟರಿ ಚಟುವಟಿಕೆಗಳಲ್ಲಿ, ಶತ್ರು ರಾಡಾರ್ ಅಥವಾ ಸಂವಹನಗಳನ್ನು ಗೊಂದಲಕ್ಕೆ ಒಳಪಡಿಸಲು ಜಾಮಿಂಗ್ ಅನ್ನು ಆಗಾಗ್ಗೆ ಬಳಸಲಾಗುತ್ತದೆ. ಮಿಲಿಟರಿ ಪರಿಭಾಷೆಯ ಪ್ರಕಾರ ಇವೆಲ್ಲವೂ ವಂಚಿಸುವ ಪ್ರಕಾರಗಳಾಗಿವೆ.

ಈ ಮೋಹದ ಬಲೆಯು ಮೋಸ ಮಾಡುವ ಮೂಲಕವೇ ಯಾರನ್ನಾದರೂ ಆಕರ್ಷಿಸುತ್ತದೆ. ಆದ್ದರಿಂದ, ಯುದ್ಧ ವಿಮಾನಗಳಲ್ಲಿ ಮೂಲಭೂತವಾಗಿ ಈ ಡಿಕಾಯ್ಗಳು ಒಳಬರುವ ಬೆದರಿಕೆಯನ್ನು ಆಕರ್ಷಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಮೋಸಗೊಳಿಸಿ ಅದರ ದಿಕ್ಕು ತಪ್ಪಿಸುತ್ತವೆ.

ಮೊನೊಪಲ್ಸ್ ರಾಡಾರ್ ಮತ್ತು ಲೋರೋ (LORO- ಲೋಬ್-ಆನ್-ರಿಸೀವ್-ಓನ್ಲಿ) ರಾಡಾರ್ಗಳನ್ನು ಹೊಂದಿರುವ ಶತ್ರು ಕ್ಷಿಪಣಿಗಳಿಂದ ಸಾಮಾನ್ಯ ಇಡಬ್ಲ್ಯು ಸೂಟ್ಗಳು ರಕ್ಷಿಸಲಾರವು.

ಮೊನೊಪಲ್ಸ್ ರಾಡಾರ್: ಒಂದೇ ಪಲ್ಸ್ ರವಾನಿಸುವ ರಾಡಾರ್. ಇದು ಹೆಚ್ಚಿನ ಅಳತೆಯ ನಿಖರತೆಯ ಪ್ರಯೋಜನವನ್ನು ನೀಡುತ್ತದೆ (ದೋಷಗಳನ್ನು ಕೋನೀಯ ನಿಮಿಷದ ಹತ್ತನೇ ಒಂದು ಭಾಗಕ್ಕೆ ಇಳಿಸುವುದು.

ಲೊರೋ: ಎಲೆಕ್ಟ್ರಾನಿಕ್ ಯುದ್ಧಗಳಲ್ಲಿ ಟ್ರ್ಯಾಕಿಂಗ್ ರಾಡಾರ್ಗಳನ್ನು ತಡೆದು ದಿಕ್ಕು ತಪ್ಪಿಸುವುದು ಗಮ್ಯದ ವೇದಿಕೆಗಳ ಸುರಕ್ಷತೆಯಲ್ಲಿ ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದೆ... ಈ ವಿಧಾನವನ್ನು ಬಳಸುವ ರಾಡಾರ್ಗಳನ್ನು ಲೋಬ್ ಆನ್ ರಿಸೀವ್ ಓನ್ಲಿ (LORO) ಎಂದು ಕರೆಯಲಾಗುತ್ತದೆ.

ರಾಫೆಲ್ನಂತಹ ಆಧುನಿಕ ವಿಮಾನಗಳು ಟ್ರ್ಯಾಕಿಂಗ್ ನಿಖರತೆಯನ್ನು ಸುಧಾರಿಸಿ, ಅಪಾಯವನ್ನು ನಿವಾರಿಸಲು ಟೋವ್ಡ್ ಡಿಕಾಯ್ (Towed Decoy)ಗಳನ್ನು ಬಳಸುತ್ತವೆ.

ಟೋವ್ಡ್ ಡಿಕಾಯ್ ಎಂದರೇನು?
ಇಲ್ಲಿ "ಟೋವ್ಡ್" ಎಂಬ ಪದದ ಅರ್ಥ "ಒಂದು ವಸ್ತುವಿನ ಹಿಂದೆ ಯಾರನ್ನಾದರೂ / ಏನನ್ನಾದರೂ ಎಳೆಯುವುದು." ಆದ್ದರಿಂದ, ಮೂಲತಃ ಟೋವ್ಡ್ ಡಿಕಾಯ್ಗಳನ್ನು ವಿಮಾನದ ಜೊತೆಗೆ ಎಳೆಯಲಾಗುತ್ತದೆ. ಆ ಡಿಕಾಯ್ ವಿಮಾನದ ಇಡಬ್ಲ್ಯು ಸೂಟ್ಗಳ ಭಾಗವಾಗಿರುತ್ತದೆ.

ಇದು ಮೂಲತಃ ಆರ್ಎಫ್-ನಿರ್ದೇಶಿತ ಕ್ಷಿಪಣಿಗಳಿಗೆ ಅಂದರೆ ರಾಡಾರ್ ಮಾರ್ಗದರ್ಶಿ ಕ್ಷಿಪಣಿಗಳಿಗೆ ಪ್ರತಿಕ್ರಮವಾಗಿದೆ. ರಾಡಾರ್ ಜಾಮಿಂಗ್ ಅನ್ನು ಒದಗಿಸಲು ಇದು ವಿಮಾನದ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ.
ಹೆಚ್ಚುವರಿಯಾಗಿ, ಇದನ್ನು ಸಿಗ್ನಲ್ ರಿಪೀಟರ್ ಆಗಿ ಬ್ಯಾಕಪ್ ಮೋಡ್ನಲ್ಲಿಯೂ ಬಳಸಬಹುದು, ಇದು ಒಳಬರುವ ಕ್ಷಿಪಣಿಗಳನ್ನು ಅವುಗಳ ನಿಜವಾದ ಗುರಿಯಿಂದ ದೂರ ಸೆಳೆಯಲು ಅನುವು ಮಾಡಿಕೊಡುತ್ತದೆ.

ಈ ಟೋವ್ಡ್ ಡಿಕಾಯ್ ಅನ್ನು ಹೆಚ್ಚುವರಿ ಪೈಲಾನ್ ಮೂಲಕ ರೆಕ್ಕೆಗಳಿಗೆ {ವಿಮಾನದ ರೆಕ್ಕೆಯ ಮೇಲಿನ ರಚನೆಯನ್ನು ಎಂಜಿನ್ ಅನ್ನು ಬೆಂಬಲಿಸಲು ಅಥವಾ ಶಸ್ತ್ರಾಸ್ತ್ರ, ಇಂಧನ ಟ್ಯಾಂಕ್ ಅಥವಾ ಇತರ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ} ಸೇರಿಸಲಾಗುತ್ತದೆ.
ಇದು 1.6 ಮ್ಯಾಕ್ ವೇಗದವರೆಗೆ ವಿಮಾನದೊಂದಿಗೆ ಹಾರಬಲ್ಲದು ಮತ್ತು 9ಜಿ ಯ ಬಲ ಮತ್ತು ವೇಗವರ್ಧನೆಯನ್ನು ತಡೆದುಕೊಳ್ಳಬಲ್ಲದು. ಈ ಕಾರಣದಿಂದಾಗಿ, ಶಬ್ದಾತೀತ ವೇಗದಲ್ಲಿ ಜೆಟ್ ಪ್ರಯಾಣಿಸುವಾಗ ಇದನ್ನು ಸುಲಭವಾಗಿ ಬಳಸಬಹುದು. ಸಂಪರ್ಕವು ಮೂಲತಃ ಆಪ್ಟಿಕ್ ಫೈಬರ್ನೊಂದಿಗೆ ಇರುವುದರಿಂದ ವಿದ್ಯುತ್ ಸರಬರಾಜು ಯಾವಾಗಲೂ ಹೆಚ್ಚಾಗಿರುತ್ತದೆ.

ಶತ್ರು ಕ್ಷಿಪಣಿ ಹಿಮ್ಮೆಟ್ಟಿಸಲು ತೇಜಸ್ಗೆ ಡಿಆರ್ಡಿಒ ಹೊಸ ಚಾಫ್ ತಂತ್ರಜ್ಞಾನದ ಬಲ

ಭಾರತೀಯ ರಫೇಲ್ಗೆ ಇದು ಹೇಗೆ ಲಾಭದಾಯಕವಾಗಿದೆ?
ವಾಯುಪಡೆಗಳಿಂದ ರಕ್ಷಣೆ ಪಡೆದಿರುವ ಸ್ಥಳಕ್ಕೆ ಒಂದು ವಿಮಾನವು ಬರುತ್ತಿದೆ ಅಥವಾ ಸಮೀಪಿಸುತ್ತಿದೆ ಎಂದು ಭಾವಿಸೋಣ. ಒಳಬರುವ ಕ್ಷಿಪಣಿಗಳನ್ನು ದೂಡಲು ವಿಮಾನಕ್ಕೆ ಈ ಟೋವ್ಡ್ ಡಿಕಾಯ್ ಸಹಾಯ ಮಾಡುತ್ತದೆ. ಭಾರತದ ಪ್ರತಿಯೊಂದು ರಫೇಲ್ ಈ ಡಿಕಾಯ್ ಅನ್ನು ಹೊಂದಿದೆ ಮತ್ತು ಇದು ಪ್ರತಿ ರೆಕ್ಕೆಯ ಅಡಿಯಲ್ಲಿ ಒಂದು ಡಿಕಾಯ್ ಅನ್ನು ಅಳವಡಿಸಲಾಗಿದೆ.

ಆತ್ಮನಿರ್ಭರ: ರಕ್ಷಣಾ ಉಪಕರಣಗಳ ರಫ್ತಿನಲ್ಲೂ ಸಾಧನೆಯತ್ತ ಭಾರತ

ಈ ಡಿಕಾಯ್ ಅನ್ನು ಎಲ್ವೈ-80, ಎಚ್ಕ್ಯೂ-9, ಮತ್ತು ಎಸ್-400 ಮುಂತಾದ ಅತ್ಯಾಧುನಿಕ ವಾಯು ರಕ್ಷಣೆಗಳ ವಿರುದ್ಧವೂ ಬಳಸಬಹುದು. ಈ ಡಿಕಾಯ್ಗಳ ಹಿಂತೆಗೆದುಕೊಳ್ಳುವ ಸ್ವಭಾವದಿಂದಾಗಿ, ಒಳಬರುವ ಬೆದರಿಕೆಯನ್ನು ಯಶಸ್ವಿಯಾಗಿ ತಪ್ಪಿಸಿದ/ಜಾಮಿಂಗ್ ಮಾಡಿದ ಅನಂತರ ಅವುಗಳನ್ನು ಮರಳುವಂತೆ ಮಾಡಿ ವಿಮಾನಕ್ಕೆ ಜೋಡಿಸಬಹುದು. ಮುಂದೆ, ಮತ್ತೊಂದು ಬೆದರಿಕೆ ಬಂದರೆ, ಅದನ್ನು ಮರು ನಿಯೋಜಿಸಬಹುದು.

ವಿಮಾನಯಾನ ಕ್ಷೇತ್ರವಾಗಿ ಬೆಂಗಳೂರು: ಸುವರ್ಣಾವಕಾಶ ಕೈಚೆಲ್ಲಬಾರದು

ಈ ಟೋವ್ಡ್ ಡಿಕಾಯ್ಗಳು ರಫೇಲ್ಗಳನ್ನು ಸುರಕ್ಷಿತವಾಗಿಸುತ್ತವೆ. ಒಂದು ವೇಳೆ ಡಿಕಾಯ್ಸ್ ಇರುವ ಈ ವಿಮಾನಗಳು ಬಾಲಾಕೋಟ್ ಘಟನೆಯಲ್ಲಿ ಇದ್ದಿದ್ದರೆ ಮತ್ತು ಸುಖೋಯ್ ಸ್ಥಳದಲ್ಲಿ ಅಮ್ರಾಮ್ (AMRAAM) ಅನ್ನು ರಫೇಲ್ ಮೇಲೆ ಹಾರಿಸಿದ್ದರೆ ಆಗ ರಫೇಲ್ ಸುಖೋಯ್ಗಿಂತ ರಕ್ಷಣಾತ್ಮಕವಾಗಿ ಹೆಚ್ಚು ಆಕ್ರಮಣಕಾರಿಯಾಗಿರುತ್ತಿತ್ತು. ಆಗ, ಭಾರತದ ಒಂದು ಯುದ್ಧ ವಿಮಾನವೂ ನೆಲಕಚ್ಚದೆ, ಪಾಕಿಸ್ತಾನದ ಅನೇಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವುದನ್ನು ನಾವು ಕಣ್ತುಂಬಿಕೊಳ್ಳಬಹುದಿತ್ತು.

ಗಿರೀಶ್ ಲಿಂಗಣ್ಣ, ವ್ಯವಸ್ಥಾಪಕ ನಿರ್ದೇಶಕರು, ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ, (ಇಂಡೋ -ಜರ್ಮನ್ ಸಂಸ್ಥೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.