‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎನ್ನುವ ಆಶಯದೊಂದಿಗೆ 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಚಾರಿತ್ರಿಕ ಘಟನೆಯ ಸುವರ್ಣ ಮಹೋತ್ಸವ ಸಂದರ್ಭವು ಕನ್ನಡಿಗರ ಸಂಭ್ರಮವಾಗಿ ರೂಪುಗೊಂಡಿರುವುದು ಸಹಜವಾಗಿದೆ. ಭಾಷೆಯ ಮೂಲಕ ರಾಜ್ಯದ ಹೆಸರನ್ನು ಸಂಕೇತಿಸುವ ವಿದ್ಯಮಾನಕ್ಕೆ ಐವತ್ತು ವರ್ಷಗಳು ತುಂಬಿರುವುದು ಜನರ ಭಾವಕೋಶಕ್ಕೆ ಹತ್ತಿರವಾದುದು. ತಾಯ್ನುಡಿಯನ್ನು ಸಂಭ್ರಮಿಸುವ, ನಾಡಿನ ಅಸ್ಮಿತೆಯ ಬಗ್ಗೆ ಅಭಿಮಾನ ಹೊಂದುವ ಹಾಗೂ ಗೌರವವನ್ನು ಪ್ರಕಟಪಡಿಸುವ ‘ರಾಜ್ಯೋತ್ಸವ’ ಸಂಭ್ರಮಕ್ಕೆ ಸುವರ್ಣ ಮಹೋತ್ಸವ ಸಂದರ್ಭವೂ ಸೇರಿಕೊಂಡು ಈ ಬಾರಿಯ ಕನ್ನಡ ಹಬ್ಬ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಸಂಭ್ರಮವನ್ನು ಹೆಚ್ಚಿಸುವಂತೆ ವಾರ್ಷಿಕ ‘ರಾಜ್ಯೋತ್ಸವ ಪ್ರಶಸ್ತಿ’ಗಳ ಜೊತೆಗೆ, ನೂರು ಸಾಧಕರಿಗೆ ‘ಸುವರ್ಣ ಮಹೋತ್ಸವ ಪ್ರಶಸ್ತಿ’ಗಳನ್ನೂ ರಾಜ್ಯ ಸರ್ಕಾರ ಪ್ರಕಟಿಸಿದೆ. ನಾಡು–ನುಡಿಗೆ ಮಹತ್ವದ ಕೊಡುಗೆ ನೀಡಿದವರನ್ನು ಗುರುತಿಸಿ, ಗೌರವಿಸುವ ಮೂಲಕ ಸುವರ್ಣ ಮಹೋತ್ಸವ ಪ್ರಭಾವಳಿಯ ಕರ್ನಾಟಕ ರಾಜ್ಯೋತ್ಸವವನ್ನು ಅವಿಸ್ಮರಣೀಯ ಹಾಗೂ ಅರ್ಥಪೂರ್ಣಗೊಳಿಸುವ ಸರ್ಕಾರದ ನಡೆ ಸ್ವಾಗತಾರ್ಹ. ಈ ಸಂಭ್ರಮವು ಶಾಲೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಅನಾವರಣಗೊಂಡು, ಇಡೀ ಕರ್ನಾಟಕ ಕನ್ನಡ ಧ್ವಜವನ್ನು ಎತ್ತಿಹಿಡಿದಂತೆ ಕಾಣಿಸುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ನಾಡು–ನುಡಿ
ಯನ್ನು ಬಲಗೊಳಿಸುವ ಉದ್ದೇಶದ ಅಕಾಡೆಮಿ ಹಾಗೂ ಪ್ರಾಧಿಕಾರಗಳು ಇನ್ನಷ್ಟು ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸಬೇಕು. ಸುವರ್ಣ ಮಹೋತ್ಸವದ ಸಂಭ್ರಮವು ಪ್ರಶಸ್ತಿಗಳು ಹಾಗೂ ಪುಸ್ತಕ ಪ್ರಕಟಣೆಗಷ್ಟೇ
ಸೀಮಿತಗೊಳ್ಳದೆ ಕನ್ನಡವನ್ನು ರಚನಾತ್ಮಕವಾಗಿ ರೂಪಿಸುವ ಕೆಲಸ ಅಕಾಡೆಮಿ–ಪ್ರಾಧಿಕಾರಗಳಿಂದ ನಡೆಯಬೇಕಾಗಿದೆ. ಕನ್ನಡ ಸಂಭ್ರಮವು ಭಾವನೆಗಳಿಗೆ ಸೀಮಿತಗೊಳ್ಳದೆ ಕನ್ನಡಿಗರ ಬದುಕನ್ನು ಸಹನೀಯಗೊಳಿಸುವ ರೂಪವನ್ನೂ ಹೊಂದಬೇಕಾಗಿದೆ.

ಕನ್ನಡವನ್ನು ಕಟ್ಟುವ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸರ್ಕಾರ ನಿರಂತರತೆಯನ್ನು ತಂದುಕೊಡಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು ಹದಿನಾರು ವರ್ಷಗಳಾದವು. ಹೋರಾಟದ ಮೂಲಕ ಪಡೆದುಕೊಂಡ ಈ ಸ್ಥಾನಮಾನದಿಂದ ಕನ್ನಡಕ್ಕಾದ ಪ್ರಯೋಜನಗಳೇನು ಎನ್ನುವುದನ್ನು ನಾಡಿಗೆ ತಿಳಿಸುವ ಕೆಲಸವಾಗಬೇಕು. ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಬೌದ್ಧಿಕವಾಗಿ ಕಡು ದಾರಿದ್ರ್ಯದ ಸ್ಥಿತಿ ತಲುಪಿರುವ ದಿನಗಳಿವು. ವಿಶ್ವವಿದ್ಯಾಲಯಗಳನ್ನು ಬಲಪಡಿಸುವ ಕೆಲಸ ಸರ್ಕಾರದ ಆದ್ಯತೆಯಾಗಬೇಕು. ಅವುಗಳಿಗೆ ಅಗತ್ಯವಾದ ಆರ್ಥಿಕ ಹಾಗೂ ಮಾನವಿಕ ಸಂಪನ್ಮೂಲಗಳನ್ನು ನೀಡದೇ ಹೋದರೆ, ಉನ್ನತ ಶಿಕ್ಷಣ ಕ್ಷೇತ್ರದ ಜೊತೆಗೆ ನಾಡು– ನುಡಿಯನ್ನೂ ದುರ್ಬಲಗೊಳಿಸಿದಂತಾಗುತ್ತದೆ ಎನ್ನುವುದನ್ನು ಸರ್ಕಾರ ಮರೆಯಬಾರದು. ಇನ್ನಾದರೂ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಉಮೇದು ಕೈಬಿಟ್ಟು, ಇರುವ ವಿಶ್ವವಿದ್ಯಾಲಯಗಳನ್ನು ಸದೃಢಗೊಳಿಸಬೇಕು. ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಆರಂಭಗೊಂಡ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಸ್ತುತ ಸ್ಥಾವರದ ರೂಪದಲ್ಲಷ್ಟೇ ಉಳಿದಂತಿದೆ. ಅದನ್ನು ಬಲಗೊಳಿಸುವ, ಸೃಜನಶೀಲಗೊಳಿಸುವ ಕೆಲಸ ಆಗಬೇಕು. ನಾಡು–ನುಡಿಗೆ ತಾತ್ವಿಕ ಹಾಗೂ ಬೌದ್ಧಿಕ ತಳಹದಿಯನ್ನು ರೂಪಿಸುವ ದಿಸೆಯಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವವಾದುದು. ವಿಶ್ವವಿದ್ಯಾಲಯಗಳು ತಮ್ಮ ಜಡತೆಯಿಂದ ಹೊರಬಂದು ಅಧ್ಯಯನ, ಸಂಶೋಧನೆ ಹಾಗೂ ಬೌದ್ಧಿಕ ಚಟುವಟಿಕೆಗಳ ಕೇಂದ್ರಗಳಾಗುವುದು ಸಾಧ್ಯವಾದಲ್ಲಿ ಅದು ‘ಸುವರ್ಣ ಮಹೋತ್ಸವ’ದ ಬಹು ಅರ್ಥಪೂರ್ಣ ಆಚರಣೆಯಾಗುವುದರ ಜೊತೆಗೆ, ನಾಡಿಗೆ ಸರ್ಕಾರ ನೀಡುವ ಮಹತ್ವದ ಕೊಡುಗೆಯೂ ಆಗುವುದು.

ಕನ್ನಡ ಎನ್ನುವುದು ಬರಿ ನುಡಿಯಲ್ಲ. ಅದು ಮನಸ್ಸುಗಳನ್ನು ಬೆಸೆಯುವ ಭಾಷೆ. ಪರಧರ್ಮ ಹಾಗೂ ಪರ ವಿಚಾರಗಳನ್ನು ಸೈರಣೆಯಿಂದ ಕಾಣುವ ಧೋರಣೆ ಕನ್ನಡ ಪರಂಪರೆಯ ಉದ್ದಕ್ಕೂ ಇದೆ. ದೇಶದ ಸಂವಿಧಾನ ಪ್ರತಿಪಾದಿಸುವ ಬಹುತ್ವದ ಪರಿಕಲ್ಪನೆ ಸಾವಿರಾರು ವರ್ಷಗಳ ‘ಕನ್ನಡ ವಿವೇಕ’ದ ಪ್ರಮುಖ ಲಕ್ಷಣವೂ ಆಗಿದೆ. ಆದರೆ, ಕೆಲವು ವರ್ಷಗಳಿಂದ ಕನ್ನಡ ಭಾಷೆ ತನ್ನ ಮಾರ್ದವತೆಯನ್ನು ಕಳೆದುಕೊಳ್ಳು
ತ್ತಿರುವುದಕ್ಕೆ ಹಾಗೂ ಪರಧರ್ಮ, ಪರ ವಿಚಾರಗಳ ಕುರಿತ ಸಹಿಷ್ಣುತೆ ಕ್ಷೀಣಿಸುತ್ತಿರುವುದಕ್ಕೆ ನಿದರ್ಶನದ ರೂಪದಲ್ಲಿ ಹಲವು ಘಟನೆಗಳನ್ನು ನಾಡು ಕಂಡಿದೆ. ಈ ಘಟನೆಗಳು ನಾಡಿನ ಉದಾತ್ತ ಪರಂಪರೆಯನ್ನು ಮುಕ್ಕಾಗಿಸುವಂತಹವು ಹಾಗೂ ಕನ್ನಡದ ಜೀವಶಕ್ತಿಯನ್ನು ಗಾಸಿಗೊಳಿಸುವಂತಹವು. ಕನ್ನಡನಾಡಿನ ‘ವಿವೇಕ ಪರಂಪರೆ’ಯನ್ನು ಮರಳಿ ಜಾಗೃತಗೊಳಿಸುವ ಕೆಲಸ ಕರ್ನಾಟಕದ ‘ಸುವರ್ಣ ಮಹೋತ್ಸವ’ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ನಡೆಯಬೇಕಾಗಿದೆ. ಕನ್ನಡ ಹಾಗೂ ಕರ್ನಾಟಕವನ್ನು
ಮಾನವೀಯಗೊಳಿಸುವ ಕೆಲಸದಲ್ಲಿ ಸರ್ಕಾರದೊಂದಿಗೆ ಜನಸಾಮಾನ್ಯರೂ ಭಾಗಿಯಾಗುವುದು ನಿಜವಾದ ಅರ್ಥದಲ್ಲಿ ಕನ್ನಡ ಕಟ್ಟುವ ಕೆಲಸವಾಗಿದೆ, ನಮ್ಮನ್ನು ನಾವು ಗೌರವಿಸಿಕೊಳ್ಳುವ ರೀತಿಯೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.