ನಾವು ಉಣ್ಣುವ ಅನ್ನದಿಂದ ನಮ್ಮ ವಿಚಾರಗಳು ನಿರ್ಣಯವಾಗತೈತಿ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಲ್ಲಿ ಅಥಣಿ ಶಿವಯೋಗಿಗಳು ಅಂತಾ ಒಬ್ಬರು ಇದ್ದರು. ಬಹಳ ದೊಡ್ಡ ತಪಸ್ವಿಗಳು. ಅವರ ದೇವರ ಪೂಜೆಗೆ ಪ್ರತಿನಿತ್ಯ ಒಬ್ಬರು ಆಕಳ ಹಾಲು ತಂದುಕೊಡುತ್ತಿದ್ದರು. ಅದನ್ನು ಇವರು ದೇವರಿಗೆ ಅಭಿಷೇಕ ಮಾಡುತ್ತಿದ್ದರು. ಒಂದಿನ, ‘ಇವತ್ತು ಈ ಹಾಲು ಅಭಿಷೇಕಕ್ಕೆ ಬೇಡ’ ಎಂದು ಬದಿಗಿಟ್ಟರು. ಹಾಲು ವ್ಯರ್ಥವಾಗತೈತಿ ಅಂತ ಆಶ್ರಮದ ಸೇವಾ ಹುಡುಗ ಅದನ್ನು ಕುಡಿದುಬಿಟ್ಟ.

ಅದೇ ದಿನ ಒಬ್ಬ ಶ್ರೀಮಂತ ಭಕ್ತ ಸ್ವಾಮಿಗಳನ್ನು ನೋಡಲು ಬಂದರು. ಕೈಯಲ್ಲಿ ಬಂಗಾರದ ಉಂಗುರ ಇತ್ತು. ಸ್ವಾಮಿಗಳನ್ನು ನೋಡುವಾಗ ಉಂಗುರ ಬೇಡ ಎಂದು ಅದನ್ನು ಕಳಚಿ ಕೋಟಿನ ಜೇಬಿನಲ್ಲಿಟ್ಟು ಕೋಟನ್ನು ಗೂಟಕ್ಕೆ ನೇತು ಹಾಕಿ ಪೂಜೆಗೆ ಹೋದರು. ಪೂಜೆ ಮುಗಿಸಿ ಬಂದಾಗ ಕೋಟಿನಲ್ಲಿ ಬಂಗಾರದ ಉಂಗುರ ಇರಲಿಲ್ಲ. ಈ ವಿಚಾರವನ್ನು ಗುರುಗಳಿಗೆ ಹೇಳಿದರು. ಅದಕ್ಕೆ ಗುರುಗಳು ‘ಇವತ್ತಿನ ಹಾಲು ಯಾರು ಉಂಡಾರ?’ ಎಂದು ಕೇಳಿದರು. ಸೇವಾ ಹುಡುಗ ಉಂಡಾನ ಎನ್ನುವುದು ಪತ್ತೆಯಾಯಿತು. ಆತನನ್ನು ಕರೆದು ‘ನೀನು ಉಂಗುರ ತಗಂಡಿಯೇನು?’ ಎಂದು ಪ್ರಶ್ನಿಸಿದರು ಸ್ವಾಮೀಜಿ. ‘ಹೌದು, ತಪ್ಪಾಯ್ತು’ ಎಂದು ಹೇಳಿ ಉಂಗುರವನ್ನು ವಾಪಸು ಕೊಟ್ಟ ಹುಡುಗ. ಅದಕ್ಕೆ ಅಚ್ಚರಿಗೊಂಡ ಶ್ರೀಮಂತ ಭಕ್ತ ‘ಸ್ವಾಮೀಜಿ ಇದೇ ಹುಡುಗನೇ ಉಂಗುರ ಕದ್ದಾನಂತ ನಿಮಗೆ ಹೇಗೆ ಗೊತ್ತಾಯಿತು’ ಎಂದು ಕೇಳಿದರು. ‘ಪ್ರತಿನಿತ್ಯ ಒಬ್ಬರು ನನ್ನ ಅಭಿಷೇಕಕ್ಕೆ ಹಾಲು ತಂದುಕೊಡುತ್ತಿದ್ದರು. ಇವತ್ತು ನಾನು ಅದನ್ನು ಉಪಯೋಗಿಸಿರಲಿಲ್ಲ. ಆ ಹಾಲನ್ನು ಇವ ಕುಡುದಾನ. ನಾನು ಯಾಕೆ ಅದನ್ನು ಅಭಿಷೇಕಕ್ಕೆ ಬಳಸಲಿಲ್ಲ ಅಂದರ ಪ್ರತಿ ದಿನ ಅವರು ತಮ್ಮ ಹೊಲದಲ್ಲಿಯೇ ದನ ಮೇಯಿಸುತ್ತಿದ್ದರು. ನಿನ್ನೆ ಅವರು ಕದ್ದು ಬೇರೆಯವರ ಹೊಲದಲ್ಲಿ ಮೇಯಿಸಿದ್ದರು. ಕದ್ದು ಹುಲ್ಲು ತಿಂದ ಗುಣ ಆ ಹಾಲಿನಲ್ಲಿತ್ತು. ಅದನ್ನು ಕುಡಿದಿದ್ದರಿಂದ ಆ ಹುಡುಗನಿಗೂ ಕಳ್ಳತನದ ಭಾವ ಬಂತು. ಉಣ್ಣುವ ಅನ್ನ ಯಾವ ಭಾವದಿಂದ ಇರತೈತಲ್ಲ ಅದೇ ಭಾವ ನಮ್ಮಲ್ಲೂ ಉಂಟಾಗತೈತಿ’ ಎಂದರು. ಉಣ್ಣೋದು ಎಷ್ಟು ಮುಖ್ಯವೋ ಅದು ಯಾವುದರಿಂದ ಸಿದ್ಧವಾಗಿದ್ದು ಎನ್ನುವುದೂ ಅಷ್ಟೇ ಮುಖ್ಯ.

ಹಿತವಾದದ್ದು ಉಣ್ಣ ಬೇಕು. ಜೊತೆಗೆ ಮಿತವಾಗಿಯೂ ಉಣ್ಣಬೇಕು. ಮಿತ ಎಂದರೆ ಸ್ವಲ್ಪ ಉಣ್ಣಬೇಕು ಎಂದು ಅರ್ಥವಲ್ಲ. ಉಂಡಿದ್ದು ಕರಗಬೇಕು. ನೀವು ಎಷ್ಟು ಬೇಕಾದರೂ ಉಣ್ಣಬಹುದು. ಆದರೆ ಅದನ್ನು ಕರಗಿಸುವ ಶಕ್ತಿ ಇರಬೇಕು. ಯಾರೋ ಒಬ್ಬರು ಡಾಕ್ಟರ್ ಹತ್ತಿರ ಹೋಗಿ, ‘ನಾನು ಥಿನ್ ಆಗಬೇಕು. ಅದಕ್ಕೆ ಏನು ಮಾಡಬೇಕು’ ಅಂತ ಕೇಳಿದರಂತೆ. ‘ಥಿನ್ ಆಗಬೇಕು ಅಂದರ ತಿನ್ನೋದು ಕಡಿಮೆ ಮಾಡಬೇಕು’ ಎಂದು ಡಾಕ್ಟರ್ ಹೇಳಿದರಂತೆ.

ಹಣತೆಗೆ ಎಣ್ಣೆ ಬೇಕು ಅಂತ ಕೊಡದಲ್ಲಿ ಎಣ್ಣೆ ಸುರಿಯಬಾರದು. ಹಾಗಂತ ಹಾಕದೆಯೂ ಇರಬಾರದು. ಎಷ್ಟು ಹಾಕಬೇಕು ಅಂದರ ದೀಪ ಆರಿರಬಾರದು, ಎಣ್ಣೆ ಚೆಲ್ಲಿರಬಾರದು. ಎಣ್ಣೆ ಖಾಲಿಯೂ ಆಗಬಾರದು. ಹಾಗಿರಬೇಕು. ಅದು ದೀಪ ಬೆಳಗುವ ಕಲೆ. ಹಾಗೆಯೇ ಈ ದೇಹ ಸುಕ್ಕುಗಟ್ಟಿರಬಾರದು, ಚೈತನ್ಯದಿಂದ ಇರಲು ಬೇಕಾದಷ್ಟು ತಿನ್ನಬೇಕು. ಅದೇ ಆರೋಗ್ಯದ ಕಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.