2019ರಲ್ಲಿ ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಪಬ್ಜಿ ಮೊದಲಾದ ವಿಡಿಯೊ ಗೇಮ್ಗಳಲ್ಲಿ ಮುಳುಗಿದ ಮಗ, ಅದನ್ನು ವಿರೋಧಿಸಿದ ತಂದೆಯನ್ನೇ ಕೊಂದ ಪ್ರಕರಣ ವರದಿಯಾಗಿತ್ತು. ವರದಿಯಾದಷ್ಟೇ ಬೇಗ ಅದು ಮರೆಗೂ ಸರಿದಿತ್ತು. ಇದೀಗ ಇತಿಹಾಸ ಮರುಕಳಿಸಿದೆ. ಲಖನೌದಲ್ಲಿ ಇದೇ ಕಾರಣಕ್ಕೆ 16 ವರ್ಷದ ಹುಡುಗ ತನ್ನ ತಾಯಿಯನ್ನು ಕೊಲೆ ಮಾಡಿ, ಆನಂತರ ಅದನ್ನು ಮುಚ್ಚಿಟ್ಟು, ತಂಗಿಯನ್ನೂ ಬೆದರಿಸಿರುವುದು ವರದಿಯಾಗಿದೆ.

ಹದಿಹರೆಯದಲ್ಲಿ ರಿವಾಲ್ವರ್ ಉಪಯೋಗಿಸುವ ಧೈರ್ಯ, ಕೊಲೆಯನ್ನು ಮುಚ್ಚಿಡಲು ಆತ ಬಳಸಿದ ತಂತ್ರಗಳು, ತಾಯಿಯನ್ನೇ ಕೊಲೆ ಮಾಡುವ ಮನಃಸ್ಥಿತಿಯನ್ನು ನೋಡಿದರೆ ಎಳೆಮನಸ್ಸುಗಳ ಅಕಾಲಿಕ ‘ಪ್ರಬುದ್ಧತೆ’, ಅಸಹಜ ಕ್ರೌರ್ಯ ಅರಿವಿಗೆ ಬರುತ್ತವೆ. ಜೀವನಮೌಲ್ಯ ಎನ್ನುವ ಪದ ಪ್ರಸ್ತುತ ಸಮಾಜದಲ್ಲಿ ತನ್ನ ಮೌಲ್ಯ ಕಳೆದುಕೊಂಡಿದೆ ಎಂದೆನಿಸಿಬಿಡುತ್ತದೆ.

ವಿಡಿಯೊ ಗೇಮ್ಗಳನ್ನು ‘ಮಕ್ಕಳಾಟ’ ಎಂದು ನಾವು ಹಿರಿಯರು ದೂರ ತಳ್ಳಬಹುದು. ಆದರೆ ಅವುಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ತುರ್ತು ಈ ಹೊತ್ತಿನದು. ಪಬ್ಜಿ ಎಂಬ ಆಟವನ್ನೇ ಸ್ವಲ್ಪ ವಿವರವಾಗಿ ಗಮನಿಸೋಣ. ಈಗ ಪ್ರಚಲಿತ
ದಲ್ಲಿರುವ ‘ಬ್ಯಾಟಲ್ ಗ್ರೌಂಡ್ಸ್’, ಹೆಸರು ಬದಲಿಸಿಕೊಂಡಿರುವ ಮೊದಲಿನ ಪಬ್ಜಿ ಆಟ. ಕ್ರಾಫ್ಟನ್ ಎಂಬ ಕಂಪನಿಯ ‘ಪ್ಲೇಯರ್ ಅನ್ನೋನ್ ಬ್ಯಾಟಲ್ ಗ್ರೌಂಡ್ಸ್’ ಎಂಬ ಈ ಆಟ ಜಪಾನಿ ಸಿನಿಮಾ ‘ಬ್ಯಾಟಲ್ ರಾಯೇಲ್’ ಅನ್ನು ಆಧರಿಸಿದ ‘ವರ್ಚುವಲ್ ಗೇಮ್’. ಈ ವರ್ಷದ ಏಪ್ರಿಲ್ ವೇಳೆಗೆ ಬ್ಯಾಟಲ್ ಗ್ರೌಂಡ್ಸ್ ಆಟದ ವಿವಿಧ ಅವತರಣಿಕೆಗಳು (ವಿವಿಧ ಗಾತ್ರದ ಆ್ಯಂಡ್ರಾಯ್ಡ್, ಮೊಬೈಲ್, ಡೆಸ್ಕ್ಟಾಪ್- ಟ್ಯಾಬ್ ಇತ್ಯಾದಿ ತೆರೆಗಳಿಗೆ ಹೊಂದಿಕೊಂಡಂತೆ) ಕಂಪನಿಗೆ ನೀಡಿದ ಅಂದಾಜು ಆದಾಯ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು.

ಪಬ್ಜಿ ಕಾರ್ಪೊರೇಷನ್ನಿಂದ ಹಲವು ಟೂರ್ನಮೆಂಟ್ಗಳು ಪಬ್ಜಿ ಆಟಗಾರರಿಗೆಂದೇ ನಡೆಯುತ್ತಿವೆ. ಜಗತ್ತಿನ ಶೇಕಡ 25ರಷ್ಟು ಪಬ್ಜಿ ಬಳಕೆದಾರರು ಭಾರತೀಯ ಯುವಜನರು ಎನ್ನು ವುದು ತಂತ್ರಜ್ಞಾನದಲ್ಲಿ ದಾಪುಗಾಲಿಕ್ಕುತ್ತಿರುವ ನಮಗೆ ಅಚ್ಚರಿಯ ಮಾತೇನೂ ಅಲ್ಲ. ಹಾಗೆಯೇ ಪಬ್ಜಿ ವ್ಯಸನದ ಕಥೆಗಳೂ ವರದಿಯಾಗುತ್ತಲೇ ಇವೆ. ತಂದೆ, ತಾಯಿಯನ್ನು ಕೊಂದಾಗ ಅದು ಮೊದಲ ಪುಟದ ಸುದ್ದಿಯಾಗುತ್ತದೆ. ಇನ್ನುಳಿದಂತೆ ಇದರ ಇತರ ಪರಿಣಾಮಗಳ ಬಗೆಗೆ ಗಮನ ಹರಿಸಲು, ಏನಾದರೂ ಬದಲಾಗುವಂತೆ ಮಾಡಲು, ನಮ್ಮದೇ ‘ಅಂತರ್ಯುದ್ಧ’ಗಳಲ್ಲಿ ಮುಳುಗಿರುವ ನಮಗೆ ಸಮಯವೇ ಇಲ್ಲ!

ಜಮ್ಮುವಿನ ಫಿಟ್ನೆಸ್ ತರಬೇತುದಾರರೊಬ್ಬರು ಪಬ್ಜಿ ವ್ಯಸನದಿಂದ ಗಂಭೀರ ಮಾನಸಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾದ ಉದಾಹರಣೆಯಿದೆ. ಪಂಜಾಬ್ನಲ್ಲಿ ಹದಿಹರೆಯದ ಬಾಲಕ ತನ್ನ ಸಾಧನ ಗಳನ್ನು ‘ಅಪ್ಗ್ರೇಡ್’ ಮಾಡಿಕೊಂಡು, ತನ್ನ ಆಟದ ಬಲ ವರ್ಧಿಸಿಕೊಳ್ಳಲು ತಂದೆ-ತಾಯಿಯರ ಬ್ಯಾಂಕ್ ಖಾತೆಯಿಂದ ₹ 16 ಲಕ್ಷ ವ್ಯಯಿಸಿದ ನಿದರ್ಶನವಿದೆ. ಇವೆಲ್ಲವೂ ಸಮಾಜ, ಕೌಟುಂಬಿಕ ವ್ಯವಸ್ಥೆ, ಹಿಂಸೆ, ಹತಾಶೆ, ಚಡಪಡಿಕೆ, ಪೋಷಕತ್ವ ಇವೆಲ್ಲದರ ಬಗೆಗೆ ಹಲವು ಪ್ರಶ್ನೆಗಳನ್ನು ಏಕಕಾಲಕ್ಕೆ ಎತ್ತುವಂತಿವೆ.

ಆಡಳಿತ ವ್ಯವಸ್ಥೆಯು ಹಿಂದಿನ ಪಬ್ಜಿ ಗೇಮ್ ಅನ್ನು ನಿಷೇಧಿಸಿತ್ತು. ಆದರೆ ಅದರ ಹಿಂದಿನ ಕಾರಣ ಪಬ್ಜಿಯಿಂದ ಒದಗಬಹುದಾದ ಆರೋಗ್ಯದ ದುಷ್ಪರಿಣಾಮಗಳಲ್ಲ. ರಾಷ್ಟ್ರೀಯ ಸುರಕ್ಷತೆ ಮತ್ತು ದತ್ತಾಂಶ ಕಳವಿನ ಕಾರಣವೇ ಪ್ರಧಾನವಾಗಿತ್ತು! ಪಬ್ಜಿ ಗೇಮ್ನಂತಹ ಆಟಗಳನ್ನು ಅನುಮತಿಯಿರದೆ ಬಿಡುಗಡೆ ಮಾಡುವುದರ ಬಗ್ಗೆ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಗಳು ಮಾಡಿದ ಮನವಿ- ಗ್ರಹಗಳು ವಾಣಿಜ್ಯೋದ್ಯಮದ ಶಕ್ತಿಯ ಮುಂದೆ ಹೆಚ್ಚೇನೂ ಪರಿಣಾಮ ಬೀರಿದಂತಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ‘ಗೇಮಿಂಗ್ ಸಮಸ್ಯೆ’ ಎನ್ನುವ ವ್ಯಸನವನ್ನು ವಿವರಿಸಿದೆ. ಆಟವಾಡುವುದೇ ಜೀವನದ ಕೇಂದ್ರವಾಗುವುದು, ಆಟವಾಡುವ ಸಮಯದ ಮೇಲೆ ನಿಯಂತ್ರಣ ಇಲ್ಲದಿರುವುದು, ಅದರಿಂದ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ಅರಿವಿನ ನಡುವೆಯೂ ಮುಂದುವರಿಸುವುದು, ಹಿಂದಿದ್ದ ಹವ್ಯಾಸಗಳು- ಮನರಂಜನೆ ಎಲ್ಲವನ್ನೂ ಬದಿಗಿರಿಸಿ ಆಟದಲ್ಲೇ ಮುಳುಗುವುದು, ಆಟವಾಡಲು ಬಿಡದಿದ್ದಾಗ ಖಿನ್ನತೆ, ಆಕ್ರೋಶ, ಕಿರಿಕಿರಿ, ಆತಂಕ, ಚಡಪಡಿಕೆಯಂತಹ ‘ಹಿಂತೆಗೆತ’ದ ಪರಿಣಾಮಗಳು– ಈ ಐದು ನಮ್ಮನ್ನು ‘ಎಚ್ಚರಿಸಬೇಕಾದ ಚಿಹ್ನೆ’ಗಳು. ಇವು ಕಂಡುಬಂದವರಿಗೆ ಚಿಕಿತ್ಸೆಯ ಅಗತ್ಯವಿದೆ.

ಮಾದಕದ್ರವ್ಯ ವ್ಯಸನದಂತೆಯೇ ‘ಗೇಮಿಂಗ್ ವ್ಯಸನ’. ಇಲ್ಲಿಯೂ ಇತರ ಎಲ್ಲಾ ವ್ಯಸನಗಳಂತೆ ಮಿದುಳಿನ ಡೋಪಮಿನ್ ವ್ಯೂಹಗಳು ಆನಂದದ ಅನುಭವ ನೀಡುತ್ತವೆ. ಆನಂದಕ್ಕಾಗಿ ಯಾವುದನ್ನೂ ಸಹಿಸುವ, ಯಾರನ್ನೂ ಲೆಕ್ಕಿಸದ ಮನಃಸ್ಥಿತಿ ಸೃಷ್ಟಿಯಾಗು ತ್ತದೆ. ಮಕ್ಕಳು ಆಡುವ ಆಟದಂತೆಯೇ ನಿಜಜೀವನವನ್ನೂ ಗ್ರಹಿಸುವುದು ಸಹಜವೇ. ತಾಯಿಯನ್ನೇ ಕೊಲ್ಲುವ ಮನಃಸ್ಥಿತಿಯ ಹಿಂದಿರುವುದೂ ಇದೇ!

ಮೊಬೈಲ್ ಬಳಕೆಯ ಬಗೆಗೆ ಹಿರಿಯರಿಗೆ ಇರಬೇಕಾದ ನಿಯಂತ್ರಣ, ಮಕ್ಕಳಿಗೆ ನಿಯಂತ್ರಣ ವಿಧಿಸಬಲ್ಲ ಹಿರಿಯರ ಸಾಮರ್ಥ್ಯ, ಬದಲಿ ಆರೋಗ್ಯ ಕರ ಮನರಂಜನೆಗಳಿಗೆ ಮನವೊಲಿಕೆ, ವಿಡಿಯೊ ಗೇಮಿಂಗ್ ಬದಲು ಹೊರಗೆ ಹೋಗಿ ನಿಜ ಮನುಷ್ಯರೊಡನೆ ಆಟ ಇವು ಇಂಥ ಸಮಸ್ಯೆಗಳು ಮರುಕಳಿಸದಂತೆ ನಾವು ಅಗತ್ಯವಾಗಿ ರೂಢಿಸಿಕೊಳ್ಳಬೇಕಾದ ತಂತ್ರೋಪಾಯಗಳು.

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.