‘ಕಳ್ಳಸಾಗಣೆಗೆ ರಾಜಕೀಯ ಆಶ್ರಯ’: ಸಂಬಂಧಿಸಿದ ಎಲ್ಲರ ಮೇಲೆ ಕ್ರಮ

ನವದೆಹಲಿ, ನ. 12– ರಾಜಕೀಯ ಹಾಗೂ ಆಡಳಿತ ಹಂತಗಳಲ್ಲಿ ಅಕ್ರಮ ಸಾಗಾಣಿಕೆದಾರರ ಜೊತೆ ಸಂಬಂಧ ಹೊಂದಿರುವವರೆಲ್ಲರ ಬಗ್ಗೆಯೂ ಸರ್ಕಾರ ಉಗ್ರ ಕ್ರಮ ಕೈಗೊಳ್ಳುವುದು.

ಆಂತರಿಕ ಭದ್ರತಾ ಶಾಸನದನ್ವಯ ಅಕ್ರಮ ಸಾಗಾಣಿಕೆದಾರರ ಬಂಧನ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಅರ್ಥ ಸಚಿವ ಸುಬ್ರಹ್ಮಣ್ಯಂ ಅವರು ಇಂದು ರಾಜ್ಯಸಭೆಯಲ್ಲಿ ಈ ಕ್ರಮವನ್ನು ಘೋಷಿಸಿದರು.

ಕಾಂಗ್ರೆಸ್ ನಾಯಕರು ಕೆಲವರು ಭಾರಿ ಅಕ್ರಮ ಸಾಗಾಣಿಕೆದಾರರಿಗೆ ರಕ್ಷಣೆ ನೀಡುತ್ತಿದ್ದಾರೆಂಬ ಆಪಾದನೆಯನ್ನು ಸುಬ್ರಹ್ಮಣ್ಯಂ ನಿರಾಕರಿಸಿದರು.

ಶಿಷ್ಯ ಪರಿಗ್ರಹ ‘ಭಗವತಿಯ ಕೃಪೆ’: ಶೃಂಗೇರಿ ಶ್ರೀಗಳು

ಶೃಂಗೇರಿ, ನ. 12– ‘ಇಂಥವರು ಮಠಕ್ಕೆ ದೊರಕಿದ್ದು ಪುಣ್ಯವಿಶೇಷ’ –ಇದು ಶೃಂಗೇರಿ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ತಮ್ಮ ಶಿಷ್ಯ ಶ್ರೀ ಭಾರತೀತೀರ್ಥ ಸ್ವಾಮಿಗಳ ಬಗ್ಗೆ ಹೇಳಿದ ಮಾತು.

ನಿನ್ನೆ ಸಂಜೆ ಪ್ರವಚನ ಮಂದಿರದ ಮುಂಭಾಗದಲ್ಲಿ ಭಕ್ತವೃಂದದಿಂದ ಕಾಣಿಕೆ ಸ್ವೀಕರಿಸಿ, ಪಂಡಿತ ಸಮುದಾಯದವರನ್ನು ಸನ್ಮಾನಿಸಿ ಅನುಗ್ರಹ ಸಂದೇಶ ನೀಡಿದ ಶ್ರೀ ಜಗದ್ಗುರುಗಳು ‘ಭಾಷೆ–ಪ್ರದೇಶಗಳ ದೃಷ್ಟಿಯಿಂದ ತಮ್ಮ ಶಿಷ್ಯ ಆಯ್ಕೆ ಬಗ್ಗೆ ಅಪಾರ್ಥ ಕಲ್ಪಿಸುವುದು ಬೇಡ’ ಎಂದು ತಿಳಿಸಿದರು.

ಶಿಷ್ಯ ಪರಿಗ್ರಹವು ‘ಭಗವತಿಯ ಕೃಪೆ’ಯಿಂದ ನಡೆದುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.