ಶಿವಮೊಗ್ಗದಿಂದ ಬೆಂಗಳೂರಿಗೆ ಇತ್ತೀಚೆಗೆ ಜನಶತಾಬ್ದಿ ರೈಲು ಗಾಡಿ ಪ್ರಾರಂಭವಾಗಿದೆ. ಕೇವಲ ಐದು ಗಂಟೆಗಳಲ್ಲಿ ಊರು ಸೇರಬಹುದು ಎಂದು ಪ್ರಯಾಣಿಕರು ಸಂತೋಷಪಟ್ಟಿದ್ದಾರೆ. ಆದರೆ ಪ್ರಯಾಣ ಪ್ರಯಾಸವಾಗುತ್ತಿದೆ. ಇದೇ ತಿಂಗಳ 21ರಂದು ಸಂಜೆ 5.30ಕ್ಕೆ ಜನಶತಾಬ್ದಿ ರೈಲುಗಾಡಿಯು ಬೆಂಗಳೂರು ಬಿಟ್ಟು ರಾತ್ರಿ 10.30ಕ್ಕೆ ಶಿವಮೊಗ್ಗ ತಲುಪಬೇಕಾಗಿತ್ತು. ಆದರೆ ಮಧ್ಯದಲ್ಲಿ, ಅಂದರೆ ಬಾಣಸಂದ್ರ–ಕರಡಿ ನಿಲ್ದಾಣಗಳ ಮಧ್ಯೆ ಕ್ರಾಸಿಂಗ್ನ ಕಾರಣ ಸುಮಾರು 7 ಗಂಟೆಗೆ ರೈಲುಗಾಡಿಯನ್ನು ನಿಲ್ಲಿಸಲಾಯಿತು.ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ರೈಲು, 8 ಗಂಟೆಯವರೆಗೂ ಕದಲಲಿಲ್ಲ. ಕ್ರಾಸಿಂಗ್ನ ಕಾರಣ ಐದು–ಹತ್ತು ನಿಮಿಷಗಳ ವಿಳಂಬ ಸರ್ವೇಸಾಮಾನ್ಯ. ಆದರೆ ಅಂದು ಒಂದು ಗಂಟೆಯವರೆಗೆ ನಿಲ್ಲಿಸಿದ್ದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು.

ಈ ವೇಳೆಯಲ್ಲಿ ಪ್ರಯಾಣಿಕರ ಗೋಳು ಹೇಳತೀರದು. ಏಕೆಂದರೆ ತಡರಾತ್ರಿ ಶಿವಮೊಗ್ಗ ತಲುಪಿದರೆ, ಅಲ್ಲಿಂದ ಮನೆಗೆ ಹೋಗಲು ಆಟೊ ರಿಕ್ಷಾದವರು ಕೇಳಿದಷ್ಟು ಬಾಡಿಗೆ ಕೊಡಬೇಕಾಗುತ್ತದೆ. ಸಮಯ ನಿರ್ವಹಣೆಯ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ಮಾಡಿ, ವಿಳಂಬವಾಗದಂತೆ ವ್ಯವಸ್ಥೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.