ತಮಿಳುನಾಡು ರಾಜ್ಯದ ಕೊಯಮತ್ತೂರಿನ ಹೊರವಲಯದಲ್ಲಿ ವಡಿವೇಳಂಪಾಳಯಂ ಎಂಬ ಒಂದು ಊರು ಇದೆ. ಆ ಊರಿನ ಜನರ ಮೂಗಿಗೆ ಪ್ರತಿದಿನ ಬೆಳಿಗ್ಗೆ ರುಚಿಕರ ಇಡ್ಲಿಯ ಪರಿಮಳ ತಾಕುತ್ತದೆ! ಆ ಇಡ್ಲಿಗಳು ಸಿದ್ಧವಾಗುವುದು ಕಮಲತ್ತಾಳ್ ಅವರ ಅಡುಗೆ ಮನೆಯಲ್ಲಿ.

ಎಂಬತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಕಮಲತ್ತಾಳ್ ಅವರು ತಾವು ಸಿದ್ಧಪಡಿಸುವ ಇಡ್ಲಿಗೆ ತಲಾ ₹ 1 ನಿಗದಿ ಮಾಡಿ, ಮಾರಾಟ ಮಾಡುತ್ತಾರೆ! ಇಡ್ಲಿಯ ಜೊತೆ ಬಾಯಲ್ಲಿ ನೀರೂರಿಸುವ ಚಟ್ನಿ ಕೊಡುತ್ತಾರೆ. ಅವರು ಈ ಚಟ್ನಿಯನ್ನು ಸಿದ್ಧಪಡಿಸುವುದು ಸಾಂಪ್ರದಾಯಿಕ ರುಬ್ಬುಕಲ್ಲು ಬಳಸಿ.

ಕಮಲತ್ತಾಳ್ ಅವರು ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಇಡ್ಲಿ ಅಂಗಡಿ ಬಾಗಿಲು ತೆರೆಯುವುದು ಬೆಳಿಗ್ಗೆ 6 ಗಂಟೆಗೆ. ಒಮ್ಮೆ ಬಾಗಿಲು ತೆರೆದ ನಂತರ ಮಧ್ಯಾಹ್ನದವರೆಗೆ ಅಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತದೆ. ಅವರಲ್ಲಿ ಇಡ್ಲಿ ಸವಿಯಲು ಬರುವವರಲ್ಲಿ ಹೆಚ್ಚಿನವರು ಬಡವರಾಗಿರುವ ಕಾರಣ, ಒಂದು ಇಡ್ಲಿಗೆ ₹ 1 ನಿಗದಿ ಮಾಡಲಾಗಿದೆ. ಕಮಲತ್ತಾಳ್ ಅವರು ಇಡ್ಲಿಯನ್ನು ಬೇಯಿಸುವುದು ಮಣ್ಣಿನ ಒಲೆ ಬಳಸಿ. ಅಷ್ಟೇ ಅಲ್ಲ, ಅವರು ತಮ್ಮ ಬಹುತೇಕ ಕೆಲಸಗಳನ್ನು ಯಂತ್ರಗಳನ್ನು ಬಳಸದೆಯೇ ಮಾಡುತ್ತಾರೆ.

ಅವರ ಕಾಯಕದ ಕುರಿತ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಅವರಿಗೆ ಸಹಾಯ ಮಾಡಲು ಜನ ಮುಂದೆ ಬಂದರು. ಈಗ ಕಮಲತ್ತಾಳ್ ಅವರಲ್ಲಿ ಗ್ಯಾಸಿನ ಒಲೆ ಮತ್ತು ಮಿಕ್ಸರ್ ಗ್ರೈಂಡರ್ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.