ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.

ಆದರೆ, ಇವು ಕೋಡುಗಳಲ್ಲ. ಇವಕ್ಕಿರುವ ಎರಡು ದವಡೆಗಳಿವು. ಇವಕ್ಕೆ ಸ್ಟ್ಯಾಗ್ ಬೀಟಲ್ (Stag Beetles)ಗಳೆಂದು ಕರೆಯುತ್ತಾರೆ. ನಾನು ಇದಕ್ಕೆ ಸಾರಂಗ ಜೀರುಂಡೆ ಎಂದು ಹೆಸರಿಸಿದ್ದೇನೆ. ಲುಕ್ಯಾನಿಡೆ (Lucanidae) ಇದರ ಕುಟುಂಬ. ಇಂತಹ ಬಲಿಷ್ಠ ಭಯಾನಕ ದವಡೆಗಳಿದ್ದರೂ ಇವು ಮನುಷ್ಯರಿಗಾಗಲೀ ಅಥವ ಇತರೇ ಕೀಟಗಳಿಗಾಗಲೀ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ಇದು ಪರಭಕ್ಷಕ ಕೀಟವೂ ಅಲ್ಲ. ಈ ಪ್ರೌಢ ಜೀರುಂಡೆಗಳು ತಿನ್ನುವುದು ಕೊಳೆತ ಹಣ್ಣು ಹಂಪಲುಗಳು ಮತ್ತು ಮರದಿಂದ ಸೋರುವ ಅಂಟಿನ ರಸ ಮಾತ್ರ.

ಇದು ಒಂದು ರೀತಿಯ ಸಾಧು ಕೀಟ ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೇಕೆ ಇಷ್ಟು ಭಯಾನಕವಾದ ದವಡೆಗಳಿವೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಏಕೆಂದರೆ, ತನ್ನ ಆಹಾರ ಇತರೇ ಕೀಟಗಳು ಕಸಿದುಕೊಳ್ಳಬಾರದೆಂದು ಜಗಳವಾಡಲು ಈ ದವಡೆಗಳು ಒಂದೆಡೆ ಸಹಾಯವಾದರೇ, ಮತ್ತೊಂದೆಡೆ ಬಹಳ ಮುಖ್ಯವಾದ ದೃಶ್ಯಾವಳಿಗಳನ್ನು ನಾವು ನೋಡಬಹುದಾಗಿದೆ.

ಗಂಡು ಹೆಣ್ಣಿನ ಸಮಾಗಮ ಸಮಯದಲ್ಲಿ, ಹೆಣ್ಣು ಜೀರುಂಡೆಯು ಗಂಡನ್ನು ಆಕರ್ಷಿಸಲು ವಿಶೇಷವಾದ ರಾಸಾಯನಿಕ ವಸ್ತು (Pheromone) ವನ್ನು ದೇಹದಿಂದ ಹೊರಸೂಸುತ್ತದೆ. ಇದಕ್ಕುನುಗುಣವಾಗಿ ಆ ಸಮಯಕ್ಕೆ ಎರಡು ಅಥವ ಮೂರು ಗಂಡುಗಳೇನಾದರೂ ಎದುರಾದರೇ, ಅಲ್ಲಿ ಹೆಣ್ಣನ್ನು ಪಡೆಯಲು ಯುದ್ಧ ಶುರುವಾಗುತ್ತದೆ. ಇದು ಮನುಷ್ಯರಲ್ಲಷ್ಟೇ ಅಲ್ಲದೇ ಕೀಟಗಳಲ್ಲಿರುವುದೂ ವಿಸ್ಮಯ. ಇದನ್ನು ಕೀಟಶಾಸ್ತ್ರದಲ್ಲಿ ‘ಗಂಡುಗಳ ನಡುವಣ ಸಮರ’ (Male-Male Competition) ಎಂದು ಕರೆಯುತ್ತಾರೆ. ಈ ಯುದ್ಧದಲ್ಲಿ ಪ್ರಬಲ ಗಂಡು ತನ್ನ ದವಡೆಗಳಿಂದ ದುರ್ಬಲ ಗಂಡನ್ನು ಮೇಲಕ್ಕೆತ್ತಿ ಎಸೆಯುತ್ತದೆ. ಹೆಣ್ಣು ತಾನು ಯಾವ ಗಂಡನ್ನು ಆರಿಸಿಕೊಳ್ಳಬೇಕೆಂಬ ಆಯ್ಕೆಗೆ ಈ ಜಗಳ ಸಂಪೂರ್ಣ ಕೊನೆಗೊಳ್ಳುವವರೆಗೆ ಕಾಯುತ್ತಾ ಸಮರ ಗೆದ್ದ ಗಂಡನ್ನು ಸೂಕ್ತವಾದವನು ಎಂದು ನಿರ್ಧರಿಸಿ ಅದರೊಡನೆ ಸಮಾಗಮವಾಗುತ್ತದೆ. ಈ ಪ್ರಕ್ರಿಯೆಗೆ ‘ಹೆಣ್ಣಿನ ತೀರ್ಮಾನ’ (Female Choice) ಎನ್ನುವರು. ಸೂಕ್ತ ಗಂಡು-ಹೆಣ್ಣಿನ ಆಯ್ಕೆಗಳಿಗೆ ‘Sexual Selection in Insects’ ಎನ್ನುವ ಈ ಪ್ರಕ್ರಿಯೆ ಹಲವಾರು ಕೀಟಗಳಲ್ಲಿ ಬಹಳ ವ್ಯಾಪಕವಾಗಿಯೇ ಅಧ್ಯಯನ ನಡೆಸಿದ್ದಾರೆ ಕೀಟಶಾಸ್ತ್ರಜ್ಞರು.

ಹೆಣ್ಣು ಸಾರಂಗ ಜೀರುಂಡೆಗಳು ಎಲ್ಲಿ ಕೊಳೆತ ಮರದ ದಿಮ್ಮಿಗಳಿರುತ್ತದೋ ಅದರ ಸುತ್ತಮುತ್ತ ನೆಲದ 30 ಸೆಂಟಿಮೀಟರ್ ಆಳಕ್ಕೆ ಹೊಕ್ಕಿ ಮರಿಗಳಿಗೆ ಥಟ್ಟನೆ ಆಹಾರ ಸಿಗಲೆಂದು ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಂದ ಹೊರಹೊಮ್ಮಿದ ಮರಿಗಳು ಸುಮಾರು 4 ರಿಂದ 5 ವರ್ಷಗಳ ಕಾಲ ಕೊಳೆತ ಮರದ ದಿಮ್ಮಿನೊಳಗಿದ್ದು ಅದನ್ನು ತಿನ್ನುತ್ತಾ ನೆಲದಲ್ಲಿ ಕೋಶಾವಸ್ಥೆ ಮುಗಿಸಿ ಪ್ರೌಢ ಜೀರುಂಡೆಗಳಾಗಿ ಹೊರಬರುತ್ತವೆ. ಪ್ರೌಢ ಜೀರುಂಡೆಗಳಲ್ಲಿ ಗಂಡು ಜೀರುಂಡೆಗಿಂತ ಬಹಳ ಪುಟ್ಟದಾದ ದವಡೆಗಳು ಹೆಣ್ಣು ಕೀಟಕ್ಕಿದ್ದರೂ, ಹೆಣ್ಣು ಇಲ್ಲಿ ಶಕ್ತಿಶಾಲಿಯಾದುದು ಆಶ್ಚರ್ಯ.

ಪ್ರೌಢ ಜೀರುಂಡೆಗಳು ಕೆಲವು ತಿಂಗಳುಗಳ ಕಾಲ ಮಾತ್ರ ಜೀವಿಸುತ್ತವೆ. ಇವು ಸಾಮಾನ್ಯವಾಗಿ ನಿಶಾಚರಿಗಳು ರಾತ್ರಿ ಮಸುಕಿನಲಿ ಹಾರಾಡುತ್ತವೆ. ಸಾಮಾನ್ಯವಾಗಿ ಈ ಜೀರುಂಡೆಗಳು 5 ರಿಂದ 6 ಸೆಂ. ಮೀ ಉದ್ದವಿದ್ದರೂ ದೇಹದಿಂದ ದವಡೆಗಳೇ ಉದ್ದಾವಾಗಿರುತ್ತವೆ. ಕಪ್ಪು, ಹಳದಿ, ಹಸಿರು ಮುಂತಾದ ಹೊಳೆಯುವ ಬಣ್ಣಗಳಲ್ಲೂ ಈ ಸಾರಂಗ ಜೀರುಂಡೆ ಗಳು ನಮಗೆ ಸಿಗುತ್ತವೆ. ನಮ್ಮ ದೇಶದಲ್ಲಿ ಇವುಗಳ ಸಂಖ್ಯೆ ಕಡಿಮೆ. ಇಂಗ್ಲೇAಡ್ನಲ್ಲಿ ಇವು ಹೆಚ್ಚಿನ ಸಂಖ್ಯೆಗಳಲ್ಲಿ ಕಾಣಸಿಗುತ್ತವೆ. ಆದರೂ ಹಲವು ಪ್ರಬೇಧಗಳು ಅಳಿವಿನಂಚಿಲಿವೆ ಎಂಬ ಆತಂಕವಿದ್ದು ಇವುಗಳ ಸಂರಕ್ಷಣಾ ಕಾರ್ಯವೂ ಕೆಲವೆಡೆ ನಡೆಯುತ್ತಿದೆ.

ಕೃಷಿ ಸಂಬಂಧಿತ ಪದವಿಗಳಿಗೆ ಪ್ರವೇಶಾವಕಾಶ: ಸಿಇಟಿ ಪ್ರಾಯೋಗಿಕ ಪರೀಕ್ಷೆ

(ಲೇಖಕರು: ಕೃಷಿ ಅಧಿಕಾರಿ), ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.