ರಾ ಮಾಯಣ ಕಥೆಯ ಸಾರವನ್ನು ಹೇಳಲು ಗೊಂಬೆಗಳೇ ಬಂದರೆ.. ಆಹಾ.. ಅದಕ್ಕಿಂತ ರೋಚಕ ಅನುಭವ ಏನಿದೆ?. 1200ಕ್ಕೂ ಹೆಚ್ಚು ಕರಕುಶಲ ಗೊಂಬೆಗಳು ರಾಮಾಯಣದ ಕಥೆಯನ್ನು ಹೇಳಲು ಕಾಯುತ್ತಿವೆ!

ಈ ಬಾರಿ ದಸರಾ ರಜೆಗೆ ಚಿಣ್ಣರನ್ನು ಎಲ್ಲಿಗೆ ಕರೆದುಕೊಂಡು ಹೋಗುವುದು ಎಂದು ಚಿಂತಿಸುವ ಪೋಷಕರು ನೀವಾಗಿದ್ದರೆ, ಇಲ್ಲಿದೆ ಒಂದು ಆಯ್ಕೆ. ಈ ದಸರಾ ಗೊಂಬೆಗಳ ಉತ್ಸವ ಆಯೋಜನೆಗೊಂಡಿರುವುದು ಗರುಡಾ ಮಾಲ್ನಲ್ಲಿ. ಅಕ್ಟೋಬರ್ 13ರವರೆಗೆ ಗೊಂಬೆಗಳ ಲೋಕವೊಂದು ಇಲ್ಲಿ ಅನಾವರಣಗೊಂಡಿರುತ್ತದೆ. ಮಾಲ್ನ ಹೊರಗಡೆ ನಾಡಹಬ್ಬ ದಸರಾ ಸಂಕೇತವಾದ ಅಂಬಾರಿಯ ಪ್ರದರ್ಶನವೂ ಏರ್ಪಡಿಸಲಾಗಿದೆ.

ದುಷ್ಟರ ವಿರುದ್ಧ ಶಿಷ್ಟ ಶಕ್ತಿಯ ಅದರಲ್ಲಿಯೂ ಆದಿಶಕ್ತಿ, ಮಹಾಮಾಯಿಯ ಆರಾಧನೆಯೇ ದಸರಾ. ದಸರಾ ಹಾಗೂ ರಾಮಾಯಣದ ಕಥೆಗಳ ಎಳೆಯಲ್ಲಿ ದುಷ್ಟರ ವಿರುದ್ಧ ಶಿಷ್ಟ ಶಕ್ತಿಯ ವಿಜಯವನ್ನು ಸಂಕೇತಿಸುವ ಒಂದು ಸಾಮ್ಯತೆ ಇದೆ. ಇದರ ಜತೆಗೆ ಈ ಮಣ್ಣಿನ ಕಲಾತ್ಮಕತೆಯನ್ನು ಬಿಂಬಿಸುವ, ಕರಕುಶಲ ಶಕ್ತಿಯ ಸೂಚಕ ಎನಿಸಿರುವ ಗೊಂಬೆಗಳೂ ಸಾಂಸ್ಕೃತಿಕ ಸಂಪ್ರದಾಯದೊಂದಿಗೆ ಮಿಳಿತಗೊಂಡಿವೆ. ರಾಮಾಯಣದಲ್ಲಿ ಬರುವ ಅರಣ್ಯಕಾಂಡ, ಸುಂದರ ಕಾಂಡ ಹೀಗೆ ಅಧ್ಯಾಯ ಅನುಸಾರ ಕಥೆ ಹೇಳಿರುವುದು ವಿಶಿಷ್ಟವಾಗಿದೆ.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಸುಮಾರು 28 ನುರಿತ ಕುಶಲಕರ್ಮಿಗಳು ತಯಾರಿಸಿದ 1200ಕ್ಕೂ ಅಧಿಕ ಬಹುಚಂದದ ಗೊಂಬೆಗಳು ಇಲ್ಲಿವೆ. ಮುಖ, ಕೈ ಮತ್ತು ಪಾದಗಳಿಗೆ ಮರದ ಬೇಸ್ ಸ್ಟ್ಯಾಂಡ್, ವೈರ್ ಮತ್ತು ಫೈಬರ್ ಗ್ಲ್ಯಾಸ್ನಂಥ ವಸ್ತುಗಳನ್ನು ಬಳಸಲಾಗಿದೆ. ಗೊಂಬೆ ತಯಾರಿಕೆಯಲ್ಲಿ ದೇಸಿ ಕಲಾತ್ಮಕತೆ ಜತೆಗೆ ವೈವಿಧ್ಯ ತಂತ್ರಗಳನ್ನು ಬಳಸಿರುವ ಬಗೆಯನ್ನು ಅರಿಯಲು ಮಕ್ಕಳಿಗೆ ಒಳ್ಳೆಯ ಅವಕಾಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.