ಲಂಡನ್: ಆ್ಯಷಸ್ ಟೆಸ್ಟ್ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 135 ರನ್‌ಗಳಿಂದ ಪರಾಭವಗೊಳಿಸಿ ಸರಣಿ ಡ್ರಾ ಮಾಡಿಕೊಂಡಿದೆ.

ಇದನ್ನೂ ಓದಿ:ಆ್ಯಷಸ್: ಸೋಲಿನಿಂದ ಪಾರಾಗಲು ವೇಡ್ ಹೋರಾಟ

ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ 5ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿಇಂಗ್ಲೆಂಡ್ ಭರ್ಜರಿ ವಿಜಯ ತನ್ನದಾಗಿಸಿಕೊಂಡಿದೆ.

ನಾಲ್ಕನೇ ದಿನವಾದ ಭಾನುವಾರ 399 ರನ್‌ಗಳ ಗುರಿ ಬೆನ್ನು ಹತ್ತಿ ಬ್ಯಾಟಿಂಗ್‌ಗಿಳಿದ ಆಸ್ಟ್ರೇಲಿಯಾ ತಂಡ 77 ಓವರ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 263 ರನ್ ಗಳಿಸಿತ್ತು.

ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಶತಕ ದಾಖಲಿಸಿ ಮ್ಯಾಥ್ಯೂ ವೇಡ್ (117) ಎರಡನೇ ಇನ್ನಿಂಗ್ಸ್‌ನಲ್ಲಿಯೂ ಆಸ್ಟ್ರೇಲಿಯಾದ ಟಾಪ್ ಸ್ಕೋರರ್ ಆಗಿದ್ದಾರೆ.

ಇಂಗ್ಲೆಂಡ್ ಪರವಾಗಿ ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್ ತಲಾ ನಾಲ್ಕು ವಿಕೆಟ್ ಗಳಿಸಿದ್ದು, ಜೋ ರೂಟ್ 2 ವಿಕೆಟ್ ಗಳಿಸಿದ್ದಾರೆ.ಟೆಸ್ಟ್ ಸರಣಿ 2-2 ಸಮಬಲದೊಂದಿಗಗೆ ಕೊನೆಗೊಂಡಿದ್ದುಆ್ಯಷಸ್ ಟ್ರೋಫಿ ಆಸ್ಟ್ರೇಲಿಯಾ ತಂಡದ ಬಳಿಯೇ ಉಳಿಯಲಿದೆ.

ಸ್ಕೋರ್
ಇಂಗ್ಲೆಂಡ್ - 294 & 329
ಆಸ್ಟ್ರೇಲಿಯಾ - 225& 263 (77.0 ಓವರ್)
ಮ್ಯಾನ್ ಆಫ್ ದಿ ಮ್ಯಾಚ್ - ಜೋಫ್ರಾ ಆರ್ಚರ್
ಮ್ಯಾನ್ ಆಫ್ ದಿ ಸಿರೀಸ್ - ಬೆನ್ ಸ್ಟೋಕ್ಸ್ ಮತ್ತು ಸ್ಟೀವನ್ ಸ್ಮಿತ್

ಇದನ್ನೂ ಓದಿ:ಆ್ಯಷಸ್ : ಜೋ ಡೆನ್ಲಿ, ಬೆನ್ ಸ್ಟೋಕ್ಸ್ ಆಕರ್ಷಕ ಬ್ಯಾಟಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.