ದುಬೈ: ಕೊನೆಯ ಓವರ್‌ವರೆಗೂ ರೋಚಕ ಪೈಪೋಟಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎರಡು ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ, ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ‘ಸೂಪರ್ 4’ ಹಂತ ಪ್ರವೇಶಿಸಿತು.

‘ಬಿ’ ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿತ್ತು. ಅಫ್ಗಾನಿ ಸ್ತಾನ ‘ಬಿ’ ಗುಂಪಿನಿಂದ ಈಗಾಗಲೇ ಮುಂದಿನ ಹಂತ ಪ್ರವೇಶಿಸಿದೆ.

ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಕೀಬ್ ಅಲ್ ಹಸನ್ ಬಳಗ 20 ಓವರ್‌ಗಳಲ್ಲಿ 7ಕ್ಕೆ 183 ರನ್ ಗಳಿಸಿತು. ಲಂಕಾ ತಂಡ 19.2 ಓವರ್‌ಗಳಲ್ಲಿ 8 ವಿಕೆಟ್‌ಗೆ 184 ರನ್ ಗಳಿಸಿ ಜಯ ಸಾಧಿಸಿತು.

ಕುಸಾಲ್ ಮೆಂಡಿಸ್ (60 ರನ್, 37 ಎ., 4X4, 6X3), ನಾಯಕ ದಸುನ್ ಶನಕ (45 ರನ್, 33 ಎ., 4X3, 6X2) ಹಾಗೂ ಕೊನೆಯಲ್ಲಿ ಒತ್ತಡವನ್ನು ಮೆಟ್ಟಿನಿಂತು ಅಜೇಯ 10 ರನ್ (3 ಎ., 4X2) ಗಳಿಸಿದ ಅಸಿತ್ ಫರ್ನಾಂಡೊ ಅವರು ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಮಹದಿ ಹಸನ್ (38; 26ಎ), ಅಫಿಫ್ ಹುಸೇನ್ (39; 22ಎ) ಹಾಗೂ ಕೇವಲ ಒಂಬತ್ತು ಎಸೆತಗಳಲ್ಲಿ 24 ರನ್ ಗಳಿಸಿದ ಮೊಸಾದಿಕ್ ಅವರ ಅಬ್ಬರದಿಂದಾಗಿ ಬಾಂಗ್ಲಾ ತಂಡವು ದೊಡ್ಡ ಮೊತ್ತದತ್ತ ಹೆಜ್ಜೆ ಹಾಕಿತು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ 183 (ಮೆಹದಿ ಹಸನ್ ಮಿರಾಜ್ 38, ಶಕೀಬ್ ಅಲ್ ಹಸನ್ 24, ಅಫಿಫ್ ಹುಸೇನ್ 39, ಮೆಹಮೂದುಲ್ಲಾ 27, ಮೊಸಾದಿಕ್ ಹುಸೇನ್ ಔಟಾಗದೆ 24, ವಣಿಂದು ಹಸರಂಗಾ 41ಕ್ಕೆ2, ಕರುಣಾರತ್ನೆ 32ಕ್ಕೆ2, ಅಸಿತ್ ಫರ್ನಾಂಡೊ 51ಕ್ಕೆ1, ತೀಕ್ಷಣ 23ಕ್ಕೆ1, ದಿಲ್ಶಾನ್ ಮಧುಸಂಕಾ 26ಕ್ಕೆ1)

ಶ್ರೀಲಂಕಾ: 19.2 ಓವರ್‌ಗಳಲ್ಲಿ 8ಕ್ಕೆ 184 (ಪಥುಮ್ ನಿಸ್ಸಾಂಕ 20, ಕುಸಾಲ್ ಮೆಂಡಿಸ್ 60, ದಸುನ್ ಶನಕ 45, ಇಬಾದತ್ ಹೊಸೇನ್ 51ಕ್ಕೆ 3, ತಸ್ಕೀನ್ ಅಹ್ಮದ್ 24ಕ್ಕೆ 2, ಮುಸ್ತಫಿಜುರ್ ರೆಹಮಾನ್ 32ಕ್ಕೆ 1) ಫಲಿತಾಂಶ: ಲಂಕಾಗೆ 2 ವಿಕೆಟ್ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.