ನವದೆಹಲಿ: ಭಾರತ ಕ್ರಿಕೆಟ್ ತಂಡವನ್ನು ಹಿಂದಿಕ್ಕಿದ ಆಸ್ಟ್ರೇಲಿಯಾ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವ ಟೆಸ್ಟ್ ಮತ್ತು ಟ್ವಿಂಟಿ–20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

2019 ಮೇ ತಿಂಗಳಿಂದ ಇಲ್ಲಿಯವರೆಗಿನ ಸಾಧನೆಗಳ ಲೆಕ್ಕಾಚಾರಣದಲ್ಲಿ ಪಾಯಿಂಟ್ಸ್‌ಗಳನ್ನು ನೀಡಲಾಗಿದೆ. 2016ರಿಂದ ಸತತ ಅಗ್ರಸ್ಥಾನ ಕಾಪಾಡಿಕೊಂಡಿದ್ದ ಭಾರತ ತಂಡವು ಈಗ 114 ರೇಟಿಂಗ್‌ನೊಂದಿಗೆ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ.ಆಸ್ಟ್ರೇಲಿಯಾ (116) ಮತ್ತು ನ್ಯೂಜಿಲೆಂಡ್ (115) ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಕ್ಕೇರಿವೆ.

ಹೋದ ವರ್ಷ ಭಾರತವು ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಮಣಿಸಿತ್ತು. 71 ವರ್ಷಗಳ ನಂತರ ಕಾಂಗರೂ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತ್ತು. ಆದರೆ ಅದರ ನಂತರದ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡವು ಸತತ ಜಯ ದಾಖಲಿಸಿತು. ಚೆಂಡು ವಿರೂಪ ಅರೋಪದಲ್ಲಿ ನಿಷೇಧ ಶಿಕ್ಷೆ ಮುಗಿಸಿದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಮರಳಿ ಬಂದ ಮೇಲೆ ತಂಡದ ಶಕ್ತಿ ಹೆಚ್ಚಿತು.

ಆ್ಯಷಸ್ ಸರಣಿಯಲ್ಲಿ 2–2ರಿಂದ ಸಮಬಲ ಸಾಧಿಸಿ, ಕಪ್ ಉಳಿಸಿಕೊಂಡಿತು. ತವರಿನಲ್ಲಿನಡೆದ ಸರಣಿಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಇಂಗ್ಲಂಡ್ (105), ಶ್ರೀಲಂಕಾ (91), ದಕ್ಷಿಣ ಆಫ್ರಿಕಾ (90) ಮತ್ತು ಪಾಕಿಸ್ತಾನ (86) ತಂಡಗಳು ಕ್ರಮವಾಗಿ ನಾಲ್ಕರಿಂದ ಏಳನೇ ಸ್ಥಾನದಲ್ಲಿವೆ.

ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಅಗ್ರಸ್ಥಾನ ಕಾಪಾಡಿಕೊಂಡಿದೆ. ಭಾರತ ಎರಡನೇ ಮತ್ತು ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿವೆ.

ಆದರೆ ಟಿ20 ಮಾದರಿಯಲ್ಲಿ 27 ತಿಂಗಳುಗಳಿಂದ ಅಗ್ರಸ್ಥಾನದಲ್ಲಿ ಪಾಕಿಸ್ತಾನ ತಂಡವು ಆಘಾತ ಎದುರಿಸಿದೆ. ಆಸ್ಟ್ರೇಲಿಯಾ (278) ಅಗ್ರಸ್ಥಾನಕ್ಕೇರಿದೆ.ಇಂಗ್ಲೆಂಡ್ (268) ಮತ್ತು ಭಾರತ (266) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಪಾಕ್ ತಂಡವು (260) ನಾಲ್ಕನೇ ಸ್ಥಾನಕ್ಕೆ ಜಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.