ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ ಅವರು ತಂದೆಯ ನಿಧನದಿದಾಗಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಅರ್ಧದಲ್ಲೇ ತವರು ಕರಾಚಿಗೆ ಮರಳಬೇಕಾಗಿದೆ. ಅವರು ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯ ಕಳೆದುಕೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗುರುವಾರ ಪ್ರಕಟಿಸಿದೆ.

ಗುರುವಾರ ಬೆಳಿಗ್ಗೆ ಫಾತಿಮಾ ತಂದೆ ನಿಧನರಾಗಿದ್ದರು. ಅವರು ತವರಿಗೆ ಹಿಂತಿರುಗಲು ಪಿಸಿಬಿ ವ್ಯವಸ್ಥೆ ಮಾಡಿದೆ. ಶುಕ್ರವಾರ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದ್ದು ಆ ಪಂದ್ಯಕ್ಕೆ ಸನಾ ಅಲಭ್ಯರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಉಪನಾಯಕಿ ಮುನೀಬಾ ಅಲಿ ಅವರು ಶುಕ್ರವಾರದ ಪಂದ್ಯಕ್ಕೆ ನಾಯಕತ್ವ ವಹಿಸುವರು.

22 ವರ್ಷದ ಫಾತಿಮಾ ಸನಾ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

‘ಎ’ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಎರಡು ಪಾಯಿಂಟ್ಸ್ ಗಳಿಸಿರುವ ಪಾಕಿಸ್ತಾನವು, ಆಸ್ಟ್ರೇಲಿಯಾ, ಭಾರತ ತಂಡಗಳ ಬಳಿಕ ಮೂರನೇ ಸ್ಥಾನದಲ್ಲಿದೆ. ಸೆಮಿಫೈನಲ್ಗೇರುವ ಅವಕಾಶ ಜೀವಂತವಾಗಿಡಲು ಪಾಕಿಸ್ತಾನ ಉಳಿದ ಎರಡು ಪಂದ್ಯಗಳಲ್ಲಿ ಕಡೇಪಕ್ಷ ಒಂದನ್ನು ಗೆಲ್ಲಲೇಬೇಕಿದೆ.

ಪಾಕಿಸ್ತಾನವು ಸೋಮವಾರ ನಡೆಯುವ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.