ಬೆಂಗಳೂರು: ಇಂಗ್ಲೆಂಡ್ ತಂಡದ ಆಟಗಾರ್ತಿ ಡ್ಯಾನಿ ವೈಟ್ ಅವರು ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲಿದ್ದಾರೆ.

ವೈಟ್ ಅವರನ್ನು ಹೋದ ವರ್ಷ ನಡೆದ ಮೊದಲ ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುಪಿ ವಾರಿಯರ್ಸ್ ತಂಡವು ₹ 30 ಲಕ್ಷ ಮೌಲ್ಯಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಈಗ ಅದೇ ಮೊತ್ತಕ್ಕೆ ಆರ್ಸಿಬಿಯು ಟ್ರೇಡ್ ವಿಂಡೋ ಮೂಲಕ ಸೇರ್ಪಡೆ ಮಾಡಿಕೊಂಡಿದೆ.

‘ಬೀಸು ಹೊಡೆತಗಳ ಬ್ಯಾಟರ್ ಡ್ಯಾನಿ ವೈಟ್ ಅವರು ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರನ್ನು ಟ್ರೇಡ್ ವಿಂಡೋ ಮೂಲಕ ಸೇರ್ಪಡೆ ಮಾಡಲಾಗಿದೆ. ಯುಪಿ ವಾರಿಯರ್ಸ್ನಿಂದ ಪಡೆಯಲಲಾಗಿದೆ’ ಎಂದು ಡಬ್ಲ್ಯುಪಿಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೈಟ್ ಅವರು 164 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.