ಮುಂಬೈ: ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಆರ್‌ಸಿಬಿ ಹಾಲ್ ಆಫ್ ಫೇಮ್ ಸೇರಿದ ಮೊದಲ ಆಟಗಾರರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ತಂಡದ ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಈ ವಿಷಯವನ್ನು ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಬರೆದಿದ್ದಾರೆ.

‘ಕ್ರಿಕೆಟ್‌ಗೆ ಹೊಸ ಸ್ವರೂಪ ಕೊಟ್ಟ ಶ್ರೇಯ ಎಬಿ ಡಿವಿಲಿಯರ್ಸ್‌ಗೆ ಸಲ್ಲುತ್ತದೆ. ಎಬಿಡಿಯ ಪ್ರಯೋಗಶೀಲತೆ, ದಿಟ್ಟತನ ಮತ್ತು ಕ್ರೀಡಾಮನೋಭಾವ ಅನುಕರಣೀಯ. ಆರ್‌ಸಿಬಿಗೆ ಪ್ಲೇ ಬೋಲ್ಡ್ ಎಂಬ ತತ್ವ ತಂದಿದ್ದು ಅವರೇ’ ಎಂದು ಕೊಹ್ಲಿ ಉಲ್ಲೇಖಿಸಿದ್ದಾರೆ.

‘ಇಬ್ಬರೂ ಆಟಗಾರರನ್ನು ಹಾಲ್ ಆಫ್ ಫೇಮ್‌ನಲ್ಲಿ ಸೇರ್ಪಡೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ಆಟದ ವಿಡಿಯೊಗಳನ್ನು ನೋಡುವಾಗ ಪುಳಕವಾಗುತ್ತದೆ. ಐಪಿಎಲ್ ಯಶಸ್ವಿಯಾಗಿ ಬೆಳೆಯುವಲ್ಲಿ ಇವರಿಬ್ಬರ ಕಾಣಿಕೆ ದೊಡ್ಡದು’ ಎಂದು ಕೊಹ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.