ನವದೆಹಲಿ: ಕೊರೊನಾ ವೈರಾಣು ಹಾವಳಿಯಿಂದಾಗಿ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ದೀರ್ಘಕಾಲ ಕ್ರೀಡಾಂಗಣದಿಂದ ದೂರ ಉಳಿದ ಕಾರಣ ವಿಶ್ವಕಪ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವುದು ಸವಾಲು ಆಗಲಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ನರ್ ಪೂನಂ ಯಾದವ್ ಅಭಿಪ್ರಾಯಪಟ್ಟರು. ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸವನ್ನು ರದ್ದು ಮಾಡಿರುವುದರಿಂದ ವಿಶ್ವಕಪ್‌ಗೂ ಮುನ್ನ ಕಣಕ್ಕೆ ಇಳಿಯುವ ಅವಕಾಶವನ್ನು ಕಳೆದುಕೊಂಡಂತಾಗಿದೆ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್‌ನಲ್ಲಿ ಮುಂದಿನ ವರ್ಷದ ನಡೆಸಲು ಉದ್ದೇಶಿಸಿರುವ ಮಹಿಳೆಯರ ವಿಶ್ವಕಪ್ ಟೂರ್ನಿಗೂ ಮೊದಲು ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಯೋಜನೆ ಇತ್ತು. ಆದರೆ ಕೊರೊನಾ ಕಾರಣದಿಂದಾಗಿ ಪ್ರವಾಸ ರದ್ದುಗೊಳಸಿರುವುದಾಗಿ ಕೆಲವು ದಿನಗಳ ಹಿಂದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿತ್ತು.

‘ನಾಲ್ಕು–ಐದು ತಿಂಗಳ ವಿರಾಮದ ನಂತರ ಅಂಗಣಕ್ಕೆ ಇಳಿದರೆ ಹಿಂದಿನ ಸಾಮರ್ಥ್ಯವನ್ನು ತೋರುವುದು ಕಷ್ಟಸಾಧ್ಯ. ನಾವು ಸದ್ಯ ಫಿಟ್‌ನೆಟ್ ಕಾಪಾಡಿಕೊಳ್ಳುವತ್ತ ಗಮನ ನೀಡುತ್ತಿದ್ದೇವೆ. ತರಬೇತಿ ಆರಂಭಿಸಿ 20–25 ದಿನಗಳಲ್ಲಿ ಲಯ ಕಂಡುಕೊಳ್ಳಲಿದ್ದೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವರ್ಷ ನಡೆದ ಟಿ–20 ವಿಶ್ವಕಪ್ ನಂತರ ಪೂನಂ ಯಾದವ್‌ಗೆ ಅಭ್ಯಾಸ ಮಾಡಲು ಆಗಲಿಲ್ಲ. ಹೀಗಾಗಿ ಇಂಗ್ಲೆಂಡ್ ಪ್ರವಾಸವು ಅವರಲ್ಲಿ ಭರವಸೆ ಮೂಡಿಸಿತ್ತು. ವಿಶ್ವಕಪ್‌ನ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿರುವ ಭಾರತ ತಂಡ ಐಸಿಸಿ ಟೂರ್ನಿಯೊಂದರ ಪ್ರಶಸ್ತಿಯ ಬರವನ್ನು ನೀಗಿಸುವ ಹಂಬಲದಲ್ಲಿದೆ. ಆದರೆ ಇಂಗ್ಲೆಂಡ್ ಪ್ರವಾಸ ರದ್ದು ಮಾಡಿದ್ದರಿಂದ ಈ ಕನಸಿಗೆ ಅಡ್ಡಿಯಾಗಿದೆ ಎಂಬುದು ಪೂನಂ ಯಾದವ್ ಅಭಿಮತ.

‘ವಿಶ್ವಕಪ್ ನಮಗೆ ದೊಡ್ಡ ಸವಾಲು. ನಾನೀಗ ಬೌಲಿಂಗ್ ಅಭ್ಯಾಸ ಮಾಡಬಲ್ಲೆ. ಆದರೆ ಸ್ಪರ್ಧಾತ್ಮಕ ಕಣದಲ್ಲಿ ಆಡುವುದಕ್ಕೂ ಇಲ್ಲಿನ ಅಭ್ಯಾಸಕ್ಕೂ ಅಜಗಜಾಂತರವಿದೆ. ನಾವು ಕಳೆದ ಮಾರ್ಚ್ ತಿಂಗಳಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದೇವೆ. ದಿನ ಕಳೆದಂತೆ ವಿರಾಮದ ದಿನಗಳ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಒಂದು ಟೆಸ್ಟ್, 46 ಏಕದಿನ ಪಂದ್ಯ ಮತ್ತು 67 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಪೂನಂ ಹೇಳಿದರು.

ಮುಂದಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ ವಿಶ್ವಕಪ್ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಕಟಿಸಿಲ್ಲ. ವಿಶ್ವಕಪ್ ನಿಗದಿಯಂತೆ ನಡೆಯುವುದೋ ಇಲ್ಲವೋ ಎಂಬುದರ ಬಗ್ಗೆ ಮುಂದಿನ ಎರಡು ವಾರಗಳ ಒಳಗೆ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಕುಟುಂಬದ ಜೊತೆ ಕಳೆಯಲು ಲಭಿಸಿದ ಅವಕಾಶ
ಕೊರೊನಾ ಕಾಲದ ವಿರಾಮವು ಕುಟುಂಬದವರ ಜೊತೆ ಕಳೆಯಲು ಸಾಕಷ್ಟು ಅವಕಾಶ ನೀಡಿದೆ ಎಂದು ಪೂನಂ ಹೇಳಿದರು. ಆಗ್ರಾದಲ್ಲಿ ಕುಟುಂಬದ ಜೊತೆ ಸಂತಸದಲ್ಲಿ ಕಳೆಯುತ್ತಿರುವ ಅವರು ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದಾರೆ. ಗಾಯಗೊಳ್ಳುವ ಆತಂಕದಿಂದ ಬುಲೆಟ್ ಚಲಾಯಿಸುವ ಆಸೆಯಿಂದ ದೂರ ಉಳಿದಿದ್ದ ಅವರು ಈಗ ರೈಡಿಂಗ್ ಮಾಡುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಟಿವಿ ವೀಕ್ಷಿಸುತ್ತಿದ್ದು ರಾಮಾಯಣ ಮತ್ತು ಮಹಾಭಾರತ ನೆಚ್ಚಿನ ಕಾರ್ಯಕ್ರಮ ಎಂದು ಅವರು ಹೇಳಿದರು. ‘ಅಮ್ಮನಿಗೆ ನಾನು ಅಡುಗೆ ಕಲಿಯಬೇಕು ಎಂದು ಆಸೆ ಇತ್ತು. ಚಹಾ ಮತ್ತು ಮ್ಯಾಗಿ ಹೊರತುಪಡಿಸಿ ಬೇರೇನೂ ಮಾಡಲು ಬರುತ್ತಿರಲಿಲ್ಲ’ ಎಂದು ಅವರು ತಿಳಿಸಿದರು.

28 ವರ್ಷದ ಪೂನಂ ಮನೆಯಲ್ಲೇ ದಿನ ಕಳೆಯುತ್ತಿದ್ದರೂ ಫಿಟ್‌ನೆಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ‘ಯಾವುದೇ ಸಂದರ್ಭದಲ್ಲಿ ನಮಗೆ ಕರೆ ಬರಬಹುದು. ಆದ್ದರಿಂದ ಸದಾ ಫಿಟ್ ಆಗಿರಬೇಕು. ವಿಶ್ವಕಪ್ ನಿಗದಿಯಂತೆ ನಡೆದರೆ ಅಭ್ಯಾಸಕ್ಕೆ ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ. ನಾನು ಸದ್ಯ ಕೆಲವು ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಫ್ಲಿಪರ್ ಮತ್ತು ಟಾಪ್ ಸ್ಪಿನ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಫ್ಲಿಪರ್ ಎಸೆತವನ್ನು ರೂಢಿಸಿಕೊಳ್ಳುವುದು ಸುಲಭವಲ್ಲ. ನನಗೆ ಇದರಲ್ಲಿ ಪಾರಮ್ಯ ಸಾಧಿಸಲು ಮೂರರಿಂದ ನಾಲ್ಕು ತಿಂಗಳು ಬೇಕಾದೀತು’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.