ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.

ಬಿಸಿಸಿಐ ಕ್ರಿಕೆಟ್ ವೀಕ್ಷಕ ವಿವರಣೆಗಾರರ ಪ್ಯಾನಲ್‌ನಿಂದ ಸಂಜಯ್ ಅವರನ್ನು ಬಿಸಿಸಿಐ ಕೈಬಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾನು ಕಾಮೆಂಟ್ರಿ ಮಾಡುವುದು ಸುಯೋಗ ಎಂದು ತಿಳಿದುಕೊಂಡಿದ್ದೆ. ಆದರೆ ಅದನ್ನೆಂದೂ ನನ್ನ ಹಕ್ಕು ಎಂದು ತಿಳಿದುಕೊಂಡಿಲ್ಲ. ಉದ್ಯೋಗ ದಾತರು (ಬಿಸಿಸಿಐ) ನನ್ನನ್ನು ತಮ್ಮ ತಂಡದಲ್ಲಿ ಇಟ್ಟುಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರ ನಿಲುವನ್ನು ಗೌರವಿಸುತ್ತೇನೆ’ ಎಂದಿದ್ದಾರೆ.

ಈಚೆಗೆ ಅವರು ತಮ್ಮ ವೀಕ್ಷಕ ವಿವರಣೆಯಲ್ಲಿ ಭಾರತ ತಂಡದ ಆಟಗಾರ ರವೀಂದ್ರ ಜಡೇಜ ಅವ ರನ್ನು ‘ಚೂರು–ಪಾರು ಕ್ರಿಕೆಟಿಗ’ ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ಜಡೇಜ ಅವರು, ‘ನೀವು ಆಡಿದ ಪಂದ್ಯಗಳಿಗಿಂತ ಹೆಚ್ಚು ಸಂಖ್ಯೆಯ ಪಂದ್ಯಗಳನ್ನು ಆಡಿದ್ದೇನೆ. ಈಗಲೂ ತಂಡದಲ್ಲಿದ್ದೇನೆ. ಇನ್ನೊಬ್ಬರ ಸಾಧನೆಯನ್ನು ಗೌರಿಸುವುದನ್ನು ಕಲಿಯಿರಿ’ ಎಂದು ತಿರುಗೇಟು ನೀಡಿದ್ದು. ಇಬ್ಬರ ನಡುವಿನ ಟ್ವೀಟ್ ವಾರ್ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿ ಮಾಡಿತ್ತು.

‘ಪಿಂಕ್ ಟೆಸ್ಟ್’ ಸಂದರ್ಭದಲ್ಲಿ ಮಾಂಜ್ರೇಕರ್ ಅವರು ತಮ್ಮ ಸಹ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರ ಬಗ್ಗೆ ವ್ಯಂಗ್ಯವಾಡಿದ್ದರು. ‘ಭೋಗ್ಲೆ ದೊಡ್ಡ ಮಟ್ಟದಲ್ಲಿ ಆಡಿಲ್ಲ’ ಎಂದು ಹೇಳಿದ್ದರು. ಇದ ರಿಂದಾಗಿ ಬಹಳಷ್ಟು ಟೀಕೆಗೆ ಗುರಿಯಾಗಿ ದ್ದರು. ಇವೆರಡೂ ಪ್ರಕರಣಗಳಲ್ಲಿ ಸಂಜಯ್ ಕ್ಷಮೆ ಕೇಳಿದ್ದರು.

ಸಂಜಯ್ ಭಾರತ ತಂಡದಲ್ಲಿ 37 ಟೆಸ್ಟ್, 74 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.