ಕಾನ್ಪುರ: ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಎರಡೂ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ.

ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದ ಆಟಗಾರರ ಪೈಕಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಶ್ವಿನ್ 11ನೇ ಸಲ ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿ ಸಾಧನೆ:

ಮುತ್ತಯ್ಯ ಮುರಳೀಧರನ್: 11 (ಶ್ರೀಲಂಕಾ)

ರವಿಚಂದ್ರನ್ ಅಶ್ವಿನ್: 11 (ಭಾರತ)

ಜಾಕ್ ಕಾಲಿಸ್: 9 (ದಕ್ಷಿಣ ಆಫ್ರಿಕಾ)

ಸರ್ ರಿಚರ್ಡ್ ಹಾಡ್ಲಿ: 8 (ನ್ಯೂಜಿಲೆಂಡ್)

ಇಮ್ರಾನ್ ಖಾನ್: 8 (ಇಮ್ರಾನ್ ಖಾನ್)

ಶೇನ್ ವಾರ್ನ್: 8 (ಆಸ್ಟ್ರೇಲಿಯಾ)

ಇನ್ನು ಭಾರತೀಯರ ಪೈಕಿ ಅಶ್ವಿನ್ ನಂತರದ ಸ್ಥಾನದಲ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಇದ್ದಾರೆ.

ರವಿಚಂದ್ರನ್ ಅಶ್ವಿನ್: 11

ವೀರೇಂದ್ರ ಸೆಹ್ವಾಗ್: 5

ಸಚಿನ್ ತೆಂಡೂಲ್ಕರ್: 5

ಕಪಿಲ್ ದೇವ್: 4

ಹರಭಜನ್ ಸಿಂಗ್: 4

ರಾಹುಲ್ ದ್ರಾವಿಡ್: 4

ಮೊಹಮ್ಮದ್ ಅಜರುದ್ದೀನ್: 3

ಜಹೀರ್ ಖಾನ್: 3

ವಿರಾಟ್ ಕೊಹ್ಲಿ: 3

ಸೌರವ್ ಗಂಗೂಲಿ: 3

ಇಶಾಂತ್ ಶರ್ಮಾ: 3

ಬಾಂಗ್ಲಾದೇಶದ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಆರು ವಿಕೆಟ್ ಸಾಧನೆ ಮಾಡಿದ್ದ ಅಶ್ವಿನ್, ಕಾನ್ಪುರದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಗಳಿಸಿದ್ದರು.
.IND vs BAN: ಸ್ವದೇಶದಲ್ಲಿ ಸತತ 18ನೇ ಸರಣಿ ಜಯ ಗಳಿಸಿದ ಭಾರತ.IND vs BAN: ಬಾಂಗ್ಲಾ ವಿರುದ್ಧ 7 ವಿಕೆಟ್ ಜಯ; ಕ್ಲೀನ್ ಸ್ವೀಪ್ ಸಾಧಿಸಿದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.