ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 365 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.

ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 160 ರನ್ಗಳ ಬೃಹತ್ ಮುನ್ನಡೆ ದಾಖಲಿಸಿದೆ.

ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗುಳಿದರು. ಆದರೆ ವಿಕೆಟ್ನ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ದೊರಕದೆ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.

ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದ ಭಾರತಕ್ಕೆ ಸುಂದರ್ ಹಾಗೂ ಅಕ್ಷರ್ ಪಟೇಲ್ ನೆರವಾದರು. ನಾಲ್ಕನೇ ದಿನದಾಟದಲ್ಲೂ ಇವರಿಬ್ಬರು ಎದುರಾಳಿಗಳನ್ನು ಕಾಡಿದರು. ಅಲ್ಲದೆ ಎಂಟನೇ ವಿಕೆಟ್ಗೆ 106 ರನ್ಗಳ ಜೊತೆಯಾಟ ನೀಡಿದರು.

ಇದನ್ನೂ ಓದಿ:IND vs ENG: ರಿಷಭ್ ಪಂತ್ ಶತಕ, ಭಾರತಕ್ಕೆ 89 ರನ್ ಇನ್ನಿಂಗ್ಸ್ ಮುನ್ನಡೆ

ಈ ನಡುವೆ ಸುಂದರ್ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಅಕ್ಷರ್ ಪಟೇಲ್ ರನೌಟ್ಗೆ ಬಲಿಯಾದರು. ಅಲ್ಲದೆ ಏಳು ರನ್ ಅಂತರದಿಂದ ಚೊಚ್ಚಲ ಅರ್ಧಶತಕ ಮಿಸ್ ಮಾಡಿಕೊಂಡರು. 97 ಎಸೆತಗಳನ್ನು ಎದುರಿಸಿದ ಅಕ್ಷರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು.

ನಂತರದ ಓವರ್ನಲ್ಲೇ ಇಶಾಂತ್ ಶರ್ಮಾ (0) ಹಾಗೂ ಮೊಹಮ್ಮದ್ ಸಿರಾಜ್ (0) ಹೊರದಬ್ಬಿದ ಬೆನ್ ಸ್ಟೋಕ್ಸ್ ಭಾರತದ ಇನ್ನಿಂಗ್ಸ್ಗೆ ಇತಿ ಶ್ರೀ ಹಾಡಿದರು. ಇದರೊಂದಿಗೆ ಭಾರತ 114.4 ಓವರ್ಗಳಲ್ಲಿ 365 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಅತ್ತ 174 ಎಸೆತಗಳನ್ನುಎದುರಿಸಿದ ಸುಂದರ್ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 96 ರನ್ ಗಳಿಸಿ ಅಜೇಯರಾಗುಳಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ನಾಲ್ಕು, ಜೇಮ್ಸ್ ಆ್ಯಂಡರ್ಸನ್ ಮೂರು ಮತ್ತು ಜ್ಯಾಕ್ ಲೀಚ್ ಎರಡು ವಿಕೆಟ್ಗಳನ್ನು ಕಬಳಿಸಿದರು.

ಪಂತ್ ಭರ್ಜರಿ ಸೆಂಚುರಿ...
ಈ ಮೊದಲು ಎರಡನೇ ದಿನದಾಟದಲ್ಲಿ ರಿಷಭ್ ಪಂತ್ ಬಾರಿಸಿದ ಆಕರ್ಷಕ ಶತಕದ ಬೆಂಬಲದೊಂದಿಗೆ ಭಾರತ ತಂಡವು ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ನೆರವಾಯಿತು. ಒಂದು ಹಂತದಲ್ಲಿ ಆರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

ಇದನ್ನೂ ಓದಿ:ರಸ್ತೆ ಸುರಕ್ಷತಾ ಜಾಗೃತಿಗಾಗಿ ಕ್ರಿಕೆಟ್: ದಶಕದ ಬಳಿಕ ಮರುಕಳಿಸಿದ ವಿರೂ ಬ್ಯಾಟಿಂಗ್

ಈ ಹಂತದಲ್ಲಿ ಜೊತೆಗೂಡಿದ ಪಂತ್ ಹಾಗೂ ಸುಂದರ್ ಏಳನೇ ವಿಕೆಟ್ಗೆ 113 ರನ್ಗಳ ಅಮೂಲ್ಯ ಜೊತೆಯಾಟ ನೀಡಿದ್ದರು. 118 ಎಸೆತಗಳನ್ನು ಎದುರಿಸಿದ್ದ ಪಂತ್ 13 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿದ್ದರು.

ಭಾರತದ ಬಲಗೈ ಆರಂಭಿಕ ರೋಹಿತ್ ಶರ್ಮಾ ಸಹ 49 ರನ್ಗಳ ಉಪಯುಕ್ತ ಕೊಡುಗೆ ನೀಡಿದ್ದರು.

ಇದಕ್ಕೂ ಮೊದಲು ಅಕ್ಷರ್ ಪಟೇಲ್ (4 ವಿಕೆಟ್), ಆರ್. ಅಶ್ವಿನ್ (3 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ (2 ವಿಕೆಟ್) ದಾಳಿಗೆ ತತ್ತರಿಸಿದ್ದ ಆಂಗ್ಲರ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 205 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.