ಚೆನ್ನೈ: ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಮಂಗಳವಾರ ಇಂಗ್ಲೆಂಡ್ ಎದುರು ಜಯಿಸಿದ ನಂತರ ವಿರಾಟ್ ಕೊಹ್ಲಿ ಬಳಗವು ಡಬ್ಲುಟಿಸಿ ಫೈನಲ್ಗೆ ಮತ್ತಷ್ಟು ಸನಿಹ ಸಾಗಿದೆ. ಶೇಕಡಾವಾರು ಪಾಯಿಂಟ್ಸ್ (ಪಿಸಿಟಿ)ನಲ್ಲಿ ಭಾರತವು 69.7 ಅಂಕ ಗಳಿಸಿದೆ. ಒಟ್ಟು 460 ಅಂಕಗಳು ಖಾತೆಯಲ್ಲಿವೆ.

ಶೇ 70 ಪಿಸಿಟಿ ಇರುವ ನ್ಯೂಜಿಲೆಂಡ್ ಈಗಾಗಲೇ ಫೈನಲ್ ಅರ್ಹತೆ ಗಿಟ್ಟಿಸಿದೆ. ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಿ ಜಯಿಸಬೇಕು. ಯಾವ ಪಂದ್ಯವನ್ನೂ ಸೋಲಬಾರದು. ಆಗ ಫೈನಲ್ ದಾರಿಯು ಸುಗಮವಾಗುತ್ತದೆ.

ಚೆನ್ನೈನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಸೋತಿತ್ತು. ಆಗ ಎರಡನೇ ಸ್ಥಾನಕ್ಕೆ ಜಿಗಿದಿದ್ದ ಇಂಗ್ಲೆಂಡ್ (ಶೇ 67.0) ಮತ್ತೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ (69.2) ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.