ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡವು ಎರಡನೇ ಸ್ಥಾನಕ್ಕೆ ಇಳಿದಿದೆ.

ವೆಸ್ಟ್ ಇಂಡೀಸ್ ತಂಡದ ಎದುರಿನ ಎರಡು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಗೆದ್ದಿತು. ಆದರೆ ಎರಡನೇ ಪಂದ್ಯದಲ್ಲಿ ಮಳೆಯಿಂದಾಗಿ ಭಾರತಕ್ಕೆ ಜಯದ ಅವಕಾಶ ಕೈತಪ್ಪಿತು. ಪಂದ್ಯ ಡ್ರಾ ಆಯಿತು. ಪಂದ್ಯದ ಕೊನೆಯ ದಿನದಾಟ ಮಳೆಯಿಂದಾಗಿ ಸಂಪೂರ್ಣ ಸ್ಥಗಿತವಾಯಿತು.

ಅದರಿಂದಾಗಿ ಈ ಪಂದ್ಯದ ಪೂರ್ಣ ಪಾಯಿಂಟ್‌ಗಳು ತಂಡಕ್ಕೆ ಲಭಿಸಲಿಲ್ಲ. ಭಾರತವು ಒಟ್ಟು 16 ಅಂಕಗಳನ್ನು ಗಳಿಸಿದೆ. ಆದರೆ ಜಯದ ಶೇಕಡಾವಾರು ಲೆಕ್ಕದಲ್ಲಿ 66.67 ಗಳಿಸಿದೆ. ವಿಂಡೀಸ್ ವಿರುದ್ಧದ ಮೊದಲ ಪಂದ್ಯ ಗೆದ್ದಾಗ ಶೇ 100ರಷ್ಟು ಜಯದೊಂದಿಗೆ ಮೊದಲ ಸ್ಥಾನದಲ್ಲಿತ್ತು. ವಿಂಡೀಸ್ ತಂಡಕ್ಕೆ ಡ್ರಾ ದಿಂದಾಗಿ ನಾಲ್ಕು ಅಂಕಗಳ ಲಾಭವಾಯಿತು. ಅದರಿಂದಾಗಿ ಐದನೇ ಸ್ಥಾನಕ್ಕೇರಿದೆ.

ಹೋದ ವಾರ ಗಾಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಇದರಿಂದಾಗಿ ಶೇ 100ರಷ್ಟು ಶೇಕಡಾವಾರು ಲೆಕ್ಕದೊಂದಿಗೆ ಅಗ್ರಸ್ಥಾನಕ್ಕೇರಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (54.17) ಮತ್ತು ಇಂಗ್ಲೆಂಡ್ (29.17) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಇನ್ನಷ್ಟೇ ತಮ್ಮ ಸರಣಿಗಳನ್ನು ಆಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.