ಕಾನ್ಪುರ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಏಳು ವಿಕೆಟ್ ಅಂತರದ ಜಯ ಗಳಿಸಿದೆ.
ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಅಂತಿಮ ದಿನದಾಟದಲ್ಲಿ 95 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 17.2 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಯಶಸ್ವಿ ಜೈಸ್ವಾಲ್ ಅರ್ಧಶತಕ (51) ಗಳಿಸಿದರೆ ವಿರಾಟ್ ಕೊಹ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.
2⃣-0⃣
— BCCI (@BCCI) October 1, 2024
A memorable Test Victory 🙌#TeamIndia win the 2nd Test by 7 wickets and win the series 👏👏
Scorecard - https://t.co/JBVX2gyyPf#INDvBAN | @IDFCFIRSTBank pic.twitter.com/kxvsWxlNVw
ಬಾಂಗ್ಲಾದೇಶ 146ಕ್ಕೆ ಆಲೌಟ್...
ಈ ಮೊದಲು ಭಾರತೀಯ ಬೌಲರ್ಗಳ ನಿಖರ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಎರಡನೇ ಇನಿಂಗ್ಸ್ನಲ್ಲಿ 47 ಓವರ್ಗಳಲ್ಲಿ ಕೇವಲ 146 ರನ್ಗಳಿಗೆ ಆಲೌಟ್ ಆಯಿತು.
ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ ಗರಿಷ್ಠ 50 ರನ್ ಗಳಿಸಿದರು. ಮುಷ್ಫೀಕುರ್ ರಹೀಂ 37 ರನ್ ಗಳಿಸಿ ಔಟ್ ಆದರು.
ಭಾರತದ ಪರ ಜಸ್ಪ್ರೀತ್ ಬೂಮ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಮೂರು ವಿಕೆಟ್ಗಳನ್ನು ಗಳಿಸಿದರು.
ಕಾನ್ಪುರದಲ್ಲಿ ಸುರಿದ ಸತತ ಮಳೆಯಿಂದಾಗಿ ಮೊದಲ ಮೂರು ದಿನಗಳಲ್ಲಿ 35 ಓವರ್ಗಳ ಆಟ ನಡೆದಿತ್ತು. ಎರಡು ಹಾಗೂ ಮೂರನೇ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತು.
ಆದರೆ ನಾಲ್ಕು ಹಾಗೂ ಐದನೇ ದಿನದಾಟದಲ್ಲಿ ಆಕ್ರಮಣಕಾರಿಯಾಗಿ ಆಡುವ ಮೂಲಕ ಪಂದ್ಯ ಗೆಲ್ಲುವಲ್ಲಿ ರೋಹಿತ್ ಶರ್ಮಾ ಬಳಗವು ಯಶಸ್ವಿಯಾಗಿದೆ.
Rishabh Pant hits the winning runs 💥
— BCCI (@BCCI) October 1, 2024
He finishes off in style as #TeamIndia complete a 7-wicket win in Kanpur 👏👏
Scorecard - https://t.co/JBVX2gyyPf#INDvBAN | @IDFCFIRSTBank pic.twitter.com/Nl2EdZS9VF
ಸಂಕ್ಷಿಪ್ತ ಸ್ಕೋರ್ ಪಟ್ಟಿ:
ಬಾಂಗ್ಲಾದೇಶ ಮೊದಲ ಇನಿಂಗ್ಸ್ 233ಕ್ಕೆ ಆಲೌಟ್ (ಮೊಮಿನುಲ್ 107*, ಬೂಮ್ರಾ 50/3)
ಭಾರತ ಮೊದಲ ಇನಿಂಗ್ಸ್ 285/9 ಡಿಕ್ಲೇರ್ (ಜೈಸ್ವಾಲ್ 72, ರಾಹುಲ್ 68, ಮೆಹಿದಿ ಹಸನ್ 41/4, ಶಕೀಬ್ 78/4)
ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 146ಕ್ಕೆ ಆಲೌಟ್ (ಶದ್ಮನ್ 50, ಬೂಮ್ರಾ 17/3)
ಭಾರತ ದ್ವಿತೀಯ ಇನಿಂಗ್ಸ್ 98/3 (ಜೈಸ್ವಾಲ್ 51, ಮೆಹಿದಿ ಹಸನ್ 44/2)
ಫಲಿತಾಂಶ: ಭಾರತಕ್ಕೆ 7 ವಿಕೆಟ್ ಜಯ
Half-century in the 1st innings ✅
— BCCI (@BCCI) October 1, 2024
Half-century in the 2nd innings ✅@ybj_19 is in tremendous touch! ✨
50 partnership up for the 3rd wicket
Live - https://t.co/JBVX2gyyPf#TeamIndia | #INDvBAN | @IDFCFIRSTBank pic.twitter.com/BIetWz8KTF
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.